ನವದೆಹಲಿ: ಅಯೋಧ್ಯೆಯ ಸರಯೂ ನದಿಯಲ್ಲಿ ಸ್ನಾನ ಮಾಡುತ್ತಿದ್ದ 12 ಮಂದಿ ನೀರಿನ ಸೆಳೆತಕ್ಕೆ ಸಿಲುಕಿ ಮುಳುಗಿ ಹೋಗಿರುವ ಘಟನೆ ಗುಪ್ತಾರ್ ಘಾಟ್ ನಲ್ಲಿ ಶುಕ್ರವಾರ(ಜುಲೈ 09) ನಡೆದಿದೆ.
ಇದನ್ನೂ ಓದಿ:ಪ್ರಿಯಕರನ ಮನೆಯಲ್ಲೇ ವಿವಾಹಿತ ಯುವತಿ ಸಾವು : ಯುವತಿ ಪೋಷಕರಿಂದ ಪ್ರಿಯಕರನ ಮನೆಗೆ ಬೆಂಕಿ
ಇವರೆಲ್ಲಾ ಒಂದೇ ಕುಟುಂಬದವರಾಗಿದ್ದು, ಸರಯೂ ನದಿಯಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ನೀರಿನ ಸೆಳೆತ ಆಳಕ್ಕೆ ಎಳೆದೊಯ್ದಿರುವುದಾಗಿ ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಪೊಲೀಸರ ಮಾಹಿತಿ ಪ್ರಕಾರ, ಮುಳುಗು ತಜ್ಞರು ರಕ್ಷಣಾ ಕಾರ್ಯದಲ್ಲಿ ತೊಡಗಿರುವುದಾಗಿ ತಿಳಿಸಿದ್ದಾರೆ.
ಶೋಧ ಮತ್ತು ರಕ್ಷಣಾ ಕಾರ್ಯ ಮುಂದುವರಿದಿದ್ದು, ಆರು ಮಂದಿಯನ್ನು ರಕ್ಷಿಸಲಾಗಿದ್ದು, ಆರು ಮಂದಿಯ ಶವ ಸಿಕ್ಕದ್ದು, ನಾಪತ್ತೆಯಾಗಿರುವ ಮೂವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ವರದಿ ವಿವರಿಸಿದೆ. ಆಗ್ರಾದಿಂದ ಒಂದೇ ಕುಟುಂಬದ 15 ಮಂದಿ ಅಯೋಧ್ಯಾ ಧಾಮ್ ಗೆ ಭೇಟಿ ನೀಡಿದ್ದರು.
ಈ ಸಂದರ್ಭದಲ್ಲಿ ಗುಪ್ತಾರ್ ಘಾಟ್ ನಲ್ಲಿರುವ ಸರಯೂ ನದಿಯಲ್ಲಿ ಸ್ನಾನ ಮಾಡುತ್ತಿದ್ದ ಸಂದರ್ಭದಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ 12 ಮಂದಿ ನೀರಿನ ಸೆಳೆತಕ್ಕೆ ಕೊಚ್ಚಿಕೊಂಡು ಹೋಗಿರುವುದಾಗಿ ವರದಿ ತಿಳಿಸಿದೆ.