ವಾಷಿಂಗ್ಟನ್: ಜಾಲತಾಣ ಬಳಕೆದಾರರ ಖಾಸಗಿ ಮಾಹಿತಿಗಳ ಸೋರಿಕೆಗಳ ಬೆದರಿಕೆಯ ನಡುವಯೇ ಜಾಲತಾಣ ದೈತ್ಯ ವೇದಿಕೆ ಫೇಸ್‌ಬುಕ್‌ನ ಮಾತೃಸಂಸ್ಥೆ ಮೆಟಾಗೆ ಐರೋಪ್ಯ ಒಕ್ಕೂಟವು 1.3 ಶತಕೋಟಿ ಡಾಲರ್ ಅಂದರೆ 11,000 ಕೋಟಿ ರೂ.ಗಳ ದಂಡ ವಿಧಿಸಿದೆ. ಒಕ್ಕೂಟದಲ್ಲಿ ದತ್ತಾಂಶ ಗೌಪ್ಯತೆ ಕುರಿತ ಕಠಿಣ ನಿಯಮ ಜಾರಿಗೊಳಿಸಿದ 5 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಇಷ್ಟೊಂದು ದೊಡ್ಡ ಪ್ರಮಾಣದ ದಂಡ ವಿಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದಕ್ಕೂ ಮೊದಲು 2021ರಲ್ಲಿ ಅಮೆಜಾನ್ ಸಂಸ್ಥೆಗೆ 746 ದಶಲಕ್ಷ ಡಾಲರ್‌ಗಳ ದಂಡ ವಿಧಿಸಲಾಗಿತ್ತು. ಈ ನಡುವೆ ಯುರೋಪ್ ಬಳಕೆದಾರರ ಮಾಹಿತಿಯನ್ನು ಅಮೆರಿಕದೊಂದಿಗೆ ಹಂಚಿಕೊಳ್ಳದಂತೆ ಇಯು ಎಚ್ಚರಿಸಿದೆ.
Advertisement