ಹೊಸದಿಲ್ಲಿ: ಭಾರತೀಯ ಬಾಹ್ಯಾಕಾಶ ಸಂಸ್ಥೆ ಹಾಗೂ ಐಎಎಫ್ನ ಅಂಗಸಂಸ್ಥೆಯಾದ ಇನ್ಸ್ಟಿಟ್ಯೂಟ್ ಆಫ್ ಏರೋಸ್ಪೇಸ್ ಮೆಡಿಸಿನ್ (ಐಎಎಂ) ಜಂಟಿಯಾಗಿ, 2020ರಲ್ಲಿ ಮಾನವ ಸಹಿತ ಅಂತರಿಕ್ಷಯಾನ ಕೈಗೊಳ್ಳಲಿರುವುದು ಎಲ್ಲರಿಗೂ ತಿಳಿದ ವಿಚಾರ.
ಭಾರತದ ಈ ಮೊದಲ ಸಾಹಸದಲ್ಲಿ ಪಾಲ್ಗೊಳ್ಳಲು ಮೊದಲು ವಾಯುಪಡೆಯ ಸುಮಾರು 60 ಪೈಲಟ್‌ಗಳು ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಗಳನ್ನು ಸೋಸಿ, ತರಬೇತಿಗಾಗಿ 12 ಜನರನ್ನು ಆಯ್ಕೆ ಮಾಡಲಾಗಿತ್ತು. ಆದರೆ, ರಷ್ಯಾಕ್ಕೆ ತರಬೇತಿಗಾಗಿ ಹೋಗಿದ್ದ 12 ಜನರಲ್ಲಿ ಐದು ಜನ ರನ್ನು ಕೈಬಿಟ್ಟಿರುವ ರಷ್ಯಾ ವಿಜ್ಞಾನಿಗಳು, ಕೇವಲ 7 ಮಂದಿಯನ್ನು ಅಂತಿಮ ವಾಗಿ ಆಯ್ಕೆ ಮಾಡಿದೆ. ಅವಕಾಶ ವಂಚಿತರಾದ ಆ 7 ಮಂದಿಯಲ್ಲಿ ಇದ್ದ ಕೊರತೆಯಾದರೂ ಏನು ಎಂಬುದಕ್ಕೆ ಉತ್ತರ ಹಲ್ಲಿನ ಅನಾರೋಗ್ಯ!
ಅರೆ… ಏನಿದು, ಹಲ್ಲಿಗೂ, ಬಾಹ್ಯಾಕಾಶಕ್ಕೂ ಸಂಬಂಧವೇನು ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ. ಭಾರತದಿಂದ ರಷ್ಯಾದ ಯೂರಿ ಗಗಾರಿನ್ ಕಾಸೊ¾ ನಾಟ್ ತರಬೇತಿ ಕೇಂದ್ರಕ್ಕೆ ಅಲ್ಲಿ 45 ದಿನಗಳ ತರಬೇತಿ ಪಡೆದ 12 ಜನರಲ್ಲಿ ಕೆಲವರಿಗೆ ಮಂದಗಿವಿ ಹಾಗೂ ಮಂದ ದೃಷ್ಟಿಯೂ ಇತ್ತು. ಆದರೆ, ಪ್ರಮುಖ ವಾಗಿ ಕಂಡುಬಂದ ದೋಷವೆಂದರೆ, ಹಲ್ಲುಗಳ ಅನಾರೋಗ್ಯ.
ರಷ್ಯಾ ವಿಜ್ಞಾನಿಗಳ ಪ್ರಕಾರ, ಬಾಹ್ಯಾಕಾಶಕ್ಕೆ ಹೋಗಬಯಸುವ ವ್ಯಕ್ತಿಗಳಿಗೆ ಹಲ್ಲುಗಳ ಆರೋಗ್ಯ ತುಂಬಾನೇ ಮುಖ್ಯ.
ಏಕೆಂದರೆ, ರಾಕೆಟ್‌ನಲ್ಲಿ ಬಾಹ್ಯಾ ಕಾಶಕ್ಕೆ ಚಿಮ್ಮುವಾಗ ರಾಕೆಟ್‌ನ ಒಳಗೆ ಏರ್ಪಡುವ ಒತ್ತಡ, ಭಯಾನಕ ವೆನಿಸುವ ಅಲುಗಾಡುವಿಕೆಯಿಂದ ಹಲ್ಲುಗಳು ಕಳಚಿ ಉದುರುವ ಸಾಧ್ಯತೆಗಳಿರುತ್ತವೆ.
ಬಾಹ್ಯಾಕಾಶಕ್ಕೆ ಹೋದಾಗ ಹಲ್ಲುಗಳಲ್ಲಿ ಹುಳುಕು ಇದ್ದರೆ ರಕ್ತಸ್ರಾವವಾಗುತ್ತದೆ. ಈ ಎಲ್ಲ ಕಾರಣಗಳಿಂದಾಗಿ, 7 ಜನರನ್ನಷ್ಟೇ ಬಾಹ್ಯಾಕಾಶ ಪ್ರಯಾಣಕ್ಕಾಗಿ ಆಯ್ದುಕೊಳ್ಳ
ಲಾಗಿದೆ ಎಂದಿದ್ದಾರೆ.