Advertisement

ಜಪಾನ್‌: ವಾಣಿಜ್ಯ ನೌಕೆ ಮುಳುಗಿ 11 ಭಾರತೀಯ ನಾವಿಕರು ನಾಪತ್ತೆ

10:05 AM Oct 14, 2017 | Team Udayavani |

ಟೋಕಿಯೋ: ಫಿಲಿಪ್ಪೀನ್ಸ್‌ ಕಡಲಿನಲ್ಲಿ ಪ್ರಬಲ ಚಂಡಮಾರುತ ಬೀಸಿದ ಪರಿಣಾಮ ವಾಣಿಜ್ಯ ನೌಕೆಯೊಂದು ಮುಳುಗಿ 11 ಮಂದಿ ಭಾರತೀಯ ನಾವಿಕರು ನಾಪತ್ತೆಯಾಗಿದ್ದಾರೆ. ಹಾಂಕಾಂಗ್‌ ನೋಂದಾಯಿತ ಎಮರಾಲ್ಡ್‌ ಸ್ಟಾರ್‌ ನೌಕೆಯಲ್ಲಿ ಒಟ್ಟು 26 ನಾವಿಕರಿದ್ದು, ಶುಕ್ರವಾರ ಬೆಳಗಿನ ಜಾವ ಅಪಾಯದ ಸಂಕೇತಗಳನ್ನು ಜಪಾನ್‌ನ ಕೋಸ್ಟ್‌ಗಾರ್ಡ್‌ಗೆ ರವಾನಿಸಿತು. ಈ ನೌಕೆಯ ಸಮೀಪವಿದ್ದ ಇತರ ಮೂರು ನೌಕೆಗಳು 15 ಮಂದಿ ನಾವಿಕರನ್ನು ರಕ್ಷಿಸುವಲ್ಲಿ ಯಶಸ್ವಿಯಾದರೆ ಉಳಿದ 11 ಮಂದಿ ನಾವಿಕರು ನಾಪತ್ತೆಯಾಗಿದ್ದಾರೆ ಎಂದು ಕೋಸ್ಟ್‌ಗಾರ್ಡ್‌ನ ವಕ್ತಾರರು ತಿಳಿಸಿದರು.

Advertisement

ನಾಪತ್ತೆಯಾಗಿರುವ ನಾವಿಕರ ಪತ್ತೆಗಾಗಿ ಎರಡು ಗಸ್ತು ಬೋಟ್‌ಗಳನ್ನು ಮತ್ತು 3 ಲಘು ವಿಮಾನಗಳನ್ನು ಬಳಸಿಕೊಳ್ಳಲಾಗಿದೆಯಾದರೂ ಚಂಡಮಾರುತದಿಂದಾಗಿ ಇವು ಸಂಕಷ್ಟದಲ್ಲಿ ಸಿಲುಕಿರುವ ವಾಣಿಜ್ಯ ನೌಕೆಯ ಸನಿಹಕ್ಕೆ ತೆರಳಲು ಸಾಧ್ಯವಾಗಿಲ್ಲ ಎಂದವರು  ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next