Advertisement

Fraud: ಮಹಿಳೆಗೆ 12.04 ಲ.ರೂ. ವಂಚನೆ

01:30 AM Nov 06, 2023 | Team Udayavani |

ಮಣಿಪಾಲ: ಮಹಿಳೆಯೊಬ್ಬರಿಗೆ ವಂಚಿಸಿ ಲಕ್ಷಾಂತರ ರೂ. ಹಣ ವರ್ಗಾಯಿಸಿಕೊಂಡ ಘಟನೆ ನಡೆದಿದೆ.

Advertisement

ಉಡುಪಿ ವಿ.ಪಿ. ನಗರದ ಸುಪ್ರಜಾ ಟಿ.ಎ. ಅವರ ಮೊಬೈಲ್‌ ಸಂಖ್ಯೆಗೆ ಮಲ್ಟಿ ಅಸೆಟ್‌ ಪೋರ್ಟ್‌ಪೋಲಿಯೋ ವಿಷಯದ ಬಗ್ಗೆ ಕರೆ ಬಂದಿತ್ತು. ಅದರಂತೆ ಅ. 27ರಿಂದ 30ರವರೆಗೆ ಒಟ್ಟು ಮೂರು ಕಂತುಗಳಲ್ಲಿ ಅವರ ಎಸ್‌ಬಿಐ ಖಾತೆಯಿಂದ 12,04,400 ರೂ. ವರ್ಗಾವಣೆ ಮಾಡಿದ್ದರು. ಬಳಿಕ ಹಣ ವರ್ಗಾವಣೆ ಮಾಡಿದ ವ್ಯಕ್ತಿಯು ಯಾವುದೇ ಮಾಹಿತಿ ನೀಡದೆ ಹಣವನ್ನು ವಾಪಸು ನೀಡದೆ ಮೊಬೈಲ್‌ ನಂಬರ್‌ ಸ್ವಿಚ್‌ ಆಫ್ ಮಾಡಿ ಮೋಸ ಮಾಡಿದ್ದಾರೆ ಎಂದು ದೂರಲಾಗಿದೆ. ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next