Advertisement
ಈ ಮೂಲಕ ಜಿಲ್ಲೆಯಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ 121 ಕ್ಕೆಏರಿಕೆಯಾಗಿದೆ.
Related Articles
Advertisement
ಇದೀಗ ಪಿ-5970 ಸಂಪರ್ಕದಿಂದಲೇ ಬರೋಬ್ಬರಿ ಏಳು ಜನರಿಗೆ ಸೋಂಕು ಧೃಡಪಟ್ಟಿದೆ. ಸೋಂಕಿತ ಪಿ-5970 ಮಹಿಳೆಯು ಖಾಸಗಿಯ ಅನುದಾನ ರಹಿತ ಹೈಸ್ಕೂಲ್‌ನ ಶಿಕ್ಷಕಿಯಾಗಿದ್ದರು. ಈ ನಡುವೆ ಶಿಕ್ಷಕಿಯು ಜೂ.8ರಂದು ಹೈಸ್ಕೂಲ್‌ಗೆ ಹೋಗಿ ಬಂದಿದ್ದಾರೆ. ಅವರ ಸಂಪರ್ಕಕ್ಕೆ ಬಂದ ಹೈಸ್ಕೂಲ್‌ನ 20ಕ್ಕೂ ಹೆಚ್ಚು ಜನರನ್ನು ತಪಾಸಣೆಗೆ ಒಳಪಡಿಸಿದ್ದು, ಪೈಕಿ ರವಿವಾರ ಏಳು ಜನ ಶಿಕ್ಷಕರಿಗೆ ಸೋಂಕು ಇರುವುದು ಧೃಡಪಟ್ಟಿದೆ.
54 ವರ್ಷದ ಪುರುಷ (ಪಿ-6833), 30 ವರ್ಷದ ಮಹಿಳೆ (ಪಿ-6834), 46 ವರ್ಷದ ಮಹಿಳೆ (ಪಿ-6835), 49 ವರ್ಷದ ಮಹಿಳೆ (ಪಿ-6836), 26 ವರ್ಷದ ಮಹಿಳೆ (ಪಿ-6837), 39 ವರ್ಷದ ಮಹಿಳೆ (ಪಿ-6841), 35 ವರ್ಷದ ಮಹಿಳೆ (ಪಿ-6842) ಇವರೆಲ್ಲರಲ್ಲಿ ಕೋವಿಡ್ 19 ಸೋಂಕಿರುವುದು ದೃಢಪಟ್ಟಿದೆ.
ಇನ್ನು, ನವಲಗುಂದ ತಾಲೂಕಿನ ಮೊರಬ ಗ್ರಾಮದ ಸೋಂಕಿತ ಪಿ-6222 (59 ವರ್ಷದ ಪುರುಷ) ಸಂಪರ್ಕದಿಂದ 8 ವರ್ಷದ ಬಾಲಕನಿಗೂ (ಪಿ-6838) ಸೋಂಕು ಧೃಡಪಟ್ಟಿದೆ. ಇನ್ನುಳಿದಂತೆ ತೀವ್ರ ಉಸಿರಾಟ ಸಮಸ್ಯೆಯಿಂದ 20 ವರ್ಷದ ಪಿ-6839 ಹಾಗೂ ಪಿ-6840 ಯುವಕರಿಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದೆ.