Advertisement

ಮೆಗಾ ಲೋಕ್‌ ಅದಾಲತ್‌ನಲ್ಲಿ 11,975 ಕೇಸು ಇತ್ಯರ್ಥ

03:45 PM Feb 13, 2023 | Team Udayavani |

ಚಾಮರಾಜನಗರ: ಜಿಲ್ಲೆಯ ನ್ಯಾಯಾಲಯಗಳಲ್ಲಿ ನಡೆದ ಮೆಗಾ ಲೋಕ್‌ ಅದಾಲತ್‌ನಲ್ಲಿ ಒಟ್ಟು 11,975 ಪ್ರಕರಣ ಇತ್ಯರ್ಥವಾಗಿವೆ ಎಂದು ಜಿಲ್ಲಾ ಮತ್ತು ಸೆಷೆನ್ಸ್‌ ನ್ಯಾಯಾಧೀಶರಾದ ಬಿ.ಎಸ್‌.ಭಾರತಿ ತಿಳಿಸಿದರು.

Advertisement

ನಗರದ ನ್ಯಾಯಾಲಯದ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ಬಾರಿಯ ಲೋಕ್‌ ಅದಾಲತ್‌ನಲ್ಲಿ 10,920 ಪ್ರಕರಣ ಇತ್ಯರ್ಥಗೊಂಡಿದ್ದವು. ಈಬಾರಿ 11,975 ಪ್ರಕರಣ ಇತ್ಯರ್ಥವಾಗುವ ಮೂಲಕ ಹಿಂದಿಗಿಂತ ಹೆಚ್ಚಿನ ಪ್ರಕರಣ ವಿಲೇವಾರಿಯಾಗಿವೆ. 190 ಸಿವಿಲ್‌, 1431 ಕ್ರಿಮಿನಲ್‌ ಕೇಸ್‌ ಇತ್ಯರ್ಥವಾಗಿವೆ ಎಂದರು.

ಚಾಮರಾಜನಗರ ತಾಲೂಕಿನ ನ್ಯಾಯಾಲಗಳಲ್ಲಿ 706, ಯಳಂದೂರು ನ್ಯಾಯಾಲಯದಲ್ಲಿದ್ದ 200, ಕೊಳ್ಳೇಗಾಲ ನ್ಯಾಯಾಲಯದಲ್ಲಿ 524, ಗುಂಡ್ಲುಪೇಟೆ ನ್ಯಾಯಾಲಯದಲ್ಲಿನ191 ಪ್ರಕರಣ ಸೇರಿ ಒಟ್ಟು 1621 ವಿಚಾರಣಾ ಹಂತದ ಪ್ರಕರಣಗಳನ್ನು ಇತ್ಯರ್ಥ ಮಾಡಲಾಯಿತು.

ವಿವಿಧ ನ್ಯಾಯಾಲಯ: ವ್ಯಾಜ್ಯಪೂರ್ವ ಪ್ರಕರಣಗಳ ಪೈಕಿ ಚಾಮರಾಜನಗರ ನ್ಯಾಯಾಲಯಗಳಲ್ಲಿ 5695, ಯಳಂದೂರು ನ್ಯಾಯಾಲಯದಲ್ಲಿ 265, ಕೊಳ್ಳೇಗಾಲನ್ಯಾಯಾಲಯದಲ್ಲಿ 2683 ಹಾಗೂ ಗುಂಡ್ಲುಪೇಟೆ ತಾಲೂಕಿನ1711 ಪ್ರಕರಣ ಸೇರಿದಂತೆ ಒಟ್ಟು 10354 ಪ್ರಕರಣಗಳನ್ನು ಅದಾಲತ್‌ನಲ್ಲಿ ರಾಜಿ ಸಂಧಾನದ ಮೂಲಕ ಇತ್ಯರ್ಥ ಮಾಡಲಾಯಿತು ಎಂದು ತಿಳಿಸಿದರು.

ಜಿಲ್ಲೆಯ ನ್ಯಾಯಾಲಯಗಳಲ್ಲಿದ್ದ ಹಾಗೂ ವ್ಯಾಜ್ಯ ಪೂರ್ವ ಸಿವಿಲ್‌ ಮತ್ತು ರಾಜಿಯಾಗಬಲ್ಲ ಕ್ರಿಮಿನಲ್‌ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಮಾಡಲಾಗಿದೆ. ಸಾರ್ವಜನಿಕ ಹಿತಾಸಕ್ತಿ ಪ್ರಕರಣ ಹೊರತುಪಡಿಸಿ ರಸ್ತೆ ಅಪಘಾತ, ಬ್ಯಾಂಕ್‌ ಸಾಲ, ಖಾಸಗಿ ಫೈನಾನ್ಸ್‌, ವಿವಾಹ ವಿಚ್ಚೇದನ, ಭೂ ಸ್ವಾಧೀನ, ಜಮೀನು ವಿವಾದ, ಲೇವಾದೇವಿ ವ್ಯಾಜ್ಯಗಳು ಸೇರಿದಂತೆ ಹಲವು ಪ್ರಕರಣಗಳನ್ನು ಸಂಧಾನದ ಮೂಲಕ ಇತ್ಯರ್ಥ ಮಾಡಲಾಗಿದೆ ಎಂದು ಹೇಳಿದರು.

Advertisement

ಜನತೆಗೆ ಅನುಕೂಲ: ನ್ಯಾಯಾಲಯಗಳಲ್ಲಿದ್ದ ಒಟ್ಟು 1621 ಪ್ರಕರಣಗಳಲ್ಲಿ ಅಪಘಾತ, ಭೂ ವ್ಯಾಜ್ಯಗಳ ಹಾಗೂ ಇತರೆ ಸಂಬಂಧ ಪ್ರಕರಣದ ಪರಿಹಾರವಾಗಿ 6.56 ಕೋಟಿ ರೂ. ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳಲ್ಲಿ 3.21 ಕೋಟಿ ರೂ. ಪರಿಹಾರ ಸೇರಿ ಒಟ್ಟು 9.77 ಕೋಟಿ ಪರಿಹಾರ ನೀಡಬೇಕಾದ ಪ್ರಕರಣ ಇತ್ಯರ್ಥಗೊಂಡಿವೆ. ಲೋಕ್‌ ಅದಾಲತ್‌ನಲ್ಲಿ ಹೆಚ್ಚಿನ ಪ್ರಕರಣ ವಿಲೇವಾರಿ ಆಗಿರುವುದರಿಂದ ಜನ ಸಾಮಾನ್ಯರಿಗೆ ಅನುಕೂಲವಾಗಿದೆ. ಅಲ್ಲದೇ ಇದರಿಂದ ನ್ಯಾಯಾಲಯಗಳ ಮೇಲಿನ ಪ್ರಕರಣಗಳ ಹೊರೆ ತಗ್ಗಿದೆ. ಅದಾಲತ್‌ನಲ್ಲಿ ಹೆಚ್ಚುದೂರುದಾರರು ರಾಜಿ ಸಂಧಾನದ ಮೂಲಕ ಪ್ರಕರಣ ಇತ್ಯರ್ಥ ಮಾಡಲು ಮುಂದಾಗುತ್ತಿದ್ದಾರೆ. ಇದು ಶ್ಲಾಘನೀಯ ಎಂದು ನ್ಯಾಯಾಧೀಶರು ತಿಳಿಸಿದರು.

ಅದಾಲತ್‌: ಸರ್ವರಿಗೂ ನ್ಯಾಯ ಎಂಬ ಪರಿಕಲ್ಪನೆಯಡಿ ಜನ ಸಾಮಾನ್ಯರ ಅನುಕೂಲಕ್ಕಾಗಿ, ಶೀಘ್ರವಾಗಿ ಪ್ರಕರಣ ಇತ್ಯರ್ಥಪಡಿಸಲು ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರಹಾಗೂವ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಗಳನಿರ್ದೇಶನ ಮೇರೆಗೆ ಜಿಲ್ಲಾದ್ಯಂತ ಮೆಗಾ ಲೋಕ್‌ ಅದಾಲತ್‌ ಹಮ್ಮಿಕೊಳ್ಳಲಾಗಿತ್ತು ಎಂದು ಹೇಳಿದರು.

ಲೋಕ್‌ ಅದಾಲತ್‌ ಯಶಸ್ಸಿಗೆ ಶ್ರಮಿಸಿದ ಜಿಲ್ಲೆಯ ಎಲ್ಲನ್ಯಾಯಾಧೀಶರಿಗೆ, ವಕೀಲರಿಗೆ, ನ್ಯಾಯಾಲಯ ಸಿಬ್ಬಂದಿಗೆ,ಇಲಾಖೆ ಅಧಿಕಾರಿಗಳಿಗೆ ಕಾನೂನು ಸೇವಾ ಪ್ರಾಧಿಕಾರದ ಪರವಾಗಿ ಧನ್ಯವಾದ ಸಲ್ಲಿಸುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಹಿರಿಯ ಸಿವಿಲ್‌ ನ್ಯಾಯಾಧೀಶರಾದ ಎಂ.ಶ್ರೀಧರ, ವಕೀಲರ ಸಂಘದ ಜಿಲ್ಲಾಧ್ಯಕ್ಷ ಉಮ್ಮತ್ತೂರು ಇಂದುಶೇಖರ್‌ ಮತ್ತಿತರರು ಉಪಸ್ಥಿತರಿದ್ದರು.

ಸವಾರರಿಂದ 16.29 ಲಕ್ಷ ರೂ.ದಂಡ ವಸೂಲಿ :  ಮೋಟಾರು ವಾಹನ ಸವಾರಿಯಲ್ಲಿ ನಿಯಮ ಉಲ್ಲಂಘನೆ ಮಾಡಿದವರಿಗೆ ದಂಡದಲ್ಲಿ ಶೇ.50 ವಿನಾಯಿತಿ ನೀಡಿದಪರಿಣಾಮ 16.29 ಲಕ್ಷ ರೂ. ದಂಡ ವಸೂಲಾಗಿದೆ5,177 ಪ್ರಕರಣ ಇತ್ಯರ್ಥಗೊಂಡಿವೆ. ರಿಯಾಯ್ತಿ ಘೋಷಣೆ ಪರಿಣಾಮ ಜನ ಹೆಚ್ಚಿನ ಸಂಖ್ಯೆಯಲ್ಲಿಆಗಮಿಸಿ ದಂಡ ಪಾವತಿಸಿದ್ದಾರೆ. ಇದರಿಂದ 16,29,500ಪ್ರಕರಣ ಇತ್ಯರ್ಥಗೊಂಡಿವೆ ಎಂದು ಜಿಲ್ಲಾ ಮತ್ತು ಸೆಷೆನ್ಸ್‌ ನ್ಯಾಯಾಧೀಶರಾದ ಬಿ.ಎಸ್‌.ಭಾರತಿ ತಿಳಿಸಿದರು

Advertisement

Udayavani is now on Telegram. Click here to join our channel and stay updated with the latest news.

Next