Advertisement
ಕುಪಿತರಾದ ಶಾಸಕರು ಸರ್ವೋಚ್ಚ ನ್ಯಾಯಾಲಯದ ಮೊರೆ ಹೋದರು. ಆದರೆ ಇತ್ತೀಚೆಗೆ ಮಣಿಪುರ ರಾಜ್ಯದ ಅರಣ್ಯ ಸಚಿವರಾಗಿದ್ದ ಶ್ಯಾಮ ಕುಮಾರ್‌ರವರ ಅನರ್ಹತೆಯ ಪ್ರಕರಣವನ್ನು ಆಲಿಸಿದ ಸರ್ವೋಚ್ಚ ನ್ಯಾಯಾಲಯ ಶಾಸಕರ ಅನರ್ಹತೆಯನ್ನು ನಿರ್ಧರಿಸುವ ವ್ಯಾಪ್ತಿ ಸ್ಪೀಕರ್‌ಗೆ ಇರುವುದು ನ್ಯಾಯಯುತವಾದುದಲ್ಲ, ಈ ಬಗ್ಗೆ ಪ್ರತ್ಯೇಕ ಸ್ವತಂತ್ರ ಪ್ರಾಧಿಕಾರ ರಚಿಸುವುದು ಉತ್ತಮ ಎಂಬ ಸಲಹೆ ನೀಡಿದೆ. ಈ ಸಂಬಂಧ ಹತ್ತನೇ ಶೆಡ್ನೂಲ್‌ನ ಔಚಿತ್ಯದ ಗ್ರಹಿಕೆಗೆ ಸಹಕಾರಿಯಾಗಬ ಹುದಾದ ಕೆಲವು ಅಂಶಗಳು ಇಲ್ಲಿವೆ.
Related Articles
Advertisement
ಮೇಲಾಗಿ ಈ ಕಾನೂನಿನ ಉದ್ದೇಶವೇ ಸ್ಪಷ್ಟವಾಗಿಲ್ಲ. ಚುನಾಯಿತ ಪ್ರತಿನಿಧಿಗಳು ಪಕ್ಷದಿಂದ ಪಕ್ಷಕ್ಕೆ ಜಿಗಿಯುವುದನ್ನು ತಡೆಯುವುದೇ ಮುಖ್ಯ ಉದ್ದೇಶವೆಂಬುದನ್ನು ಈ ಕಾನೂನು ಖಚಿತಪಡಿಸುವುದಿಲ್ಲ. ಒಂದು ಪಕ್ಷದ ಮೂರನೇ ಒಂದರಷ್ಟು ಸದನ ಸದಸ್ಯರು ಆ ಪಕ್ಷವನ್ನು ತ್ಯಜಿಸಿ ಇನ್ನೊಂದು ಪಕ್ಷ ಸೇರಿದರೆ ಅದನ್ನು ವಿಲೀನ ಎಂದೂ, ಮೂರನೇ ಎರಡಷ್ಟು ಮಂದಿ ಪಕ್ಷ ತ್ಯಜಿಸಿದರೆ ವಿಭಜನೆ ಎಂದೂ ಪರಿಗಣಿಸುವ ಅವಕಾಶವಿದೆ ಎಂಬ ಉಲ್ಲೇಖವಿದೆ. ಆಗ ಅವರ ಸದಸ್ಯತ್ವ ರದ್ದಾಗುವುದಿಲ್ಲ.
ಹೀಗೆ ನಾನಾ ನ್ಯೂನತೆಗಳೊಂದಿಗೆ ಗಂಭೀರವಾದ ಲೋಪವೊಂದು ಈ ಕಾನೂನನ್ನು ಕಾಡುತ್ತಿದೆ. ಅದಾವುದೆಂದರೆ ಸ್ಪೀಕರ್‌ಗೆ ದತ್ತವಾದ ಅನರ್ಹತೆಯನ್ನು ನಿರ್ಧರಿಸುವ ಅಧಿಕಾರ. ಚುನಾಯಿತ ಪ್ರತಿನಿಧಿ ಸ್ವಇಚ್ಛೆಯಿಂದ ಪಕ್ಷಕ್ಕೆ ರಾಜಿನಾಮೆ ನೀಡಿದ ಹಾಗೂ ವಿಪ್‌ನ್ನು ಉಲ್ಲಂಘಿಸಿದ ದೂರನ್ನು ಈ ಕಾನೂನಿನಂತೆ ಸ್ಪೀಕರ್‌ಗೆ ಸಲ್ಲಿಸತಕ್ಕದ್ದು. ಸಭಾಪತಿ ಯಾ ಸ್ಪೀಕರ್ ಆ ಪ್ರಕರಣವನ್ನು ಒಂದು ನ್ಯಾಯಸ್ಥಾನ ಇತ್ಯರ್ಥ ಪಡಿಸುವ ರೀತಿಯಂತೆ ನಿರ್ಣಯಿಸಬೇಕಾದ ಜವಾಬ್ದಾರಿ ಇದೆ. ವಿಪರ್ಯಾಸವೆಂದರೆ ಆ ನ್ಯಾಯಾಧಿಕರಣದ ಕ್ಷಮತೆ ಸ್ಪೀಕರ್‌ಗೆ ಇರಬೇಕಾಗಿಲ್ಲ. ವಾಸ್ತವಾಗಿ ಇರುವುದೂ ಇಲ್ಲ. ಆತನೂ ಓರ್ವ ರಾಜಕಾರಣಿಯೇ ಆಗಿರುತ್ತಾನೆ. ಹಾಗಾಗಿ ಪ್ರಕರಣಗಳು ನ್ಯಾಯಾಧಿಕರಣದಲ್ಲಿ ಇತ್ಯರ್ಥಗೊಂಡ ಹಾಗೆ ಪರಿಹಾರಗೊಳ್ಳಲು ಸಾಧ್ಯವಿಲ್ಲ. ಅದೂ ಅಲ್ಲದೆ, ಸ್ಪೀಕರ್ ಕೂಡ ಒಬ್ಬ ರಾಜಕೀಯ ಪಕ್ಷದ ನೇತಾರ. ಆತನಿಂದ ನಿಷ್ಪಕ್ಷಪಾತವಾದ ಹಾಗೂ ನ್ಯಾಯಯುತವಾದ ತೀರ್ಮಾನ ಬರುವುದೂ ಅನುಮಾನ. ಈ ಅಂಶವನ್ನು ಸರ್ವೋಚ್ಚ ನ್ಯಾಯಾಲಯ ಈಗ ಗಂಭೀರವಾಗಿ ಪರಿಗಣಿಸಿದೆ. ಕರ್ನಾಟಕದಲ್ಲಿ ಇತ್ತೀಚೆಗೆ ಶಾಸಕರ ಪಕ್ಷಾಂತರ ಹಾಗೂ ಅವರನ್ನು ಅನರ್ಹಗೊಳಿಸಿದ ಪ್ರಕರಣವೂ ಒಂದೇ ಸ್ವರೂಪದ್ದಾಗಿದ್ದು ನ್ಯಾಯಾಲಯ ಜನಪ್ರತಿನಿಧಿಗಳ ಅನರ್ಹತೆಯನ್ನು ನಿರ್ಧರಿಸುವ ಅಧಿಕಾರ ಸ್ಪೀಕರ್‌ಗೆ ಬೇಡ. ಅದಕ್ಕೆ ಪ್ರತ್ಯೇಕ ಸ್ವತಂತ್ರ ಪ್ರಾಧಿಕಾರ ರಚಿಸುವುದೇ ಸೂಕ್ತ ಎಂಬ ಅಭಿಪ್ರಾಯ ವ್ಯಕ್ತಪಡಿಸಿರುವುದರಲ್ಲಿ ಅನುಮಾನವಿಲ್ಲ.
ಇಷ್ಟಾಗಿ ಇಲ್ಲಿ ಗಹನವಾದ ವಿಚಾರ ಯಾವುದು ಮತ್ತು ಆ ವಿಚಾರಕ್ಕೆ ಸಂಬಂಧಿಸಿ ಹತ್ತನೇ ಶೆಡ್ನೂಲಿನ ಉಪಯುಕ್ತತೆ ಏನೆಂಬುದರ ಚರ್ಚೆ ಅಗತ್ಯ. ಅಧಿಕಾರ ದಾಹ ಮತ್ತು ಪ್ರಲೋಭನೆಯಿಂದಾಗಿ ಚುನಾಯಿತ ರಾಜಕಾರಣಿಗಳು ಪಕ್ಷದಿಂದ ಪಕ್ಷಕ್ಕೆ ಜಿಗಿಯುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ನಿಜ. ಇದರಿಂದಾಗಿ ಸರಕಾರಗಳು ಹಠಾತ್ ಪತನಗೊಳ್ಳುವುದು ಹಾಗೂ ತಾತ್ವಿಕವಾಗಿ ಭಿನ್ನಾಭಿಪ್ರಾಯವುಳ್ಳ ರಾಜಕೀಯ ಪಕ್ಷಗಳು ಕೇವಲ ಅಧಿಕಾರಕ್ಕಾಗಿ ಒಂದಾಗಿ ಸರಕಾರ ನಡೆಸುವುದು, ಹೊಂದಾಣಿಕೆಯಿಲ್ಲದೆ ನಡೆಸುವ ಆಡಳಿತದಿಂದ ಸಾರ್ವಜನಿಕರಿಗೆ ಸಂವಿಧಾನಾತ್ಮಕವಾದ ಆಡಳಿತದ ಸವಿಯನ್ನು ಉಣ್ಣಲಾಗದ ಸ್ಥಿತಿ, ಇದನ್ನೆಲ್ಲ ನಾವು ನೋಡುತ್ತಿದ್ದೇವೆ. ಪಕ್ಷಾಂತರ ಒಂದು ಪಿಡುಗು. ಇದು ಪ್ರಜಾಸತ್ತೆಗೆ ಅಪಾಯಕಾರಿ ಎಂಬುದರಲ್ಲಿ ಎರಡು ಮಾತಿಲ್ಲ.
ಇದನ್ನು ಸಮರ್ಥ ಹಾಗೂ ಸಮರ್ಪಕವಾಗಿ ನಿಯಂತ್ರಿಸದೆ ಇದ್ದಲ್ಲಿ ಪ್ರಜಾಸತ್ತೆಗೆ ಅರ್ಥವೇ ಇಲ್ಲವೆಂಬ ಮಾತು ಅಷ್ಟೇ ನಿಜ. ಹಾಗಾಗಿ ಪ್ರಗತಿಪರ ಸರಕಾರ ಇದನ್ನು ನಿಯಂತ್ರಿಸಲೇಬೇಕು. ಇಲ್ಲವಾದರೆ ಪ್ರಜಾಸತ್ತಾತ್ಮಕ ಆಡಳಿತ ವ್ಯವಸ್ಥೆಯಲ್ಲಿ ಜನರು ನಂಬಿಕೆ ಕಳೆದುಕೊಳ್ಳುವುದರಲ್ಲಿ ಸಂಶಯವಿಲ್ಲ.
ಆದರೆ ಆ ಬಗ್ಗೆ ಈಗಾಗಲೇ ತಂದು ಚಾಲ್ತಿಯಲ್ಲಿರುವ ಹತ್ತನೇ ಶೆಡ್ನೂಲ್‌ನಿಂದ ಏನಾದರೂ ಹಾಗೂ ಎಷ್ಟಾದರೂ ಪ್ರಯೋಜನ ಆಗಿದೆಯೇ? ಕಳೆದ ಮೂವತ್ತು ವರ್ಷದಿಂದ ಊರ್ಜಿತದಲ್ಲಿದ್ದ ಈ ಕಾನೂನು ನ್ಯಾಯ ಒದಗಿಸಿದ ಉದಾಹರಣೆಯುಂಟೇ? ಸಂವಿಧಾನದ ಮೂಲಾಶಯಕ್ಕೆ ವಿರೋಧವಾದ ಈ ನಿರರ್ಥಕ ಕಾನೂನನ್ನು ಮುಂದುವರಿಸುವುದರಿಂದ ಯಾವ ಪುರಷಾರ್ಥವಿದೆ?ಭಾರತದಲ್ಲಿ ರಾಜಕಾರಣವನ್ನು ಸ್ವತ್ಛಗೊಳಿಸಿ ಶುದ್ಧ ಆಡಳಿತ ನೀಡುವ ನೈಜ ಕಾಳಜಿ ಇರುವುದಾದರೆ ಸರಕಾರ ಜನತಾ ಪ್ರಾತಿನಿಧ್ಯ ಕಾಯಿದೆಗಳನ್ನು ಪರಿಷ್ಕರಿಸಿ ಬಲಪಡಿಸಬೇಕು. ಹಾಲಿ ಜನತಾ ಪ್ರಾತಿನಿಧ್ಯ ಕಾಯಿದೆಗಳು ಸಂವಿಧಾನದ ಆಶಯದಂತೆ ಶುದ್ಧ ಆಡಳಿತ ನಡೆಸಲು ಪೂರಕವಾಗಿಲ್ಲ. ಬದಲು ರಾಜಕಾರಣ ಹಾಗೂ ರಾಜಕಾರಣಿಗಳನ್ನು ಬೆಳೆಸಲು ಪೂರಕವಾಗಿದೆ. ಕಾನೂನಿನಲ್ಲಿ ಸಾಕಷ್ಟು ಸುಧಾರಣೆಗೆ ಅವಕಾಶವಿದ್ದರೂ ಇಲ್ಲಿಯ ತನಕದ ಸರಕಾರಗಳು ಕ್ರಾಂತಿಕಾರಿ ಸುಧಾರಣೆಗಳನ್ನು ತರಲೇ ಇಲ್ಲ. ತಂದವುಗಳು ಮತದಾರ ಕೇಂದ್ರೀಕೃತವಾದವುಗಳಲ್ಲದೆ ಅಭ್ಯರ್ಥಿ ಕೇಂದ್ರೀಕೃತವಾದವುಗಳಲ್ಲ. ಸಂವಿಧಾನದ ಮೂಲಾಶಯಕ್ಕೆ ವಿರೋಧವಾಗಿ ರಾಜಕೀಯ ಹಾಗೂ ರಾಜಕೀಯ ಪಕ್ಷವನ್ನು ಸದನದೊಳಗೆ ಪ್ರವೇಶಿಸಲು ಅವಕಾಶ ಕಲ್ಪಿಸಿದ ಹತ್ತನೇ ಶೆಡ್ನೂಲ್‌ನ್ನು ರದ್ದುಪಡಿಸಿ ಜನತಾ ಪ್ರಾತಿನಿಧ್ಯ ಕಾಯಿದೆಗಳನ್ನು ಬಲಪಡಿಸಲು ಇದು ಸಕಾಲ. ಇದರಿಂದ ಹತ್ತನೇ ಶೆಡ್ನೂಲ್‌ಗೋಸ್ಕರ ಒಂದು ಅನ್ಯಥಾ ನ್ಯಾಯಾಧೀಕರಣ ಪ್ರಾಧಿಕಾರ ಸ್ಥಾಪನೆ, ನಿರ್ವಹಣೆ ಇತ್ಯಾದಿ ಆರ್ಥಿಕ ಹೊರೆಯೂ ಕಡಿಮೆಯಾಗುತ್ತದೆ. – ಬೇಳೂರು ರಾಘವ ಶೆಟ್ಟಿ