ಯಾದಗಿರಿ: ಜಿಲ್ಲೆಯಲ್ಲಿ ಕೋವಿಡ್ ರುದ್ರಾವತಾರ ಮುಂದುವರೆದಿದ್ದು ಇದೀಗ ಸೋಂಕಿತರ ಸಂಖ್ಯೆ ಸಾವಿರದ ಗಡಿ ದಾಟಿದೆ. ಬುಧವಾರವೂ 11 ಜನರಲ್ಲಿ ಒಕ್ಕರಿಸಿದ್ದು ಇದೀಗ ಸೋಂಕಿತರ ಸಂಖ್ಯೆ 1027ಕ್ಕೆ ಏರಿಕೆಯಾಗಿದೆ.
ಇಂದೂ ಕೂಡ ಸೋಂಕಿತರ ಸಂಪರ್ಕದ ಹಿನ್ನೆಲೆಯಿಂದ ಐವರಲ್ಲಿ ಸೋಂಕು ಹೊಕ್ಕಿದ್ದು, ಮಹಾಮಾರಿ ಕೋವಿಡ್ ಸುರಪುರ
ಘಟಕದ ಸಿಬ್ಬಂದಿಯನ್ನು ತಲ್ಲಣಗೊಳಿಸಿದ್ದು ಜೂನ್ 19ರಂದು ಸೋಂಕು ಪತ್ತೆಯಾಗಿದ್ದ ಮೂಲ ಸೋಂಕಿತ 8228 ಸುರುಪುರ ಘಟಕದ ಚಾಲಕನ ಸಂಪರ್ಕ ಕೊಂಡಿ ಇನ್ನು ಹನುಮನ ಬಾಲದಂತೆ ಬೆಳೆಯುತ್ತಿದೆ.
8228ರ ಸಂಪರ್ಕಕ್ಕೆ ಬಂದಿದ್ದ ಸಾರಿಗೆ ಘಟಕದ ಸಿಬ್ಬಂದಿ 58 ವರ್ಷದ ಪಿ-10660ಗೆ ಜೂನ್ 27ರಂದು ಸೋಂಕು ದೃಢವಾಗಿತ್ತು ಇದೀಗ ಈತನ ಸಂಪರ್ಕದಿಂದ ಘಟಕದ ಸಿಬ್ಬಂದಿಗಳಾದ 40 ವರ್ಷದ ಪುರುಷ ಪಿ-28684 ಮತ್ತು 46 ವರ್ಷದ ಪುರುಷ ಪಿ-28685 ಸೋಂಕು ಹರಡಿದೆ.
ಜುಲೈ 1 ರಂದು ಕೋವಿಡ್ ಗೆ ತುತ್ತಾಗಿರುವ ಸುರಪುರ ತಾಲೂಕಿನ ಚಿಂಚೋಡಿಯ 34 ವರ್ಷದ ಪುರುಷ ಪಿ-15476ರ ಸಂಪರ್ಕದಿಂದಲೂ ದಿವಳಗುಡ್ಡದ ಮೂರು ಜನ 35 ವರ್ಷದ ಮಹಿಳೆ ಪಿ-28688, 68 ವರ್ಷದ ಪುರುಷ ಪಿ-28689 ಹಾಗೂ 62 ವರ್ಷದ ಮಹಿಳೆ ಪಿ-28690ಗೆ ಸೋಂಕು ಪತ್ತೆಯಾಗಿದೆ.
ಅಲ್ಲದೇ ಸಂಕರ್ಪವೇ ಪತ್ತೆಯಾಗದ ಐವರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಯಾದಗಿರಿಯ ಅಂಬೇಡ್ಕರ್ ಚೌಕ್‌ನ 29 ವರ್ಷದ ಮಹಿಳೆ ಪಿ-28680, ಬೆಂಗಳೂರಿನಿಂದ ಹಿಂತಿರುಗಿದ್ದ ಹುಣಸಗಿ ತಾಲೂಕಿನ ಗಬಸಾವಳಿ ಕುರೆಕನಾಳದ 20 ವರ್ಷದ ಯುವಕ ಪಿ-28681, ವಿಜಯಪೂರದಿಂದ ಹಿಂತಿರುಗಿದ್ದ ಶಹಾಪುರ ತಾಲೂಕಿನ ಹಳಿಸಗರದ 20 ವರ್ಷದ ಮಹಿಳೆ ಪಿ-28682, ಯಾದಗಿರಿಯ ಹತ್ತಿಕಟ್ಟ ಏರಿಯಾದ 42 ವರ್ಷದ ಪುರುಷ ಪಿ-28683 ಹಾಗೂ ಸುರಪುರನ ಬೈಪಾಸ್ ರಸ್ತೆಯ 34 ವರ್ಷದ ಪುರುಷ ಪಿ-28687ಗೆ ಸೋಂಕು ಹರಡಿದೆ. ಮಹಾರಾಷ್ಟ್ರದಿಂದ ಹಿಂತಿರುಗಿದ ಕೆಂಭಾವಿಯ 26 ವರ್ಷದ ಪುರುಷ ಪಿ-28686ಗೆ ಸೋಂಕು ಕಾಣಿಸಿಕೊಂಡಿದೆ.
1045 ವರದಿ ಬಾಕಿ: ಬುಧವಾರ ಹೊಸದಾಗಿ 306 ಜನರ ಮಾದರಿ ಸಂಗ್ರಹಿಸಲಾಗಿದ್ದು ಇನ್ನು 1045 ಜನರ ವರದಿ ಬರಬೇಕಿದೆ. ಇಂದಿನ 275 ನೆಗೆಟಿವ್ ವರದಿ ಸೇರಿ ಈವರೆಗೆ 26428 ಜನರ ವರದಿ ನೆಗೆಟಿವ್ ಬಂದಿದೆ. ಒಟ್ಟು 1027 ಸೋಂಕಿತರಲ್ಲಿ 872 ಜನರು ಗುಣಮುಖವಾಗಿದ್ದಾರೆ. ಜಿಲ್ಲೆಯಲ್ಲಿ 96 ಕಂಟೇನ್ಮೆಟ್ ಝೊನ್‌ಗಳಲ್ಲಿ 21 ತೆರವುಗೊಳಿಸಲಾಗಿದ್ದು, ಒಟ್ಟು 10 ಸಾಂಸ್ಥಿಕ ಕ್ವಾರಂಟೈನ್ ಕೇಂದ್ರಗಳಲ್ಲಿ 452 ಜನರನ್ನು ಪ್ರತ್ಯೇಕವಾಗಿರಿಸಲಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.