Advertisement

ಲೋಕಸಮರ 2019; 110 ಮಹಿಳಾ ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್ ಕೇಸ್! ADR

09:45 AM May 20, 2019 | Team Udayavani |

ನವದೆಹಲಿ: 2019ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ 110 ಮಹಿಳಾ ಅಭ್ಯರ್ಥಿಗಳು ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಾಗಿರುವುದನ್ನು ಅಫಿಡವಿತ್ ನಲ್ಲಿ ಘೋಷಿಸಿಕೊಂಡಿದ್ದಾರೆ. ಇದರಲ್ಲಿ ಕೊಲೆ ಹಾಗೂ ಅತ್ಯಾಚಾರದಂತಹ ಗಂಭೀರ ಪ್ರಕರಣಗಳು ಸೇರಿವೆ.

Advertisement

ನ್ಯಾಶನಲ್ ಎಲೆಕ್ಸನ್ ವಾಚ್ (ಎನ್ ಇಡಬ್ಲ್ಯು ) ಮತ್ತು  ಅಸೋಸಿಯೇಶನ್ ಫಾರ್ ಡೆಮೋಕ್ರಟಿಕ್ ರಿಫಾರ್ಮ್ಸ್ (ಎಡಿಆರ್) 724 ಮಹಿಳಾ ಅಭ್ಯರ್ಥಿಗಳ ಅಫಿಡವಿತ್ ನ ಮಾಹಿತಿಯನ್ನು ಆಧರಿಸಿ ಈ ವರದಿಯನ್ನು ತಯಾರಿಸಿದೆ. ಇದರಲ್ಲಿ ಪೂರ್ಣ ಮಾಹಿತಿ ಇಲ್ಲದ ಕಾರಣ ಎಂಟು ಮಂದಿ ಮಹಿಳಾ ಅಭ್ಯರ್ಥಿಗಳ ಅಫಿಡವಿತ್ ಅನ್ನು ವಿಶ್ಲೇಷಿಸಿಲ್ಲ ಎಂದು ವಿವರಿಸಿದೆ.

ವರದಿಯ ಪ್ರಕಾರ, 110 ಮಂದಿ ಮಹಿಳಾ ಅಭ್ಯರ್ಥಿಗಳು ಕ್ರಿಮಿನಲ್ ಪ್ರಕರಣ ದಾಖಲಾಗಿರುವುದನ್ನು ಘೋಷಿಸಿಕೊಂಡಿದ್ದಾರೆ. 78 ಅಭ್ಯರ್ಥಿಗಳು ಕೊಲೆ, ರೇಪ್, ಕೊಲೆಗೆ ಯತ್ನ ಸೇರಿದಂತೆ ಗಂಭೀರ ಆರೋಪಗಳು ತಮ್ಮ ವಿರುದ್ಧ ದಾಖಲಾಗಿರುವುದಾಗಿ ಅಫಿಡವಿತ್ ನಲ್ಲಿ ವಿವರಿಸಿದ್ದಾರೆ.

ನಾಲ್ಕು ಮಹಿಳಾ ಅಭ್ಯರ್ಥಿಗಳು ಕೊಲೆ(ಐಪಿಸಿ 302) ಪ್ರಕರಣ ದಾಖಲಾಗಿರುವುದಾಗಿ ಘೋಷಿಸಿಕೊಂಡಿದ್ದು, 16 ಮಂದಿ ಮಹಿಳಾ ಅಭ್ಯರ್ಥಿಗಳು ಕೊಲೆ ಯತ್ನ (ಐಪಿಸಿ 307)ದ ಪ್ರಕರಣ ದಾಖಲಾಗಿರುವುದಾಗಿ ಅಫಿಡವಿತ್ ನಲ್ಲಿ ಮಾಹಿತಿ ನೀಡಿದ್ದಾರೆ.

14 ಮಹಿಳಾ ಅಭ್ಯರ್ಥಿಗಳು ಮಹಿಳೆಯರ ಅನುಮತಿ ಇಲ್ಲದೇ ಗರ್ಭಪಾತ ನಡೆಸಿದ ಪ್ರಕರಣ ದಾಖಲಾಗಿರುವುದಾಗಿ ಘೋಷಿಸಿಕೊಂಡಿದ್ದಾರೆ. ಪ್ರಚೋದನಾಕಾರಿ ಭಾಷಣ ಮಾಡಿದ ಏಳು ಮಹಿಳಾ ಅಭ್ಯರ್ಥಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

Advertisement

ಪ್ರಚೋದನಾಕಾರಿ ಭಾಷಣದಲ್ಲಿ ಪ್ರಕ್ಷವಾರು ದಾಖಲಾದ ಪ್ರಕರಣ; 54 ಮಹಿಳಾ ಅಭ್ಯರ್ಥಿಗಳಲ್ಲಿ 18 ಮಂದಿ ಕಾಂಗ್ರೆಸ್ ಅಭ್ಯರ್ಥಿಗಳ ವಿರುದ್ಧ ಪ್ರಕರಣ ದಾಖಲು, 53 ಮಂದಿ ಬಿಜೆಪಿ ಅಭ್ಯರ್ಥಿಗಳಲ್ಲಿ 18 ಮಂದಿ ವಿರುದ್ಧ ಪ್ರಕರಣ ದಾಖಲು. 24 ಮಂದಿ ಬಹುಜನ್ ಸಮಾಜವಾದಿ ಪಕ್ಷದ ಅಭ್ಯರ್ಥಿಗಳಲ್ಲಿ 2 ಮಹಿಳೆಯರ ವಿರುದ್ದ ಪ್ರಕರಣ ದಾಖಲಾಗಿದೆ, 23 ಟಿಎಂಸಿ ಅಭ್ಯರ್ಥಿಗಳಲ್ಲಿ 6 ಮಂದಿ, 222 ಪಕ್ಷೇತರ ಮಹಿಳಾ ಅಭ್ಯರ್ಥಿಗಳಲ್ಲಿ 22 ಮಂದಿ ವಿರುದ್ಧ ಪ್ರಚೋದನಾಕಾರಿ ಭಾಷಣದ ಪ್ರಕರಣ ದಾಖಲಾಗಿರುವುದಾಗಿ ಅಫಿಡವಿತ್ ನಲ್ಲಿ ಘೋಷಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next