ಬಾಲಾಘಾಟ್: ಮಧ್ಯಪ್ರದೇಶದ ಬಾಲಾಘಾಟ್ ಜಿಲ್ಲೆಯ ಚಿನ್ನ, ಬೆಳ್ಳಿ ಮಾರಾಟಗಾರ ರಾಕೇಶ್ ಸುರಾನ ತನ್ನ 11 ಕೋಟಿ ರೂ. ಮೌಲ್ಯದ ಆಸ್ತಿಯನ್ನು ದಾನ ಮಾಡಿದ್ದಾರೆ!
ಕಾರಣವೇನು ಗೊತ್ತೇ?: ಮುಂದಿನ ಜೀವನವನ್ನು ಉಪವಾಸದಲ್ಲಿ ಕಳೆಯುತ್ತ ಭಗವಂತನನ್ನು ಸೇರಿಕೊಳ್ಳಲು!
ರಾಕೇಶ್‌ಗೆ ಬಹಳ ಹಿಂದಿನಿಂದಲೇ ಈ ಹಾದಿಯಲ್ಲಿ ಆಸಕ್ತಿಯಿತ್ತು. ಆದರೆ ಮಗ ಚಿಕ್ಕವನು ಎಂದು ಸುಮ್ಮನಿದ್ದರು. ಈಗ ಮಗ ಅಮಯ್‌ಗೆ 7 ವರ್ಷ, ಪತ್ನಿ ಲೀನಾಗೆ 36 ವರ್ಷ. ವಿಶೇಷವೆಂದರೆ ಲೀನಾ ಮತ್ತು ಅಮಯ್ ಕೂಡ ಇದೇ ತೀರ್ಮಾನ ಮಾಡಿದ್ದಾರೆ.
ಒಟ್ಟಾರೆ ಮೂವರೂ ಪ್ರಾಪಂಚಿಕ ಬದುಕು ತ್ಯಜಿಸಿ, ಉಪವಾಸ ಕೈಗೊಳ್ಳಲು ಮನಸ್ಸು ಮಾಡಿದ್ದಾರೆ. ಈ ಕುಟುಂಬವನ್ನು ಬಾಲಾಘಾಟ್ ಜೈನ ಸಮಾಜ ಬಾಂಧವರು ಹೃತ್ಪೂರ್ವಕವಾಗಿ ಬೀಳ್ಕೊಟ್ಟಿದ್ದಾರೆ.