Advertisement

ಗಯಾ: ಬಿಸಿಲ ಝಳಕ್ಕೆ 12 ಮಂದಿ ಸಾವು ;ಹಲವರಿಗೆ ಚಿಕಿತ್ಸೆ

09:16 AM Jun 18, 2019 | Team Udayavani |

ಗಯಾ: ಬಿಹಾರದ ಮುಜಾಫ‌ರಪುರದಲ್ಲಿ ಮಿದುಳು ಜ್ವರದಿಂದ ಸಾವನ್ನಪ್ಪಿರುವ ಮಕ್ಕಳ ಸಂಖ್ಯೆ ಭಾನುವಾರ 100 ದಾಟಿದ್ದು ಇನ್ನೊಂದೆಡೆ ಗಯಾದಲ್ಲಿ ವಿಪರೀತ ಬಿಸಿಲಿನ ಹೊಡೆತಕ್ಕೆ ಸಿಲುಕಿ 12 ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ.

Advertisement

ಗಯಾದಲ್ಲಿ ವಿಪರೀತ ತಾಪಮನಾ ದಾಖಲಾಗಿದ್ದು,ಜನರು ಮನೆಗಳಿಂದ ಹೊರಬರುವುದು ಕಷ್ಟವಾಗಿದೆ. ಭೂಮಿ ಕಾದ ಕೆಂಡದಂತಾಗಿದೆ.

ಗಯಾದ ಅನುರಾಗ್‌ ನಾರಾಯಣ ಮಾಗಧ್‌ ಮೆಡಿಕಲ್‌ ಕಾಲೇಜಿನಲ್ಲಿಚಿಕಿತ್ಸೆಗೆ ದಾಖಲಾಗಿದ್ದ 12 ಮಂದಿ ಸಾವನ್ನಪ್ಪಿದ್ದಾರೆ. ಆ ಪೈಕಿ 7 ಮಂದಿ ಗಯಾದವರಾಗಿದ್ದು, ಇಬ್ಬರು ಔರಂಗಾಬಾದ್‌ ಮತ್ತುತಲಾ ಓರ್ವ ರು ಶೇಖ್‌ಪುರ ಮತ್ತು ಚಾತ್ರಾದವರಾಗಿದ್ದಾರೆ.

25 ಮಂದಿ ಅಸ್ವಸ್ಥಗೊಂಡು ಆಸ್ಪತ್ರೆಗಳಿಗೆ ದಾಖಲಾಗಿದ್ದು ಚಿಕಿತ್ಸೆ ನೀಡಿ ಅವರನ್ನು ಸಹಜತೆಗೆ ತರಲು ವೈದ್ಯರು ಪ್ರಯತ್ನ ಮುಂದುವರಿಸಿದ್ದಾರೆ.

ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್‌ ಅವರು ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಜನರು ಆದಷ್ಟು ಮನೆಗಳಿಂದ ಹೊರಗೆ ಬರಬಾರದು. ಅತೀಯಾದ ಉಷ್ಣತೆಯಿಂದಾಗಿ ಮಿದುಳಿನ ಮೇಲೆ ಪರಿಣಾಮ ಬೀರಿ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದು ಜನರಲ್ಲಿ ಮನವಿ ಮಾಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next