Advertisement

Guruvayur Devaswam ಒಡೆತನದಲ್ಲಿ 1,085 ಕೆ.ಜಿ. ಚಿನ್ನ!

02:05 AM Oct 07, 2024 | Team Udayavani |

ತೃಶೂರ್‌: ಕೇರಳದ ಪ್ರಸಿದ್ಧ ದೇಗುಲ ಆಡಳಿತ ಮಂಡಳಿಗಳಲ್ಲಿ ಒಂದಾಗಿರುವ ಗುರುವಾಯೂರು ದೇವಸ್ವಂ ಮಂಡಳಿ ವ್ಯಾಪ್ತಿಯಲ್ಲಿ 1,085 ಕೆ.ಜಿ. ಚಿನ್ನ, 271 ಎಕ್ರೆ ಜಮೀನಿನ ಮಾಲಕತ್ವ ಹೊಂದಿದೆ. 1,085 ಕೆ.ಜಿ.ಚಿನ್ನದ ಪೈಕಿ ಎಸ್‌ಬಿಐನಲ್ಲಿ 869 ಕೆ.ಜಿ. ಚಿನ್ನವನ್ನು ಹೂಡಿಕೆ ಮಾಡಲಾಗಿದ್ದು, 7 ಕೋಟಿ ವಾರ್ಷಿಕ ಬಡ್ಡಿ ಪ್ರಾಪ್ತವಾಗುತ್ತಿದೆ.

Advertisement

ಇದರ ಜತೆಗೆ 2,053 ಕೋಟಿ ರೂ.ಗಳ ಸ್ಥಿರ ಠೇವಣಿ ಕೂಡ ಹೊಂದಿದೆ ಎಂದು ಮಂಡಳಿ ತಿಳಿಸಿದೆ. ಈ ಬಗ್ಗೆ ಎರ್ನಾಕುಳಂನ ವ್ಯಕ್ತಿಯೊಬ್ಬರು ಮಾಹಿತಿ ಹಕ್ಕು ಕಾಯ್ದೆ ಅನ್ವಯ ಹಾಕಿದ್ದ ಅರ್ಜಿಗೆ ನೀಡಿದ ಉತ್ತರದಲ್ಲಿ ಈ ವಿವರ ಗಳನ್ನು ನೀಡಲಾಗಿದೆ. ದೇವಾಲಯಗಳ ದೈನಂದಿನ ಪೂಜೆಯಲ್ಲಿ ಇನ್ನಷ್ಟು ಚಿನ್ನ ಬಳಕೆಯಾಗುತ್ತಿದ್ದು, ಲಭ್ಯವಿರುವ ಎಲ್ಲ ಚಿನ್ನದ ಮೌಲ್ಯ ಪರಿಶೀಲಿಸುವಂತೆ ಹೈಕೋರ್ಟ್‌ಗೆ ಪಿಐಎಲ್‌ ಸಲ್ಲಿಕೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next