ಬೆಂಗಳೂರು : ನಾಲ್ಕನೇ ಅಲೆಯ ಆತಂಕದ ನಡುವೆ ಸೋಮವಾರ ರಾಜ್ಯದಲ್ಲಿ 111 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದೆ. ಪ್ರಕರಣಗಳ ಪೈಕಿ ರಾಜಧಾನಿ ಬೆಂಗಳೂರಿನಲ್ಲಿ ಅತೀ ಹೆಚ್ಚು 103 ಪ್ರಕರಣಗಳು ದೃಢ ಪಟ್ಟಿವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
Advertisement
ಪಾಸಿಟಿವಿಟಿ ದರ 1.78% ಇದ್ದು, 76 ಮಂದಿ ಸೋಂಕಿತರು ಇಂದು ಡಿಸ್ಚಾರ್ಜ್ ಆಗಿದ್ದಾರೆ ಆ ಪೈಕಿ 73 ಮಂದಿ ಬೆಂಗಳೂರಿನವರಾಗಿದ್ದಾರೆ. ಇಂದು ರಾಜ್ಯದಲ್ಲಿ ಯಾವುದೇ ಸೋಂಕಿತರ ಮರಣಗಳು ಸಂಭವಿಸಿಲ್ಲ.
1,815 ಸಕ್ರಿಯ ಪ್ರಕರಣಗಳು ರಾಜ್ಯದಲ್ಲಿ ಇದ್ದು, ಬೆಂಗಳೂರಿನಲ್ಲಿ ಸಕ್ರಿಯ ಪ್ರಕರಣಗಳು 1,731 ಆಗಿವೆ. ಇಂದು
6,224 ಮಂದಿಗೆ ಪರೀಕ್ಷೆಗಳನ್ನು ನಡೆಸಲಾಗಿದೆ.