ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಸೋಂಕಿನ ತೀವ್ರತೆಯ ಪ್ರಮಾಣ ಇಳಿಮುಖವಾಗುತ್ತಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ 1151 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿನಿಂದ 10 ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ವರದಿಗಳು ತಿಳಿಸಿವೆ.
ವರದಿಗಳ ಪ್ರಕಾರ 1442 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಇದುವರೆಗೆ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 2882331 ಕ್ಕೆ ತಲುಪಿದೆ.
ಇನ್ನು ರಾಜ್ಯದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 20255 ಇದೆ. ಪಾಸಿಟಿವಿಟಿ ರೇಟ್ 1.08 % ಹಾಗೂ ಡೆತ್ ರೇಟ್ 0.86 % ಇದೆ.
ಜಿಲ್ಲಾವಾರು ಪ್ರಕರಣಗಳ ಸಂಖ‍್ಯೆ :,
ಬಾಗಲಕೋಟೆ-0, ಬಳ್ಳಾರಿ-4, ಬೆಳಗಾವಿ-12, ಬೆಂಗಳೂರು ಗ್ರಾಮಾಂತರ-10, ಬೆಂಗಳೂರು ನಗರ-270, ಬೀದರ್-0, ಚಾಮರಾಜನಗರ-5, ಚಿಕ್ಕಬಳ್ಳಾಪುರ-4, ಚಿಕ್ಕಮಗಳೂರು-42, ಚಿತ್ರದುರ್ಗ-18, ದಕ್ಷಿಣ ಕನ್ನಡ-236, ದಾವಣಗೆರೆ-1, ಧಾರವಾಡ-0, ಗದಗ-3, ಹಾಸನ-115, ಹಾವೇರಿ-1, ಕಲಬುರಗಿ-17, ಕೊಡಗು-54, ಕೋಲಾರ-7, ಕೊಪ್ಪಳ-5, ಮಂಡ್ಯ-32, ಮೈಸೂರು-76, ರಾಯಚೂರು-0, ರಾಮನಗರ-1, ಶಿವಮೊಗ್ಗ-8, ತುಮಕೂರು-44, ಉಡುಪಿ-137, ಉತ್ತರ ಕನ್ನಡ-42, ವಿಜಯಪುರ-2, ಯಾದಗಿರಿ-5.