Advertisement
ಅಸ್ಸಾಂ ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕ ಶೆರ್ಮನ್ ಅಲಿ ಅಹ್ಮದ್ ಅವರ ಪ್ರಶ್ನೆಗೆ ಲಿಖಿತ ಉತ್ತರದಲ್ಲಿ ಶರ್ಮಾ ಅವರು 114 ಜಿಹಾದಿಗಳಲ್ಲಿ 65 ನಿಷೇಧಿತ ಭಯೋತ್ಪಾದಕ ಸಂಘಟನೆ ಜಮಾತ್-ಉಲ್-ಮುಜಾಹಿದೀನ್ ಬಾಂಗ್ಲಾದೇಶ (ಜೆಎಂಬಿ) ಸದಸ್ಯರು ಮತ್ತು ಒಂಬತ್ತು ಮಂದಿ ಹಿಜ್ಬುಲ್ ಮುಜಾಹಿದೀನ್ ನವರು ಎಂದು ಹೇಳಿದರು.
Related Articles
Advertisement
ಕಳೆದ ಆರು ವರ್ಷಗಳಲ್ಲಿ ಬಂಧಿತರಾದವರ ಪೈಕಿ 10 ಮಂದಿ ಮದರಸಾಗಳೊಂದಿಗೆ ಸಂಬಂಧ ಹೊಂದಿದ್ದು, ಮಸೀದಿ, ಮದರಸಾ ಮತ್ತಿತರ ಧಾರ್ಮಿಕ ಸಭೆಗಳಲ್ಲಿ ಉಪನ್ಯಾಸ ನೀಡುವ ಮೂಲಕ ಜನರ ಮೇಲೆ ಪ್ರಭಾವ ಬೀರಲು ಯತ್ನಿಸಿದ್ದಾರೆ ಎಂದು ಹೇಳಿದರು.
“ಅವರು ಜಿಹಾದಿ-ಸಂಬಂಧಿತ ಸಾಹಿತ್ಯವನ್ನು ಸಹ ವಿತರಿಸಿದ್ದರು ಮತ್ತು ಪರಸ್ಪರ ಸಂಪರ್ಕವನ್ನು ಕಾಪಾಡಿಕೊಳ್ಳಲು ಒಮೆಮೋ ಮತ್ತು ಬ್ಲಾಬ್ಬರ್ ನಂತಹ ಸಂಭಾಷಣೆ ಅಪ್ಲಿಕೇಶನ್‌ಗಳನ್ನು ಬಳಸಿದ್ದರು. ಇಲ್ಲಿಯವರೆಗೆ, ಅಂತಹ ಪ್ರಕರಣಗಳಲ್ಲಿ ಯಾವುದೇ ಜನರು ಹತ್ಯೆಗೀಡಾಗಿಲ್ಲ ” ಎಂದು ಶರ್ಮಾ ಹೇಳಿದರು.
ರಾಜ್ಯದಲ್ಲಿ ಬಾರ್ಪೇಟಾ, ಬೊಂಗೈಗಾಂವ್, ಮೋರಿಗಾಂವ್, ಧುಬ್ರಿ ಮತ್ತು ಗೋಲ್ಪಾರಾ ಜಿಲ್ಲೆಗಳನ್ನು ಜಿಹಾದಿ ಚಟುವಟಿಕೆಗಳ ಕೇಂದ್ರವೆಂದು ಗುರುತಿಸಲಾಗಿದೆ ಎಂದು ಅವರು ಹೇಳಿದರು.