Advertisement
2023-24ನೇ ಸಾಲಿಗೆ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಶೇ. 25ರಷ್ಟು ಸೀಟು ಹಂಚಿಕೆ ಅನ್ವಯ 15,372 ಆರ್‌ಟಿಇ ಸೀಟು ಭರ್ತಿಗೆ ಶಾಲಾ ಶಿಕ್ಷಣ ಹಾಗೂ ಸಾಕ್ಷರತ ಇಲಾಖೆ ಅವಕಾಶ ನೀಡಿದರೂ ದಾಖಲಾದದ್ದು 3,363 ವಿದ್ಯಾರ್ಥಿಗಳು ಮಾತ್ರ. ಉಳಿದ 12,009 ಆರ್‌ಟಿಇ ಸೀಟುಗಳನ್ನು ಕೇಳುವವರೇ ಇಲ್ಲವಾಗಿದೆ.
15,372 ಒಟ್ಟು ಸೀಟುಗಳು ಲಭ್ಯ ಇದ್ದರೂ ಮೊದಲ ಹಂತದಲ್ಲಿ 5,105 ವಿದ್ಯಾರ್ಥಿಗಳಿಗೆ ಆರ್‌ಟಿಇ ಸೀಟು ಲಭಿಸಿದರೆ ಕೊನೆಯ ಎರಡನೇ ಹಂತದಲ್ಲಿ ಒಟ್ಟು 1,016 ಮಕ್ಕಳಿಗೆ ಪ್ರವೇಶ ಸಿಕ್ಕಿದೆ. ಆದರೆ ಮೊದಲ ಹಂತದಲ್ಲಿ ಸೀಟು ಪಡೆದ 5,105 ಮಂದಿಯ ಪೈಕಿ ಕೇವಲ 2,918 ಮಕ್ಕಳು ಮಾತ್ರ ತಮಗೆ ಸೀಟು ಸಿಕ್ಕಿರುವ ಖಾಸಗಿ ಶಾಲೆಗಳಲ್ಲಿ ಪ್ರವೇಶ ಪಡೆದರೆ, ಎರಡನೇ ಹಂತದಲ್ಲಿ ಸೀಟು ಪಡೆದವರಲ್ಲಿ ದಾಖಲಾದದ್ದು ಕೇವಲ 445 ಮಂದಿ. ಆರ್‌ಟಿಇ ಸೀಟಿಗೆ ಆಯ್ಕೆಯಾದ ಒಟ್ಟು 6,121 ವಿದ್ಯಾರ್ಥಿಗಳ ಪೈಕಿ ಪ್ರವೇಶ ಪಡೆದದ್ದು 3,363 ವಿದ್ಯಾರ್ಥಿಗಳು ಮಾತ್ರ. ಸರಕಾರ ಆರ್‌ಟಿಇಗೆ ರೂಪಿಸಿರುವ ಷರತ್ತುಗಳಿಂದಾ ಗಿಯೇ ಸೀಟು ಭರ್ತಿ ಆಗದೆ ಉಳಿದಿವೆ. ನಾಲ್ಕು ಜಿಲ್ಲೆಗಳಲ್ಲಿ ದಾಖಲಾತಿ ಶೂನ್ಯ!
ರಾಜ್ಯದ ಒಟ್ಟು 35 ಶೈಕ್ಷಣಿಕ ಜಿಲ್ಲೆಗಳ ಪೈಕಿ ಹಾಸನ, ಕೊಡಗು, ಮಧುಗಿರಿ ಹಾಗೂ ಉತ್ತರ ಕನ್ನಡದಲ್ಲಿ ಆರ್‌ಟಿಇನಡಿ ಒಬ್ಬ ವಿದ್ಯಾರ್ಥಿ ಕೂಡ ದಾಖಲಾಗಿಲ್ಲ. ಬೆಂಗಳೂರು ಉತ್ತರದಲ್ಲಿ 447 ಸೀಟುಗಳಿಗೆ ಬರೀ ಒಬ್ಬ ವಿದ್ಯಾರ್ಥಿ ದಾಖಲಾಗಿದ್ದಾನೆ. ರಾಮನಗರದಲ್ಲಿ 176 ಸೀಟುಗಳ ಪೈಕಿ 2 ಮಾತ್ರ ಭರ್ತಿ ಆಗಿವೆ.
Related Articles
ಶಿವಮೊಗ್ಗ 32, ಯಾದಗಿರಿ 9, ಮಂಡ್ಯ 13, ಗದಗ 120, ರಾಯಚೂರು 22, ಉಡುಪಿ 17, ಕೋಲಾರ 62, ಬಳ್ಳಾರಿ 38, ಬೆಳಗಾವಿ 166, ಬೆಂಗಳೂರು ದಕ್ಷಿಣ 111, ಬೀದರ್ 49, ಚಾಮರಾಜನಗರ 16, ಚಿಕ್ಕಬಳ್ಳಾಪುರ 10, ಚಿಕ್ಕಮಗಳೂರು 5, ಚಿಕ್ಕೋಡಿ 402, ಚಿತ್ರದುರ್ಗ 9, ವಿಜಯನಗರ 33, ತುಮಕೂರು 44, ಶಿರಸಿ 50, ಹಾವೇರಿ 16, ಮೈಸೂರು 388, ಕೊಪ್ಪಳ 84, ಕಲಬುರಗಿಯಲ್ಲಿ 187 ಸೀಟುಗಳು ಭರ್ತಿ ಆಗಿವೆ.
Advertisement