Advertisement

ಸಾವಿನ ಮನೆಯಲ್ಲಿ “ಮೋಕ್ಷ’ದ ನೆರಳು!

06:00 AM Jul 03, 2018 | |

ಹೊಸದಿಲ್ಲಿ: ದಿಲ್ಲಿಯ ಬುರಾರಿಯಲ್ಲಿ ರವಿವಾರ ನಡೆದ ಒಂದೇ ಕುಟುಂಬದ 11 ಮಂದಿಯ ನಿಗೂಢ ಸಾವು ಪ್ರಕರಣ ಅಚ್ಚರಿ ಹಾಗೂ ಆಘಾತಕಾರಿ ಅಂಶಗಳನ್ನು ಹೊರ ಹಾಕಿದೆ. ಮೃತರಲ್ಲಿ 8 ಮಂದಿಯ ಮರ ಣೋತ್ತರ ಪರೀಕ್ಷೆ ಪೂರ್ಣಗೊಂಡಿದ್ದು, ಅವರೆಲ್ಲರೂ ನೇಣಿಗೆ ಶರಣಾಗಿರುವುದು ದೃಢ ಪಟ್ಟಿದೆ. ಇನ್ನೂ ಮೂವರ ಶವ ಪರೀಕ್ಷೆ ವರದಿ ಇನ್ನೂ ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಇದೇ ವೇಳೆ, ಮನೆಯಲ್ಲಿ ದೊರೆತಿರುವ ಕೈಬರಹವಿರುವ ಪತ್ರಗಳಲ್ಲಿ ವಿಚಿತ್ರವಾದ ಅಂಶಗಳಿದ್ದು, ಮೋಕ್ಷ ಪಡೆಯುವ ಉದ್ದೇಶ ದಿಂದ ಇಡೀ ಕುಟುಂಬವೇ ಆತ್ಮಹತ್ಯೆ ಮಾಡಿ ಕೊಂಡಿದೆಯೇ ಎಂಬ ಅನುಮಾನ ಮೂಡಿ ಸಿದೆ. “ವ್ಯಕ್ತಿಗಳು ಸಾಯುವುದಿಲ್ಲ, ಬದಲಾಗಿ ಶ್ರೇಷ್ಠವಾದದ್ದನ್ನು ಸಾಧಿಸುತ್ತಾರೆ’ ಎಂದೂ ಅದರಲ್ಲಿ ಬರೆಯಲಾಗಿದೆ. ಇದೇ ವೇಳೆ, ನಮ್ಮ ಕುಟುಂಬಕ್ಕೆ ಧಾರ್ಮಿಕ ನಂಬಿಕೆ ಹೆಚ್ಚೇ ಇತ್ತು ನಿಜ. ಆದರೆ ಅವರು ಬಾಬಾ, ಮಂತ್ರವಾದಿಗಳನ್ನು ನಂಬುತ್ತಿರಲಿಲ್ಲ. ಅವರು ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವಿಲ್ಲ, ಇದು ಕೊಲೆ ಎಂದು ರಾಜಸ್ಥಾನದಲ್ಲಿದ್ದ ಕುಟುಂಬದ ಇಬ್ಬರು ಸದಸ್ಯರು ಹೇಳಿದ್ದಾರೆ.

11 ಪೈಪ್‌: 11 ಮಂದಿ ಮೃತಪಟ್ಟಿರುವ ಮನೆಯ ಹೊರಗೋಡೆಯಲ್ಲಿ 11 ಪೈಪ್‌ಅಳವಡಿಸಿರುವುದು ಮತ್ತೂಂದು ವಿಶೇಷ. ಈ ಪೈಕಿ 7 ಪೈಪ್‌ ಒಂದೇ ಗಾತ್ರವಿದ್ದು ನೇರವಾಗಿದ್ದರೆ, ಉಳಿದ 4 ಸಮಾನ ಗಾತ್ರ ಹೊಂದಿದ್ದು, ವಕ್ರವಾಗಿವೆ. ಕುತೂಹಲಕಾರಿ ಅಂಶವೆಂದರೆ, ಮೃತರಲ್ಲಿ 7 ಮಹಿಳೆಯರಾಗಿದ್ದರೆ, 4 ಪುರುಷರು. ಈ ಪೈಪ್‌ಮೂಲಕ ಮೃತರ ಆತ್ಮ ಹೊರಹೋಗಿ ಮೋಕ್ಷ ಪಡೆಯಲಿದೆ ಎಂಬ ಆಲೋಚನೆಯಿತ್ತೇ ಎಂಬ ಮಾತುಗಳೂ ಕೇಳಿಬರತೊಡಗಿವೆ.

ಪವಾಡ ನಡೆದಿತ್ತಂತೆ!: ಒಂದು ಅಪಘಾತ ಮತ್ತು ತದನಂತರ ನಡೆದ ಪವಾಡವು ಈ ಕುಟುಂಬವನ್ನು ಆಳವಾಗಿ ಅಧ್ಯಾತ್ಮದತ್ತ ತಿರುಗುವಂತೆ ಮಾಡಿತ್ತು ಎಂದು ಸಂಬಂಧಿಯೊಬ್ಬರು ತಿಳಿಸಿದ್ದಾರೆ. 

ಪತ್ರದಲ್ಲಿ ಬರೆಯಲಾಗಿದ್ದ ಅಂಶಗಳಿವು
1. ಗುರುವಾರ ಅಥವಾ ರವಿವಾರವನ್ನೇ ಆಯ್ಕೆ ಮಾಡಿಕೊಳ್ಳಿ.
2. ಸ್ವಲ್ಪವೂ ಕಾಣದಂತೆ ಕಣ್ಣಿಗೆ ಬಿಗಿಯಾಗಿ ಬಟ್ಟೆ ಕಟ್ಟಿ. 
3. ಕೊಲ್ಲುವ 7 ದಿನಗಳ ಮುಂಚೆಯೇ ವಿಧಿವಿಧಾನಗಳನ್ನು ಸಮರ್ಪಕವಾಗಿ ಅನುಸರಿಸಬೇಕು. ಈ ದಿನಗಳಲ್ಲೇ ದೈವ ಒಲಿದರೆ, ಮಾರನೇ ದಿನವೆ ನಿಮ್ಮ “ಆ ಕೆಲಸ’ವನ್ನು ಪೂರ್ಣಗೊಳಿಸಿ.
4. ಹೆಚ್ಚು ವಯಸ್ಸಾದ ಮಹಿಳೆಗೆ ನಿಲ್ಲಲು ಆಗಲ್ಲ ಎಂದಾದರೆ, ಅವರನ್ನು ಪಕ್ಕದ ಕೊಠಡಿಯಲ್ಲಿ ನಿದ್ರಿಸುವಂತೆ ಮಾಡಿ.
5. ಮಂದ ಬೆಳಕಿರುವ ದೀಪ ಬಳಸಿ.
6. ಕೈಗಳನ್ನು ಕಟ್ಟಿದ ಬಳಿಕವೂ ಬಟ್ಟೆ ಉಳಿದರೆ, ಅದನ್ನು ಕಣ್ಣಿಗೆ ಕಟ್ಟಿ.
7. ಬಾಯಿ ಮುಚ್ಚಲು ಬಳಸುವ ಬಟ್ಟೆಯನ್ನು ಬಿಗಿಯಾಗಿ ಕಟ್ಟಿರಬೇಕು.
8. ಹೆಚ್ಚು ಬದ್ಧತೆಯಿಂದ ಇದನ್ನು° ಮಾಡಿದರೆ, ಉತ್ತಮ ಫ‌ಲಿತಾಂಶ
9. ಈ ಕೆಲಸಗಳನ್ನು ರಾತ್ರಿ 12ರಿಂದ 1 ಗಂಟೆಯೊಳಗೆ ನಡೆಸಬೇಕು. ಅದಕ್ಕೂ ಮೊದಲು ಹವನ ಮುಗಿಸಬೇಕು.
10. ಎಲ್ಲರೂ ಒಂದೇ ರೀತಿಯ ಆಲೋಚನೆ ಹೊಂದಿರಬೇಕು. ಇವುಗಳನ್ನು ಸರಿಯಾಗಿ ಮಾಡಿದರೆ, ಫ‌ಲಿತಾಂಶ ಫ‌ಲಪ್ರದವಾಗಿರುತ್ತದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next