Advertisement

ಎಚ್‌.ಡಿ.ಕೋಟೆ:ಕಾವೇರಿ ಬ್ಯಾಂಕ್‌ಗೆ ಕನ್ನ; 12ಕೆ.ಜಿ ಚಿನ್ನ ಕಳವು 

11:50 AM Sep 04, 2018 | |

ಮೈಸೂರು: ಎಚ್‌.ಡಿ.ಕೋಟೆಯ ಕ್ಯಾತನಹಳ್ಳಿಯಲ್ಲಿರುವ ಕಾವೇರಿ ಗ್ರಾಮೀಣ ಬ್ಯಾಂಕ್‌ಗೆ ದರೋಡೆಕೋರರು ಸೋಮವಾರ ರಾತ್ರಿ ಕನ್ನ ಹಾಕಿದ್ದು ಭಾರೀ ದರೋಡೆ ನಡೆಸಿದ್ದಾರೆ. 

Advertisement

ಬ್ಯಾಂಕ್‌ನಲ್ಲಿದ್ದ 12 ಕೆ.ಜಿಯಷ್ಟು ಚಿನ್ನಾಭರಣಗಳು, 5 ಲಕ್ಷಕ್ಕೂ ಹೆಚ್ಚು ಹಣವನ್ನು ದೋಚಿದ್ದಾರೆ. 

ಬ್ಯಾಂಕ್‌ನ ಹಿಂಬದಿಯ ಕಿಟಕಿಯ ಸರಳುಗಳನ್ನು ಗ್ಯಾಸ್‌ ಕಟ್ಟರ್‌ ಬಳಸಿ ಕತ್ತರಿಸಿ ಕಳ್ಳರು ಒಳನುಗ್ಗಿದ್ದಾರೆ. ಸೈರನ್‌, ಸಿಸಿಟಿವಿಗಳನ್ನು ಧ್ವಂಸಗೈದು ಕೃತ್ಯ ಎಸಗಿರುವುದಾಗಿ ವರದಿಯಾಗಿದೆ. 

ಎಸ್‌ಪಿ ಸಹಿತ ಪೊಲೀಸ್‌ ಅಧಿಕಾರಿಗಳು ಸ್ಥಳಕ್ಕಾಗಮಿಸಿದ್ದು ತನಿಖೆ ನಡೆಸುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next