ಗಾಜಾ: ಉತ್ತರ ಗಾಜಾದಲ್ಲಿ ಸಹಾಯಕ್ಕಾಗಿ ಕಾಯುತ್ತಿದ್ದ ವೇಳೆ ಇಸ್ರೇಲ್ ನಡೆಸಿದ ದಾಳಿಯಲ್ಲಿ 112 ಪ್ಯಾಲೇಸ್ತೀನಿಯನ್ನರು ಪ್ರಾಣ ಕಳೆದುಕೊಂಡಿದ್ದು, 760ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವಾಲಯ ಹೇಳಿಕೊಂಡಿದೆ.
ಸಚಿವಾಲಯದ ಪ್ರಕಾರ, ಇಸ್ರೇಲಿ ಪಡೆಗಳು ಅಪಾರ ಸಾವುನೋವುಗಳಿಗೆ ಕಾರಣವಾಗಿದ್ದು, ಪ್ಯಾಲೇಸ್ತೀನಿಯನ್ ಮಾಧ್ಯಮಗಳು ವೈದ್ಯಕೀಯ ಮೂಲಗಳನ್ನು ಉಲ್ಲೇಖಿಸಿ ಇಸ್ರೇಲಿ ಪಡೆಗಳು ಗುಂಪಿನ ಮೇಲೆ ಗುಂಡು ಹಾರಿಸಿವೆ ಎಂದು ಹೇಳಿವೆ.
ಗಾಜಾ ನಗರದ ನೈಋತ್ಯ ಹೊರವಲಯದಲ್ಲಿರುವ ನಬುಲ್ಸಿ ವೃತ್ತದಿಂದ ಹತ್ಯೆಗೀಡಾದವರ ದೇಹಗಳು ಪತ್ತೆಯಾಗದೆ ಉಳಿದಿವೆ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು ಎಂದು ಹೇಳಲಾಗಿದೆ.
ಇಸ್ರೇಲಿ ಸೇನಾ ಮೂಲ ಇದಕ್ಕೆ ಪ್ರತಿಕ್ರಿಯೆ ನೀಡಿದ್ದು, ಸೈನಿಕರ ಸುರಕ್ಷತೆಗೆ ಬೆದರಿಕೆಯೊಡ್ಡುವ ರೀತಿಯಲ್ಲಿ ಕೆಲವು ವ್ಯಕ್ತಿಗಳು ನಮ್ಮ ಬಳಿಗೆ ಬಂದಿದ್ದರಿಂದ ಪಡೆಗಳು ಗುಂಡು ಹಾರಿಸಿವೆ ಎಂದಿದೆ. ಮತ್ತೊಂದು ವರದಿಯು ಮಿಲಿಟರಿ ಟ್ರಕ್ ಜನರ ಮೇಲೆ ಹರಿಯಿತು ಎಂದು ಸೂಚಿಸಿದೆ.
ಗಾಜಾ ನಗರದಲ್ಲಿ ಆಹಾರ ನೆರವು ವಿತರಣೆಯ ಸಮಯದಲ್ಲಿ ಕನಿಷ್ಠ 112 ಪ್ಯಾಲೆಸ್ತೀನಿಯನ್ನರನ್ನು ಕೊಂದಿರುವುದನ್ನು ಯುಎನ್ ಮಾನವ ಹಕ್ಕುಗಳ ಕಚೇರಿ ಬಲವಾಗಿ ಖಂಡಿಸಿದೆ.
ಆಹಾರ ನೆರವು ವಿತರಣೆಯ ಪ್ರಯತ್ನದ ಸಮಯದಲ್ಲಿಇಸ್ರೇಲಿ ಪಡೆಗಳ ಗುಂಡಿನ ದಾಳಿ ಅಂತಾರಾಷ್ಟ್ರೀಯ ಕಾನೂನಿನ ಉಲ್ಲಂಘನೆಯ ಗಂಭೀರ ಪ್ರಕರಣ ಎಂದು ಹೇಳಿದೆ.