ಚಾಮರಾಜನಗರ: ಜಿಲ್ಲೆಯಲ್ಲಿ ಸೋಮವಾರ 12 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಸಮಾಧಾನಕರ ವಿಷಯವೆಂದರೆ ಇಂದು 20 ಮಂದಿ ಕೋವಿಡ್ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 90ಕ್ಕೆ ತಗ್ಗಿದೆ.
ಜಿಲ್ಲೆಯಲ್ಲಿ ಒಟ್ಟು ದೃಢೀಕೃತ ಪ್ರಕರಣಗಳು 114 ಆಗಿವೆ. ಆದರೆ ಇದರಲ್ಲಿ ಒಟ್ಟಾರೆ 24 ಮಂದಿ ಗುಣಮುಖರಾಗಿರುವುದರಿಂದ 90 ಜನರು ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಮವಾರ 412 ಮಾದರಿಗಳ ಪರೀಕ್ಷೆಯಲ್ಲಿ12 ಹೊಸ ಪಾಸಿಟಿವ್ ಪ್ರಕರಣಗಳು ದೃಢವಾಗಿದೆ.
12 ಪ್ರಕರಣಗಳಲ್ಲಿ ಒಂಬತ್ತು ಪ್ರಕರಣಗಳು ಗುಂಡ್ಲುಪೇಟೆ ಪಟ್ಟಣ ಮತ್ತು ತಾಲೂಕಿಗೆ ಸೇರಿವೆ. ಎರಡು ಪ್ರಕರಣಗಳು ಕೊಳ್ಳೇಗಾಲ ತಾಲೂಕಿನದ್ದಾಗಿವೆ. ಒಂದು ಪ್ರಕರಣ ಚಾಮರಾಜನಗರ ತಾಲೂಕಿನಿಂದ ವರದಿಯಾಗಿದೆ.
ರೋಗಿ ಸಂಖ್ಯೆ 104: 34 ವರ್ಷದ ಯುವಕ ಚಾಮರಾಜನಗರ ತಾಲೂಕಿನ ಅಮ್ಮನಪುರ (ಬೆಂಗಳೂರಿನಿಂದ ಬಂದವರು), ರೋಗಿ ಸಂಖ್ಯೆ 105: 50 ವರ್ಷದ ಪುರುಷ, ಗುಂಡ್ಲುಪೇಟೆ ತಾಲೂಕಿನ ದೊಡ್ಡ ತುಪ್ಪೂರು, (ಕೇರಳ ಮತ್ತು ಬೆಂಗಳೂರಿಗೆ ಪ್ರಯಾಣ), ಸಂಖ್ಯೆ 106: 6 ವರ್ಷದ ಬಾಲಕ, ಗುಂಡ್ಲುಪೇಟೆ ಪಟ್ಟಣ (ರೋಗಿಯ ಸಂಪರ್ಕಿತ), ಸಂಖ್ಯೆ 107: 38 ವರ್ಷದ ಮಹಿಳೆ, ಗುಂಡ್ಲುಪೇಟೆ ಪಟ್ಟಣ (ರೋಗಿಯ ಸಂಪರ್ಕಿತ), ಸಂಖ್ಯೆ 108: 64 ವರ್ಷದ ವೃದ್ಧ, ಗುಂಡ್ಲುಪೇಟೆ ಪಟ್ಟಣ (ರೋಗಿಯ ಸಂಪರ್ಕಿತ), ಸಂಖ್ಯೆ 109: 18 ವರ್ಷದ ಯುವಕ, ಗುಂಡ್ಲುಪೇಟೆ ಪಟ್ಟಣ (ಬೆಂಗಳೂರು ಪ್ರಯಾಣ), ರೋಗಿ ಸಂಖ್ಯೆ 110: 40 ವರ್ಷದ ಮಹಿಳೆ, ಗುಂಡ್ಲುಪೇಟೆ ತಾ. ಮಡಹಳ್ಳಿ, ಸಂಖ್ಯೆ 111: 13 ವರ್ಷದ ಬಾಲಕಿ, ಗುಂಡ್ಲುಪೇಟೆ ಪಟ್ಟಣ (ರೋಗಿ ಸಂಪರ್ಕಿತ), ಸಂಖ್ಯೆ 112: 20 ವರ್ಷದ ಯುವತಿ, ಗುಂಡ್ಲುಪೇಟೆ ಪಟ್ಟಣ (ರೋಗಿ ಸಂಪರ್ಕಿತ). ಸಂಖ್ಯೆ 113: 26 ವರ್ಷದ ಯುವಕ, ಗುಂಡ್ಲುಪೇಟೆ ತಾ. ದೊಡ್ಡ ತುಪ್ಪೂರು (ಕೇರಳದಿಂದ ಬಂದವರು), ಸಂಖ್ಯೆ 114: 32 ವರ್ಷದ ಯುವತಿ, ಕೊಳ್ಳೇಗಾಲ ತಾ. ಕುಂತೂರು (ಬೆಂಗಳೂರಿನಿಂದ ಬಂದವರು), ರೋಗಿ ಸಂಖ್ಯೆ 115: 25 ವರ್ಷದ ಯುವತಿ, ಕೊಳ್ಳೇಗಾಲದ ಮುಡಿಗುಂಡ (ಮೈಸೂರು ಜಿಲ್ಲೆಯಿಂದ ಬಂದವರು).
ಇವರೆಲ್ಲರಿಗೂ ಚಾಮರಾಜನಗರದ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.