Advertisement

ಏಕಕಾಲದಲ್ಲಿ ಎರಡು ಕೈಗಳಲ್ಲಿ ಹಸ್ತಾಕ್ಷರ ಬರೆಯುವ 12ರ ಪೋರಿ 

07:47 PM Aug 25, 2021 | Team Udayavani |

ತೆಕ್ಕಟ್ಟೈ: ಸೃಷ್ಟಿಯ ವೈಚಿತ್ರ್ಯದಲ್ಲಿ ಪ್ರತಿಯೊಬ್ಬರಲ್ಲಿಯೂ ಕೂಡ ಒಂದು ಸುಪ್ತ ಪ್ರತಿಭೆ ಅಡಗಿರುತ್ತದೆ.  ಆದರೆ ಅಂತಹ ಅದ್ಭುತ ಪ್ರತಿಭೆಗೆ ಪೂರಕವಾದ ವಾತಾವರಣ ಕಲ್ಪಿಸಿ, ಮಕ್ಕಳ ಪ್ರತಿಭೆಯ ಅನಾವರಣಕ್ಕೆ ವೇದಿಕೆ ಕಲ್ಪಿಸುವ ಜತೆಗೆ ನಿರಂತರವಾಗಿ ಪ್ರೋತ್ಸಾಹಿಸಿದಾಗ ಮಾತ್ರ ಸಾಧನೆಯ ಬೆನ್ನೇರಿ ಹೊರಡಲು ಸಾಧ್ಯವಿದೆ.

Advertisement

ಈ ನಿಟ್ಟಿನಲ್ಲಿ ಕುಂದಾಪುರ ತಾಲೂಕಿನ ಗ್ರಾಮೀಣ ಭಾಗದ ಬಿದ್ಕಲ್‌ಕಟ್ಟೆ  ಕರ್ನಾಟಕ ಪಬ್ಲಿಕ್‌ ಸ್ಕೂಲ್‌ನಲ್ಲಿ 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರತಿಭಾನ್ವಿತ ವಿದ್ಯಾರ್ಥಿನಿ ವಿಜಯಾ ಪೈ ಏಕಕಾಲದಲ್ಲಿ ತನ್ನ ಎರಡು ಕೈಗಳಿಂದ ಹಸ್ತಾಕ್ಷರ ಬರೆಯುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಕೋವಿಡ್‌ -19ನಿಂದಾಗಿ ಇಡೀ ಜಗತ್ತೇ ನಲುಗಿ ಹೋಗಿರುವ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಮನೆಯೇ ಪಾಠಶಾಲೆ ಯಾಗಿದ್ದು, ಈ ನಡುವೆ ಆನ್‌ಲೈನ್‌ ತರಗತಿಗೆ  ಹಾಜರಾಗಬೇಕಾದ ಅನಿವಾರ್ಯತೆಯ ನಡುವೆಯೂ  12ರ ಹರೆಯದ ಕುಂದಾಪುರ ಹಳ್ಳಾಡಿ ಸದಾನಂದ ಪೈ ದಂಪತಿ ಪುತ್ರಿ ವಿಜಯಾ ಪೈ ಬಾಲ್ಯದಿಂದಲೂ ಎಡಗೈ ಬರಹದ ಜತೆಗೆ ಬಲಗೈನಲ್ಲಿಯೂ ಕೂಡ ಹಸ್ತಾಕ್ಷರಗಳನ್ನು ಏಕಕಾಲದಲ್ಲಿ ಬರೆಯುವ ವಿಶೇಷ ಕೌಶಲ ಹೊಂದಿದ್ದಾಳೆ.

ಬಲಗೈನಲ್ಲಿ ಕನ್ನಡ, ಇಂಗ್ಲಿಷ್‌, ಹಿಂದಿ,ಸರಳ ಚಿತ್ರವನ್ನು, ಜತೆಗೆ ತನ್ನ ಎಡಗೈನಲ್ಲಿ ಕನ್ನಡವನ್ನು ಏಕಕಾಲದಲ್ಲಿ ಕಡಿಮೆ ಅವಧಿಯಲ್ಲಿ ಅತ್ಯಂತ ಸುಲಲಿತವಾಗಿ ಬರೆಯುವುದನ್ನು  ಕಲಿತಿದ್ದಾರೆ. ಪೋಷಕರು ಈಕೆಯನ್ನು ಪ್ರೋತ್ಸಾಹಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next