Advertisement

Cheetah: ನಮೀಬಿಯಾದಿಂದ ತರಲಾದ 10ನೇ ಚೀತಾ ಸಾವು

10:51 PM Jan 16, 2024 | Team Udayavani |

ಭೋಪಾಲ್‌:“ಪ್ರಾಜೆಕ್ಟ್ ಚೀತಾ” ದಡಿ ನಮೀಬಿಯಾದಿಂದ ತರಲಾಗಿದ್ದ ಮತ್ತೂಂದು ಚೀತಾ ಮಂಗಳವಾರ ಮೃತಪಟ್ಟಿದೆ. ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನದಲ್ಲಿದ್ದ ಶೌರ್ಯ ಹೆಸರಿನ ಚೀತಾ, ಕಳೆದ ಕೆಲವು ದಿನಗಳಿಂದ ನಡೆಯಲು ಕಷ್ಟಪಡುತ್ತಿತ್ತು.

Advertisement

ಅದನ್ನು ಹಿಡಿದು, ಚಿಕಿತ್ಸೆ ನೀಡಲು ಯತ್ನಿಸಿದರೂ ಚಿಕಿತ್ಸೆಗೆ ಸ್ಪಂದಿಸದೇ ಮಂಗಳವಾರ ಅಸುನೀಗಿದೆ. ಈ ಮೂಲಕ ನಮೀಬಿಯಾದಿಂದ ಬಂದ 20 ಚೀತಾಗಳ ಪೈಕಿ 10 ಚೀತಾಗಳು ಸಾವಿಗೀಡಾದಂತಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next