Advertisement

Karnataka Politics: ಡಿಕೆ ಶಿವಕುಮಾರ್ ಭೇಟಿ ಮಾಡಿದ ತೇಜಸ್ವಿನಿ ಅನಂತಕುಮಾರ್

11:20 PM Sep 04, 2023 | Team Udayavani |

ಬೆಂಗಳೂರು: ಬಿಜೆಪಿ ರಾಜ್ಯ ಉಪಾಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್‌ ಅವರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರನ್ನು ಸೋಮ ವಾರ ಮತ್ತೆ ಭೇಟಿ ಮಾಡಿ ಚರ್ಚೆ ನಡೆಸಿರುವುದು ರಾಜಕೀಯ ವಲಯ ದಲ್ಲಿ ಚರ್ಚೆಗೆ ಕಾರಣವಾಗಿದೆ.

Advertisement

“ಕುಮಾರ ಕೃಪಾ’ ಅತಿಥಿ ಗೃಹದಲ್ಲಿ ಶಿವಕುಮಾರ್‌ ಅವರನ್ನು ಭೇಟಿ ಮಾಡಿದ ತೇಜಸ್ವಿನಿ, ಸುಮಾರು 20 ನಿಮಿಷ ಚರ್ಚೆ ನಡೆಸಿದರು. ಆದರೆ ಮಾತುಕತೆ ವಿವರ ಲಭ್ಯವಾಗಿಲ್ಲ. ಎರಡು ತಿಂಗಳ ಹಿಂದೆಯೂ ತೇಜಸ್ವಿನಿ ಅನಂತ ಕುಮಾರ್‌ ಹಾಗೂ ಶಿವಕುಮಾರ್‌ ಭೇಟಿ ಮಾಡಿ ಚರ್ಚೆ ನಡೆಸಿದ್ದರು. ಕಾಂಗ್ರೆಸ್‌ನಿಂದ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಅವರು ಕಣಕ್ಕಿಳಿಯಲಿದ್ದಾರೆ ಎಂಬ ಬಗ್ಗೆಯೂ ಆಗ ವ್ಯಾಖ್ಯಾನಿಸಲಾಗಿತ್ತು.

ಬಿಜೆಪಿ ಮೂಲಗಳ ಪ್ರಕಾರ ಈ ಭೇಟಿ ಹಿಂದೆ ಯಾವುದೇ ರಾಜಕೀಯ ಇಲ್ಲ. ತೇಜಸ್ವಿನಿ ನಡೆಸುವ ಅದಮ್ಯ ಚೇತನ ಟ್ರಸ್ಟ್‌ ಈ ಹಿಂದೆ ಇಂದಿರಾ ಕ್ಯಾಂಟೀನ್‌ಗೆ ಪೂರೈಕೆ ಮಾಡಿದ್ದ ಊಟದ ಹಣದ ಬಾಕಿಯನ್ನು ಸರಕಾರ ಇನ್ನೂ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಅವರು ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಶಿವಕುಮಾರ್‌ ಅವರಿಗೆ ದಾಖಲೆ ಸಮೇತ ವಿವರಣೆ ನೀಡಿದ್ದಾರೆ. ಜತೆಗೆ ಇದೇ ತಿಂಗಳು ನಡೆಯುವ ಅನಂತ ಕುಮಾರ್‌ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಆಯೋಜಿಸಿರುವ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೂ ಆಹ್ವಾನ ನೀಡಿದರು ಎನ್ನಲಾಗಿದೆ.

ಸಕ್ರಿಯ ರಾಜಕಾರಣದಲ್ಲಿ ತೇಜಸ್ವಿನಿ ಆಸಕ್ತಿ ಹೊಂದಿದ್ದರೂ ಅವಕಾಶ ಸಿಕ್ಕಿಲ್ಲ. ಈ ಸಂಬಂಧ ಪಕ್ಷದ ಕೆಲವು ಮುಖಂಡರ ಜತೆ ಅವರು ಭಿನ್ನಾಭಿ ಪ್ರಾಯ ಹೊಂದಿದ್ದಾರೆ. ಇದೆಲ್ಲದರ ಮಧ್ಯೆಯೇ ಕೆಲ ದಿನಗಳ ಹಿಂದೆ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿದ್ದರು. ಕೆಲವು ದಿನಗಳ ಹಿಂದಷ್ಟೇ ದೇಶದ ಪ್ರತಿಷ್ಠಿತ ಭಾರತೀಯ ತಾಂತ್ರಿಕ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ (ಐಐಇಎಸ್‌ಟಿ) ಅಧ್ಯಕ್ಷರನ್ನಾಗಿ ಅವರನ್ನು ನೇಮಕ ಮಾಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next