Advertisement

ಗೋವಾದ 113 ವರ್ಷದ ಹಿರಿಯಜ್ಜಿ ಇನ್ನಿಲ್ಲ

01:15 PM Nov 05, 2021 | Team Udayavani |

ಪಣಜಿ: ಗೋವಾ ರಾಜ್ಯದಲ್ಲಿಯೇ ಅತೀ ಹಿರೀಯ ವಯಸ್ಸಿನ ವ್ಯಕ್ತಿ ಎಂದೇ ಕರೆಯಲ್ಪಡುತ್ತಿದ್ದ ಕಾಮುರ್ಲಿಯಲ್ಲಿನ ಲಾರ್ಡೆಸ್ ಕಾನ್ಸೆಕಾವೊ ಲೋಬೊ (113) ರವರು ನಿಧನ ಹೊಂದಿದ್ದಾರೆ.

Advertisement

ಲಾರ್ಡೆಸ್ ಕಾನ್ಸೆಕಾವೊ ಅವರು 8 ಡಿಸೆಂಬರ್ 1908 ರಲ್ಲಿ ಜನಿಸಿದ್ದರು. ಗೋವಾದ ಹಿರೀಯ ವಯೋವೃದ್ಧೆ ಎಂದೇ ಪ್ರಸಿದ್ಧಿ ಪಡೆದಿದ್ದ ಕಾನ್ಸೆಕಾವೊ ಅವರು ತಮ್ಮ ಕುಟುಂಬದಲ್ಲಿ 3 ಪೀಳಿಗೆಯನ್ನು ಕಂಡಿದ್ದಾರೆ.

ಜೋಸ್ ಮರಿಯಾ ಲೋಬೋ ಅವರನ್ನು 1944 ರಲ್ಲಿ ಗೋವಾದ ಕ್ಯಾಮುರ್ಲಿಮ್‌ನಲ್ಲಿ ವಿವಾಹವಾದರು ಮತ್ತು ದಂಪತಿಗೆ ನಾಲ್ಕು ಮಕ್ಕಳಿದ್ದರು.

90 ರ ದಶಕದಲ್ಲಿ ಸ್ವತಂತ್ರವಾಗಿ ಕೆಲಸ ಮಾಡುತ್ತಿದ್ದ ಅವರು , 103 ನೇ ವಯಸ್ಸಿನವರೆಗೂ ತನ್ನದೇ ಆದ ಅನೇಕ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದಳು.

103 ನೇ ವಯಸ್ಸಿನಲ್ಲಿ ಗ್ಯಾಂಗ್ರೀನ್‌ನಿಂದಾಗಿ ಕಾಲ್ಬೆರಳುಗಳನ್ನು ಕತ್ತರಿಸಿದ ನಂತರ, ಅವರು ಹೆಚ್ಚಾಗಿ ಗಾಲಿಕುರ್ಚಿಯನ್ನು ಅವಲಂಭಿಸಿದ್ದರು.

Advertisement

ಅಜ್ಜಿಯ ಕುಟುಂಬಸ್ಥರು ಪ್ರತಿ ವರ್ಷವೂ ಅಜ್ಜಿಯ ಹುಟ್ಟುಹಬ್ಬವನ್ನು ಅದ್ದೂರಿಯಿಂದ ಆಚರಿಸುತ್ತಿದ್ದರು. ಇಂದು ಅಜ್ಜಿಯು ತಮ್ಮ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next