Advertisement
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ವಿಧಾನ ಸೌಧದಲ್ಲಿ ನಡೆದ ಸಂಪುಟ ಸಭೆಯಲ್ಲಿ ಮೀನುಗಾರರ ಬಹು ಸಮಯದ ಬೇಡಿಕೆ ಈಡೇರಿಕೆಗೆ ಅನುದಾನ ಮಂಜೂರಾಗಿದೆ. ಬೈಂದೂರು ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ ಅವರು ಕುಸಿದ ಜೆಟ್ಟಿಯ ಪುನರ್ ನಿರ್ಮಾಣಕ್ಕೆ ಮುಖ್ಯಮಂತ್ರಿ, ಸಚಿವರು, ಸಂಸದರ ಸಹಿತ ಸಂಬಂಧಪಟ್ಟ ಎಲ್ಲರಿಗೂ ಹೆಚ್ಚುವರಿ ಅನುದಾನಕ್ಕಾಗಿ ಮನವಿ ಮಾಡಿಕೊಂಡಿದ್ದರು.
Related Articles
ಜಿಲ್ಲೆಯ ಪ್ರಮುಖ ಮೀನುಗಾರಿಕಾ ನೆಲೆಯಾದ ಗಂಗೊಳ್ಳಿಯಲ್ಲಿ ಈ ಹಿಂದೆ ನಡೆದ ಕಳಪೆ ಕಾಮಗಾರಿಯಿಂದಾಗಿ ಈ ಬಂದರಿನಲ್ಲಿ ಮೀನುಗಾರರು ಸಂಕಷ್ಟಪಡುವಂತಾಗಿದೆ. ದುರಸ್ತಿಗೆ 8 ಕೋ.ರೂ. ಮಂಜೂರಾಗಿದ್ದರೂ, ಇದರಿಂದ ಪ್ರಯೋಜನ ವಾಗುವುದಿಲ್ಲವೆಂದು ಪುನರ್ ನಿರ್ಮಾಣಕ್ಕೆ ಹೆಚ್ಚುವರಿ ಅನುದಾನಕ್ಕೆ ಅಂದಾಜು ಪಟ್ಟಿ ತಯಾರಿಸಿ, ಬೇಡಿಕೆ ಸಲ್ಲಿಸಲಾಗಿತ್ತು. ಮೀನುಗಾರರ ಬಹುದಿನ ಬೇಡಿಕೆ ಈಡೇರಿಸಿದ ಸಿಎಂ ಬಿಎಸ್‌ವೈ, ಪೂರಕವಾಗಿ ಸ್ಪಂದಿಸಿದ ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಸಂಸದ ಬಿ.ವೈ. ರಾಘವೇಂದ್ರ ಅವರಿಗೆ ಕೃತಜ್ಞತೆಗಳು. ಶೀಘ್ರ ಕಾಮಗಾರಿಗೆ ಚಾಲನೆ ನೀಡಲಾಗುವುದು.
– ಬಿ.ಎಂ. ಸುಕುಮಾರ್ ಶೆಟ್ಟಿ,
ಬೈಂದೂರು ಶಾಸಕರು
Advertisement
ಶಾಸಕರಿಗೆ ಶ್ಲಾಘನೆಕಳೆದ ಹಲವಾರು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಈ ಸಮಸ್ಯೆಯನ್ನು ಬೈಂದೂರು ಶಾಸಕರಾದ ಬಿ. ಎಂ. ಸುಕುಮಾರ ಶೆಟ್ಟಿಯವರು ಶಾಸಕರಾಗಿ ಆಯ್ಕೆಯಾದ ಕೆಲವೇ ದಿನಗಳಲ್ಲಿ ಈಡೇರಿಸುವುದಾಗಿ ಆಶ್ವಾಸನೆ ನೀಡಿದ್ದರು. ಅನಂತರ ನಿರಂತರವಾಗಿ ಈ ಬಗ್ಗೆ ಪ್ರಯತ್ನಿಸಿದ ಶಾಸಕರು, ಕಳೆದ ಸರಕಾರದ ಅವಧಿಯಲ್ಲಿ ಸಚಿವ ನಾಡಗೌಡರಿಗೂ ಕೂಡ ಮನವಿ ಸಲ್ಲಿಸಿದ್ದರು. ಈಗ ಪುನರ್ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿಸುವಲ್ಲಿ ಶ್ರಮಿಸಿದ ಶಾಸಕರಿಗೆ ಗಂಗೊಳ್ಳಿಯ ಮೀನುಗಾರರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.