ನವದೆಹಲಿ:ದೆಹಲಿಯ ಲೋಕ್ ನಾಯಕ್ ಜೈ ಪ್ರಕಾಶ್ ನಾರಾಯಣ್ (ಎಲ್ ಎನ್ ಜೆಪಿ) ಆಸ್ಪತ್ರೆಯಲ್ಲಿ ಈವರೆಗೆ ಸುಮಾರು ಶಂಕಿತ 12 ಮಂದಿ ಕೋವಿಡ್ ನ ನೂತನ ರೂಪಾಂತರಿ ಒಮಿಕ್ರಾನ್ ಸೋಂಕಿಗೆ ಒಳಗಾದವರು ದಾಖಲಾಗಿರುವುದಾಗಿ ಶುಕ್ರವಾರ(ಡಿಸೆಂಬರ್ 03) ಮೂಲಗಳು ತಿಳಿಸಿರುವುದಾಗಿ ಜೀ ನ್ಯೂಸ್ ವರದಿ ಮಾಡಿದೆ.
ಇದನ್ನೂ ಓದಿ:ಕೆಲವು ಕಠಿಣ ನಿಯಮಗಳನ್ನು ಮತ್ತೆ ಜಾರಿ ಮಾಡಬೇಕಾಗಬಹುದು: ಗೌರವ್ ಗುಪ್ತಾ
ಮೂಲಗಳ ಪ್ರಕಾರ, ಗುರುವಾರ ಲೋಕ್ ನಾಯಕ್ ಜೈಪ್ರಕಾಶ್ ನಾರಾಯಣ್ ಆಸ್ಪತ್ರೆಗೆ ಒಮಿಕ್ರಾನ್ ಸೋಂಕಿಗೊಳಗಾದ ಶಂಕಿತ ಎಂಟು ಮಂದಿ ದಾಖಲಾಗಿದ್ದರು ಎಂದು ತಿಳಿಸಿದೆ. ನಾಲ್ಕು ಮಂದಿ ಇಂದು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇಬ್ಬರಿಗೆ ಕೋವಿಡ್ 19 ಪಾಸಿಟಿವ್ ವರದಿ ಬಂದಿದ್ದು, ಇನ್ನಿಬ್ಬರ ವರದಿಗಾಗಿ ಕಾಯಲಾಗುತ್ತಿದೆ ಎಂದು ಮೂಲಗಳು ಹೇಳಿದೆ. ನಾಲ್ಕು ಮಂದಿ ಶಂಕಿತರಲ್ಲಿ, ಇಬ್ಬರು ಬ್ರಿಟನ್ ನಿಂದ ಆಗಮಿಸಿದ್ದು, ಒಬ್ಬರು ಫ್ರಾನ್ಸ್ ಹಾಗೂ ಮತ್ತೊಬ್ಬರು ನೆದರ್ಲ್ಯಾಂಡ್ ನಿಂದ ಆಗಮಿಸಿರುವುದಾಗಿ ವರದಿ ವಿವರಿಸಿದೆ.
ಎಲ್ಲಾ ನಾಲ್ಕು ಮಂದಿಯ ಸ್ಯಾಂಪಲ್ಸ್ ಅನ್ನು ಜಿನೋಮ್ ಸೀಕ್ವೆನ್ಸಿಂಗ್ ಗೆ ಕಳುಹಿಸಲಾಗಿದೆ. ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿದ್ದ ಒಮಿಕ್ರಾನ್ ಕ್ಷಿಪ್ರವಾಗಿ ಹರಡಬಲ್ಲದಾಗಿದ್ದು, ಇದು ತುಂಬಾ ಅಪಾಯಕಾರಿ ವೈರಸ್ ಆಗಿರುವುದಾಗಿ ಗುರುವಾರ ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿತ್ತು.