Advertisement

ಜಗದಾಳ ಗ್ರಾಮದಲ್ಲಿ ಒಂದೇ ಕುಟುಂಬದ 12 ಮಂದಿಗೆ ಕೋವಿಡ್: ಬೆಚ್ಚಿಬಿದ್ದ ಗ್ರಾಮಸ್ಥರು

08:57 AM Jun 08, 2021 | Team Udayavani |

ಬನಹಟ್ಟಿ: ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಜಗದಾಳ ಗ್ರಾಮದ ಒಂದೇ ಕುಟುಂಬದ 12 ಜನರಿಗೆ ಕೋವಿಡ್ ಸೋಂಕು ತಗುಲಿದ್ದರಿಂದ ಇಡೀ ಗ್ರಾಮ ಬೆಚ್ಚಿ ಬೀಳುವಂತಾಗಿದೆ.

Advertisement

ಜಗದಾಳ ಗ್ರಾಮದ ವಾರ್ಡ್ ನಂ. 3 ರಲ್ಲಿನ ಕಚ್ಚು ತೋಟದ ವಸತಿಯಲ್ಲಿ ಸೋಮವಾರ ಒಂದೇ ದಿನದಂದು ಒಂದೇ ಕುಟುಂಬದ 12 ಜನರಲ್ಲಿ ಕೋವಿಡ್ ದೃಢಪಟ್ಟಿರುವುದು ಆತಂಕದ ವಿಷಯವಾಗಿದೆ. ಇವರಲ್ಲಿ 10 ವರ್ಷದೊಳಗಿನ ಆರು ಮಕ್ಕಳಿಗೆ ಕೋವಿಡ್ ಪಾಸಿಟಿವ್ ಆಗಿದೆ.

ಕೋವಿಡ್ ಎರಡನೇ ಅಲೆಯು ಈಗಷ್ಟೇ ಇಳಿಮುಖ ಕಾಣಿಸುವಷ್ಟರಲ್ಲಿಯೇ ಗ್ರಾಮೀಣ ಪ್ರದೇಶದಲ್ಲಿ ಮತ್ತೇ ಈ ರೀತಿ ಬೆಳವಣಿಗೆ ಆತಂಕಕಾರಿಯಾಗಿದೆ. ಕಂದಾಯ, ಆರೋಗ್ಯ ಹಾಗು ಗ್ರಾಮ ಪಂಚಾಯಿತಿ ಅಧಿಕಾರಿಗಳು ಗ್ರಾಮದಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

ಇದನ್ನೂ ಓದಿ:ಗಂಗಾವತಿ; ಮಸೀದಿ ಮಳಿಗೆಗಳ ನಿರ್ಮಾಣಕ್ಕೆ ಗ್ರೀನ್ ಸಿಗ್ನಲ್, ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ

ಜೂ.14 ವರೆಗೆ ಸರ್ಕಾರ ಲಾಕ್‌ಡೌನ್ ವಿಸ್ತರಣೆ ಮಾಡಿದೆ. ಗ್ರಾಮದ ಎಲ್ಲರೂ ಯಾವದೇ ಕಾರಣಕ್ಕೂ ಮನೆ ಬಿಟ್ಟು ಹೊರಬರಬೇಡಿ. ಸರ್ಕಾರದ ನಿಯಮ ಪಾಲನೆಯೊಂದಿಗೆ ಕೋವಿಡ್ ಹೊಡೆದೋಡಿಸಲು ಸಹಕರಿಸಿ, ಯಾವುದೇ ಆತಂಕಪಡುವ ಅಗತ್ಯವಿಲ್ಲವೆಂದು ಜಮಖಂಡಿ ಉಪವಿಭಾಗಾಧಿಕಾರಿ ಡಾ. ಸಿದ್ದು ಹುಲ್ಲೊಳ್ಳಿ ತಿಳಿಸಿದರು.

Advertisement

ಜಗದಾಳ ಗ್ರಾಮದಾದ್ಯಂತ ಕೋವಿಡ್ ನಿಯಂತ್ರಣಕ್ಕೆ ಕಟ್ಟೆಚ್ಚರ ವಹಿಸಿದ್ದೇವೆ. ತೋಟದಲ್ಲಿನ ಒಂದೇ ಕುಟುಂಬದಲ್ಲಿ ಒಮ್ಮೆಲೆ 12 ಕೇಸ್ ವಿಚಿತ್ರವಾಗಿದೆ. ಗ್ರಾಮಸ್ಥರು ಭಯಪಡಬೇಡಿ. ಸರ್ಕಾರದ ನಿಯಮದಂತೆ ಲಾಕ್‌ಡೌನ್ ನಿಯಮ ಪಾಲಿಸುವಂತೆ ಗ್ರಾಮ ಅಭಿವೃದ್ಧಿ ಅಧಿಕಾರಿ ರಾಜಶೇಖರ ಗುದಗೇನ್ನವರ ಸಲಹೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next