Advertisement

ನಳಂದ: 1200 ವರ್ಷಗಳಷ್ಟು ಹಳೆಯ ವಿಗ್ರಹಗಳು ಪತ್ತೆ

09:47 PM Feb 03, 2023 | Team Udayavani |

ಪಾಟ್ನಾ: ಬಿಹಾರದ ಪ್ರಾಚೀನ ನಳಂದ ವಿಶ್ವವಿದ್ಯಾಲಯದ ಸಮೀಪದ ಕೆರೆಯಲ್ಲಿ ಸುಮಾರು 1,200 ವರ್ಷಗಳಷ್ಟು ಹಳೆಯದಾದ ಎರಡು ಕಲ್ಲಿನ ವಿಗ್ರಹಗಳು ಪತ್ತೆಯಾಗಿದ್ದು, ಇದನ್ನು ಭಾರತೀಯ ಪುರಾತತ್ವ ಇಲಾಖೆ(ಎಎಸ್‌ಐ)ಯ ಸುಪರ್ದಿಗೆ ಪಡೆಯಲಾಗಿದೆ ಎಂದು ಎಎಸ್‌ಐ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಪಾಟ್ನಾದಿಂದ 88 ಕಿ.ಮೀ. ದೂರದ ವಿಶ್ವ ಪಾರಂಪರಿಕ ತಾಣವಾದ ಪ್ರಾಚೀನ ನಳಂದ ಮಹಾವೀರ ಬಳಿಯ ಸರ್ಲಿಚಕ್‌ ಗ್ರಾಮದ ತರ್ಸಿನ್ಹಾ ಕೆರೆಯ ಹೂಳು ತೆಗೆಯುವ ಸಂದರ್ಭದಲ್ಲಿ ಕಳೆದ ವಾರ ಎರಡು ಪುರಾತನ ಕಲ್ಲಿನ ವಿಗ್ರಹಗಳು ಪತ್ತೆಯಾಗಿದೆ.

ಮುಂದಿನ ದಿನಗಳಲ್ಲಿ ಇದನ್ನು ನಳಂದ ಮ್ಯೂಸಿಯಂನಲ್ಲಿ ಪ್ರದರ್ಶಿಸಲಾಗುವುದು ಎಂದು ಅಧಿಕಾರಿಗಳು ವಿವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next