Advertisement

ರಾಜ್ಯದಲ್ಲಿ ತಗ್ಗಿದ ಕೋವಿಡ್ : ಇಂದು 1186 ಪ್ರಕರಣ ಪತ್ತೆ| 24 ಜನರ ಸಾವು

06:55 PM Aug 09, 2021 | Team Udayavani |

ಬೆಂಗಳೂರು: ರಾಜ್ಯದಲ್ಲಿಂದು ಕೋವಿಡ್ ಹೊಸ ಪ್ರಕರಣಗಳ ಪ್ರಮಾಣ ಇಳಿಕೆಯಾಗಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ 1186 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 24 ಜನರು ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ವರದಿಗಳು ತಿಳಿಸಿವೆ.

Advertisement

ಇಂದು ಸಂಜೆ (ಆ.09) ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ವರದಿಗಳ ಪ್ರಕಾರ 1776 ಜನರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಇದುವರೆಗೆ ಸೋಂಕಿನಿಂದ ಗುಣಮುಖರಾದವರ ಸಂ‍ಖ್ಯೆ 2859552ಕ್ಕೆ ತಲುಪಿದೆ.

ಇನ್ನು ಸದ್ಯ ರಾಜ್ಯದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ‍್ಯೆ 23316 ಇದೆ. ಕೋವಿಡ್ ಸೋಂಕಿನ ಖಚಿತ ಪ್ರಕರಣಗಳ ಶೇಕಡಾವಾರು ಪ್ರಮಾಣ 0.89% ಹಾಗೂ ಸೋಂಕಿನಿಂದ ಮೃತ ಪಟ್ಟವರ ಶೇಕಡಾವಾರು ಪ್ರಮಾಣ 2.02 % ಇದೆ.

ಜಿಲ್ಲಾವಾರು ಪ್ರಕರಣಗಳ ಸಂಖ್ಯೆ :

ಬಾಗಲಕೋಟೆ-0, ಬಳ್ಳಾರಿ- 6, ಬೆಳಗಾವಿ-29, ಬೆಂಗಳೂರು ಗ್ರಾಮಾಂತರ-19, ಬೆಂಗಳೂರು ಗ್ರಾಮಾಂತರ-296, ಬೀದರ್-1, ಚಾಮರಾಜನಗರ-31, ಚಿಕ್ಕಬಳ್ಳಾಪುರ-7, ಚಿಕ್ಕಮಗಳೂರು-24, ಚಿತ್ರದುರ್ಗ-15, ದಕ್ಷಿಣ ಕನ್ನಡ-273, ದಾವಣಗೆರೆ-4, ಧಾರವಾಡ-1, ಗದಗ-3, ಕಲಬುರಗಿ-6, ಕೊಡಗು-83, ಕೋಲಾರ-28, ಕೊಪ್ಪಳ-5, ಮಂಡ್ಯ-29, ಮೈಸೂರು-82, ರಾಯಚೂರು-0, ರಾಮನಗರ-2, ಶಿವಮೊಗ್ಗ-34, ತುಮಕೂರು-40, ಉಡುಪಿ-81, ಉತ್ತರ ಕನ್ನಡ-30, ವಿಜಯಪುರ-1, ಯಾದಗಿರಿ-1.

Advertisement
Advertisement

Udayavani is now on Telegram. Click here to join our channel and stay updated with the latest news.

Next