Advertisement

ಬಾಂಗ್ಲಾ ಮಸೀದಿ ಮೇಲೆ ಹೆಫಾ ಜತ್‌- ಇ-ಇಸ್ಲಾಮ್‌ ಉಗ್ರಗಾಮಿಗಳ ದಾಳಿ

01:52 AM Apr 11, 2021 | Team Udayavani |

ಢಾಕಾ: ಬಾಂಗ್ಲಾದೇಶದ ಗಾಯ್ಬಂಧ ಜಿಲ್ಲೆಯ ಮಸೀದಿಯೊಂದರ ಮೇಲೆ ಹೆಫಾ ಜತ್‌- ಇ-ಇಸ್ಲಾಮ್‌ ಉಗ್ರಗಾಮಿಗಳು ದಾಳಿ ಮಾಡಿದ್ದಾರೆ ಎನ್ನಲಾಗಿದೆ. ಘಟನೆ ಯಲ್ಲಿ 12 ಮಂದಿ ಗಾಯಗೊಂಡಿದ್ದಾರೆ. ದಾಳಿಗೆ ನಿಖರ ಕಾರಣ ತಿಳಿದುಬಂದಿಲ್ಲ.

Advertisement

ಗಾಯ್ಬಂಧ ಜಿಲ್ಲೆಯ ಸುಂದರ್‌ಗಂಜ್‌ ಪ್ರದೇಶದ ಸಿಲಾಮೊನಿ ಮಸೀದಿಯಲ್ಲಿ ಶುಕ್ರವಾರ ಸಂಜೆಯ ಪ್ರಾರ್ಥನೆ ಮುಗಿದ ಮೇಲೆ ದಿಢೀರ್‌ ದಾಳಿ ನಡೆದಿದೆ. ಈ ವೇಳೆ ಅಲ್ಲಿನ ಇಮಾಮ್‌ ಆಗಿರುವ ಮೊತ್ಲಾಬುದ್ದೀನ್‌ರ ಮೊಬೈಲನ್ನು ಕಿತ್ತುಕೊಂಡು, ಪ್ರಾರ್ಥನೆಯಲ್ಲಿ ಭಾಗವಹಿಸಿದ್ದ ಜನರಿಗೆ ಹೊರ ಹೋಗುವಂತೆ ದಾಳಿಕೋರರು ಬೆದರಿಸಿದ್ದಾರೆ. ಇವರೆಲ್ಲ ಹೆಫಾಜತ್‌ ಚಟುವಟಿಕೆಯಲ್ಲಿ ದೀರ್ಘ‌ಕಾಲದಿಂದ ಪಾಲ್ಗೊಂಡವರು ಎಂದು ಮೊತ್ಲಾಬುದ್ದೀನ್‌ ಹೇಳಿದ್ದಾರೆ.

ಆದರೆ ಪೊಲೀಸರು ಇದನ್ನು ನಿರಾಕರಿಸಿದ್ದಾರೆ. ಅವರ ಪ್ರಕಾರ ಮಸೀದಿಯ ಆಡಳಿತ ಮಂಡಳಿಯೊಂದಿಗಿನ ಭಿನ್ನಮತದಿಂದ ಈ ದಾಳಿಯಾಗಿದೆ. ಇದಕ್ಕೂ ಹೆಫಾಜತ್‌ ಉಗ್ರ ಸಂಘಟನೆಗೂ ಸಂಬಂಧವಿಲ್ಲ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next