Advertisement
ದೇಶಾದ್ಯಂತ ಕಳೆದ ವರ್ಷ ಒಟ್ಟು 95 ಹುಲಿಗಳು ಕೊನೆಯುಸಿರೆಳೆದಿವೆ. ರಾಷ್ಟ್ರೀಯ ಹುಲಿ ಸಂರಕ್ಷಣ ಪ್ರಾಧಿಕಾರ (ಎನ್‌ಟಿಸಿಎ) ಸಿದ್ಧಪಡಿಸಿದ ಅಂಕಿ ಅಂಶಗಳಿಂದ ಈ ಮಾಹಿತಿ ಸಿಕ್ಕಿದ್ದು, ಈ ಬಗ್ಗೆ ‘ದ ಹಿಂದುಸ್ಥಾನ್ ಟೈಮ್ಸ್’ ವರದಿ ಮಾಡಿದೆ. ಉತ್ತರಾಖಂಡದಲ್ಲಿ 15, ಅಸ್ಸಾಂನಲ್ಲಿ 8 ಮತ್ತು ಉತ್ತರ ಪ್ರದೇಶದಲ್ಲಿ 7 ಹುಲಿಗಳು ಅಸುನೀಗಿವೆ.ಅತ್ಯಂತ ಆಘಾತಕಾರಿ ವಿಚಾರವೆಂದರೆ 2016ರಲ್ಲಿ ಮಧ್ಯಪ್ರದೇಶದಲ್ಲಿಯೂ 30 ವ್ಯಾಘ್ರಗಳು ಸಾವನ್ನಪ್ಪಿ ದ್ದವು. ಆ ವರ್ಷ ದೇಶಾದ್ಯಂತ ಒಟ್ಟು 97 ಹುಲಿಗಳು ಸಾವನ್ನಪ್ಪಿದ್ದವು. ಆ ರಾಜ್ಯದ ಅರಣ್ಯಾಧಿಕಾರಿಗಳು, ರೈಲಿಗೆ ಸಿಲುಕಿ, ಹುಲಿಗಳ ನಡುವೆಯೇ ಜಗಳ, ಕಳ್ಳಬೇಟೆಗಳ ಕಾರಣದಿಂದಾಗಿ ಜೀವ ಹಾನಿಯಾಗಿದೆ ಎಂಬ ಅಭಿಪ್ರಾಯ ಮುಂದಿಡುತ್ತಾರೆ. ದೇಶದಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಹುಲಿಗಳು ಇರುವ ರಾಜ್ಯ ಎಂಬ ಹೆಗ್ಗಳಿಕೆಯನ್ನು ಮಧ್ಯಪ್ರದೇಶ ಹೊಂದಿತ್ತು. ಆದರೆ, ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹುಲಿಗಳ ಸಾವು ಉಂಟಾಗುತ್ತಿದ್ದುದರಿಂದ, 2010ರಲ್ಲಿ ಹೆಚ್ಚು ಹುಲಿ ಗಳಿರುವ ರಾಜ್ಯ ಎಂಬ ಸ್ಥಾನ ಕರ್ನಾಟಕಕ್ಕೆ ಒಲಿದಿತ್ತು.