Advertisement

ಜಿಲ್ಲೆಯಲ್ಲಿ 12 ಹೆದ್ದಾರಿ ನಿರ್ಮಾಣ ಹೆಮ್ಮೆ: ಖೂಬಾ

11:46 AM Feb 21, 2018 | |

ಭಾಲ್ಕಿ: ನಿತಿನ್‌ ಗಡ್ಕರಿ ಅವರ ನೇತೃತ್ವದಲ್ಲಿ ಇಂದು ಜಿಲ್ಲೆಯಲ್ಲಿ 12 ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿ ಜರುಗುತ್ತಿರುವುದು ನಮ್ಮ ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ ಎಂದು ಬೀದರ ಸಂಸದ ಭಗವಂತ ಖೂಬಾ ಹೇಳಿದರು.

Advertisement

ಪಟ್ಟಣದ ಚನ್ನಬಸವಾಶ್ರಮದಲ್ಲಿ ಮಂಗಳವಾರ ನಡೆದ ಕರ್ನಾಟಕ ಮತ್ತು ತೆಲಂಗಾಣಕ್ಕೆ ರಾಷ್ಟ್ರೀಯ ಹೆದ್ದಾರಿ -65ರ 145 ಕಿ.ಮೀ., ಸಂಗಾರೆಡ್ಡಿ ವಿಭಾಗದ ಗಡಿ ಭಾಗಕ್ಕೆ ಚತುಷ್ಪಥ ನಿರ್ಮಾಣ ಮತ್ತು 1500 ಕೋಟಿ ವೆಚ್ಚದಲ್ಲಿ 177 ಕಿ.ಮೀ. ಉದ್ದದ ರಾಜ್ಯ ಪಿಡಬ್ಲ್ಯುಡಿ ರಾಷ್ಟ್ರೀಯ ಹೆದ್ದಾರಿ-5 ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಸಮಾರಂಭದಲ್ಲಿ ಅವರು ಮಾತನಾಡಿದರು. 

ದೇವೆಗೌಡರು ಪ್ರಧಾನ ಮಂತ್ರಿಗಳಿದ್ದಾಗಲೂ ಕರ್ನಾಟದಲ್ಲಿ ಒಂದು ಕಿ.ಮೀ.ನಷ್ಟೂ ರಾಷ್ಟ್ರೀಯ ಹೆದ್ದಾರಿ ನಿರ್ಮಿಸಿಲ್ಲ. ನಮ್ಮ ಮಾಜಿ ಸಂಸದ ಧರ್ಮಸಿಂಗ್‌ ಅವರ ಜಿಲ್ಲೆಗೆ ಒಂದು ಇಂಚೂ ರಾಷ್ಟ್ರೀಯ ಹೆದ್ದಾರಿ ನಿರ್ಮಿಸಿಲ್ಲ ಎಂದರು.
 
ಕೇಂದ್ರದ ಸಾರಿಗೆ ಸಚಿವರು ನಿತಿನ್‌ ಗಡ್ಕರಿಯಲ್ಲ ಇವರು ರೋಡ್‌ಕರಿಯಾಗಿದ್ದಾರೆ. ಭಾರತದಾದ್ಯಂತ ಉತ್ತಮ ರಸ್ತೆ ನಿರ್ಮಿಸುವ ಮೂಲಕ ರೋಡ್‌ಕರಿಯಾಗಿ ಪ್ರಸಿದ್ಧಿ ಹೊಂದಿದ್ದಾರೆ. ಅಲ್ಲದೆ ನಮ್ಮ ಇನ್ನೋರ್ವ ಮಂತ್ರಿ ಅನಂತಕುಮಾರ ಅವರು ರಾಜ್ಯದಲ್ಲಿ ಜನೌಷಧ ಕೇಂದ್ರಗಳನ್ನು ತೆರೆದು ಸಾಮಾನ್ಯ ನಾಗರಿಕರೂ ಉತ್ತಮ ಆರೋಗ್ಯ ಕಾಪಾಡಿಕೊಂಡು ಹೋಗುವಂತೆ ಮಾಡಿರುವುದು ಶ್ಲಾಘನೀಯ ಎಂದು ಹೇಳಿದರು. 

ಸಂಸದ ಪ್ರಹ್ಲಾದ ಜೋಶಿ ಮಾತನಾಡಿ, ಕರ್ನಾಟಕ ಸರ್ಕಾರಕ್ಕಾಗಿ ಯುಪಿಎ ಸರ್ಕಾರ ನಾಲ್ಕು ವರ್ಷದ ಅವಧಿಯಲ್ಲಿ ಮಾಡದ ಕಾರ್ಯಗಳನ್ನು ಎನ್‌ಡಿಎ ಸರ್ಕಾರ ಎರಡೇ ವರ್ಷಗಳಲ್ಲಿ ಮಾಡಿರುವುದು ಸಂತಸದ ವಿಷಯವಾಗಿದೆ ಎಂದು ಹೇಳಿದರು.

ಮಾಜಿ ಶಾಸಕ ಪ್ರಕಾಶ ಖಂಡ್ರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ರಘುನಾಥ ಮಲ್ಕಾಪುರೆ, ಪ್ರಭು ಚೌಹಾಣ, ರೇವುನಾಯಕ ಬೆಮಳಗಿ, ಶಿವರಾಜ ಗಂದಗೆ, ಬಾಬು ವಾಲಿ, ಡಿ.ಕೆ. ಸಿದ್ರಾಮ, ದಿಗಂಬರ ಮಾನಕಾರಿ, ಸುಭಾಷ ಬಿರಾದಾರ, ಗೋವಿಂದರಾವ್‌ ಮೈನಾಳಿ, ಶಕುಂತಲಾ ಬೆಲ್ದಾಳೆ, ಶಿವಾಜಿ ಭೋಸಲೆ, ಡಾ| ಶಾಮ ಮೋರೆ, ಪ್ರಕಾಶ ಮಾಶೆಟ್ಟೆ, ಅಶೋಕ ಮಡ್ಡೆ, ಪ್ರಭು ಧೂಪೆ ಇದ್ದರು. ಬಿಜೆಪಿ ಜಿಲ್ಲಾಧ್ಯಕ್ಷ ಡಾ| ಶೈಲೇಂದ್ರ ಬೆಲ್ದಾಳೆ ಸ್ವಾಗತಿಸಿದರು. ಮಂಗಲಾ ಭಾಗವತ ನಿರೂಪಿಸಿದರು. ಬಾಬುರಾವ್‌ ಕಾರಬಾರಿ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.