Advertisement

ಬಳ್ಳಾರಿಗೆ ‘ಮಹಾ’ ಆಘಾತ: 8 ತಿಂಗಳ ಗರ್ಭಿಣಿ, ಮಂಗಳಮುಖಿ ಸೇರಿ 11 ಜನರಲ್ಲಿ ಸೋಂಕು ಪತ್ತೆ

11:37 AM May 21, 2020 | keerthan |

ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆಗೆ ಮಹಾಘಾತ ನೀಡಿದೆ. ಮಹಾರಾಷ್ಟ್ರದ ಮುಂಬೈ ನಗರದದಿಂದ ಬಳ್ಳಾರಿಗೆ ಬಂದಿದ್ದ 11 ಜನರಲ್ಲಿ ಕೋವಿಡ್-19 ಪಾಸಿಟಿವ್ ಬಂದಿದೆ ಎಂದು ಡಿಸಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ.

Advertisement

ನಗರದ ಡಿಸಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಬೈ ನಗರದ ಮೀನು ಮಾರುಕಟ್ಟೆಯಲ್ಲಿ ಕೆಲಸ ಮಾಡುತ್ತಿದ್ದ 65 ಜನರು ಕಳೆದ ಮೇ 6 ರಂದು ಶ್ರಮಿಕ ರೈಲು ಮೂಲಕ ನೆರೆಯ ಗುಂತಕಲ್ಲುಗೆ ಬಂದಿದ್ದಾರೆ. ಅಲ್ಲಿನ ಜಿಲ್ಲಾಧಿಕಾರಿಗಳು ನಮ್ಮನ್ನು ಸಂಪರ್ಕಿಸಿ ವಿಷಯ ತಿಳಿಸಿದಾಗ ಇಲ್ಲಿಂದ ಕೆಎಸ್ಸಾರ್ಟಿಸಿ ಬಸ್ ಮೂಲಕ ಬಳ್ಳಾರಿಗೆ ಕರೆತಂದು ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿತ್ತು. ಇವರಿಗೆ 12ನೇ ದಿನ ಗಂಟಲು ದ್ರವ್ಯ, ರಕ್ತದ ಮಾದರಿ ಪಡೆದು ಟೆಸ್ಟಿಂಗ್ ಮಾಡಿದಾಗ 7 ಜನ ಮಹಿಳೆಯರು, ಮೂವರು ಪುರುಷರು, ಒಬ್ಬ ಮಂಗಳಮುಖಿ ಸೇರಿ ಒಟ್ಟು 11 ಜನರಿಗೆ ಪಾಸಿಟಿವ್ ಎಂದು ಬಂದಿದೆ. ಇದರಲ್ಲಿ 8 ತಿಂಗಳ ಗರ್ಭಿಣಿ, 9 ತಿಂಗಳ ಮಗುವಿನ ತಾಯಿ ಇದ್ದಾರೆ ಎಂದು ಅವರು ವಿವರಿಸಿದರು.

ಕೋವಿಡ್ 19 ಸೋಂಕು ಪತ್ತೆಯಾಗಿರುವ ಎಲ್ಲರೂ ನೇರವಾಗಿ ಕ್ವಾರಂಟೈನ್ ನಲ್ಲಿದ್ದ ಕಾರಣ ಸೋಂಕಿತರು ವಾಸಿಸುತ್ತಿರುವ ಪ್ರದೇಶಗಳಲ್ಲಿ ಯಾವುದೇ ಕಂಟೈನ್ಮೆಂಟ್ ಜೋನ್ ಪ್ರದೇಶಗಳನ್ನಾಗಿ ಗುರುತಿಸಲ್ಲ ಎಂದು ಸ್ಪಷ್ಟಪಡಿಸಿದರು.

ಎಸ್ ಪಿ ಸಿ.ಕೆ.ಬಾಬಾ ಮಾತನಾಡಿ, ಮುಬೈನಿಂದ ಬಂದ 65 ಜನರಲ್ಲಿ 11 ಜನರಲ್ಲಿ ಪಾಸಿಟಿವ್ ಬಂದಿದೆ. ಇನ್ನುಳಿದವರ ವರದಿ ಬರಬೇಕಾಗಿದೆ. ಇದರಲ್ಲಿ ಬಳ್ಳಾರಿ ನಗರದಲ್ಲಿ ಬಂಡಿಮೋಟ್ ನ ಒಬ್ಬರು ಸೇರಿ 6 ಜನರು, ರೂಪನಗುಡಿ 3, ಚಾಗನೂರು 1, ನಾಗೇನಹಳ್ಳಿಯ ಒಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಚ್.ಎಲ್.ಜನಾರ್ಧನ್ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next