Advertisement
ಸೋಮವಾರ 110 ಹೊಸ ಪ್ರಕರಣ ಪತ್ತೆಯಾಗಿದ್ದು, 180 ಮಂದಿ ಬಿಡುಗಡೆಯಾಗಿದ್ದಾರೆ.
ಮಂಡ್ಯ 19, ಮದ್ದೂರು 10, ಮಳವಳ್ಳಿ 9, ಪಾಂಡವಪುರ 8, ಶ್ರೀರಂಗಪಟ್ಟಣ 11, ಕೆ.ಆರ್.ಪೇಟೆ 33, ನಾಗಮಂಗಲ 9 ಹಾಗೂ ಹೊರ ಜಿಲ್ಲೆಯ 11 ಸೇರಿದಂತೆ 110 ಮಂದಿಗೆ ಕೋವಿಡ್ 19 ಪಾಸಿಟಿವ್ ಬಂದಿದೆ.
Related Articles
Advertisement
1463 ಮಂದಿಗೆ ಪರೀಕ್ಷೆ:ಸೋಮವಾರ ಒಂದೇ ದಿನ 1463 ಮಂದಿಗೆ ಕೋವಿಡ್ 19 ಪರೀಕ್ಷೆ ನಡೆಸಲಾಗಿತ್ತು. ಇದರಲ್ಲಿ 1111 ರ‍್ಯಾಪಿಡ್ ಹಾಗೂ 352 ಮಂದಿ ಆರ್‌ಟಿಪಿಸಿಆರ್ ಪರೀಕ್ಷೆಗೊಳಗಾಗಿದ್ದರು. 180 ಪ್ರಕರಣಗಳು ಗುಣಮುಖ:
ಸೋಮವಾರ 180 ಸೋಂಕಿತರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಮದ್ದೂರು 12, ಮಳವಳ್ಳಿ 62, ಶ್ರೀರಂಗಪಟ್ಟಣ 100, ನಾಗಮಂಗಲ 6 ಮಂದಿ ಗುಣಮುಖರಾಗಿದ್ದಾರೆ. ಇದುವರೆಗೂ 6177 ಪ್ರಕರಣಗಳು ಬಿಡುಗಡೆಯಾಗಿದ್ದು, 2104 ಪ್ರಕರಣಗಳು ಸಕ್ರಿಯವಾಗಿವೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಟಿ.ಎನ್.ಧನಂಜಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.