Advertisement

ತೆಲಂಗಾಣ : ವೇಶ್ಯಾಗೃಹದಿಂದ 11 ಮಂದಿ ಬಾಲಕಿಯರು ಪಾರು

07:02 PM Jul 31, 2018 | udayavani editorial |

ಹೈದರಾಬಾದ್‌ : ತೆಲಂಗಾಣದ ಯದಾದ್ರಿ ಭೋಂಗೀರ್‌ ಜಿಲ್ಲೆಯ ಯಾದಗೀರಗುಟ್ಟ ಎಂಬಲ್ಲಿನ ವೇಶ್ಯಾಗೃಹವೊಂದರಿಂದ 11 ಮಂದಿ ಬಾಲಕಿಯನ್ನು  ಪಾರು ಮಾಡಲಾಗಿದೆ.

Advertisement

ಇದೇ ವೇಳೆ ಎಂಟು ಮಂದಿ ಮಾನವ ಕಳ್ಳಸಾಗಣೆಗಾರರು ಮತ್ತು ಆರು ಮಹಿಳೆಯರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಕ್ಕಳ ಸೇವಾಭಿವೃದ್ಧಿಯ ಐಸಿಡಿಎಸ್‌ ಘಟಕದ ಅಧಿಕಾರಿಗಳು ಮತ್ತು ಪೊಲೀಸರು ತಂಡ ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ 7ರಿಂದ 10 ವರ್ಷ ಪ್ರಾಯದ 11 ಮಂದಿ ಬಾಲಕಿಯರನ್ನು ವೇಶ್ಯಾಗೃಹದಿಂದ ಪಾರುಗೊಳಿಸಲಾಯಿತು ಎಂದು ಮೂಲಗಳು ತಿಳಿಸಿವೆ.

ಬಡ ಕುಟುಂಬಗಳ ಬಾಲಕಿಯರ ಮನೆಯವರಿಗೆ 1ರಿಂದ 2 ಲಕ್ಷ ರೂ. ತೆತ್ತು ಏಜಂಟರುಗಳ ಮೂಲಕ ಅವರನ್ನು ಇಲ್ಲಿಗೆ ಕರೆತರಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next