Advertisement

108 ಆಂಬುಲೆನ್ಸ್ ಸಿಬ್ಬಂದಿಗಳ ಬೇಜವಾಬ್ದಾರಿತನ! ಮಾನವಿಯತೆ ಮೆರೆದ ಕಂದಾಯ ಇಲಾಖೆ ಅಧಿಕಾರಿ

11:26 AM Aug 02, 2024 | sudhir |

ತೀರ್ಥಹಳ್ಳಿ : ಜೀವ ಉಳಿಸಲು ವೈದ್ಯರು ಎಷ್ಟು ಮುಖ್ಯವೋ ನಮ್ಮನ್ನು ಆಸ್ಪತ್ರೆಗೆ ಕರೆದೊಯ್ಯಲು ಇರುವ ಆಂಬುಲೆನ್ಸ್ ವಾಹನ ಕೂಡ ಅಷ್ಟೇ ಮುಖ್ಯ. ಆದರೆ ಬೆಂಗಳೂರು 108 ಸಿಬ್ಬಂದಿಗಳ ಬೇಜವಾಬ್ದಾರಿತನಕ್ಕೆ ಆಕ್ರೋಶ ವ್ಯಕ್ತವಾದ ಘಟನೆ ಗುರುವಾರ(ಆ.01) ಸಂಜೆ ನಡೆದಿದೆ.

Advertisement

ಪುಷ್ಯ ಮಳೆ ಅಬ್ಬರಕ್ಕೆ ತಾಲೂಕಿನಾದ್ಯಂತ ಅತೀ ಹೆಚ್ಚು ಮಳೆಯಾಗುತ್ತಿರುವುದರಿಂದ ಪ್ರವಾಹ ಬಂದ ಹಿನ್ನಲೆಯಲ್ಲಿ ಕುರುವಳ್ಳಿಯ ಜಯಚಾಮರಾಜೇಂದ್ರ ತುಂಗಾ ಸೇತುವೆ ಪಕ್ಕ ವಾಸಿಸುವ ಟೆಂಟ್ ತುಂಗಾ ಕಾಲೋನಿ ನಿವಾಸಿಗಳನ್ನು ಪಟ್ಟಣದ ಕೆ ಟಿ ಕೆ ಕಲ್ಯಾಣ ಮಂಟಪ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.
ಈ ಕಾಳಜಿ ಕೇಂದ್ರದ ನಿರಾಶ್ರಿತರಲ್ಲಿ 9 ತಿಂಗಳು ತುಂಬಿದ ತುಂಬು ಗರ್ಭಿಣಿ ಮಹಿಳೆ ಇದ್ದು ಅವರಿಗೆ ತಿವ್ರ ತರದ ಹೊಟ್ಟೆ ನೋವು ಕಾಣಿಸಿಕೊಂಡಿದೆ. ತಕ್ಷಣ 108 ಆಂಬುಲೆನ್ಸ್ ಗೆ ಅಲ್ಲೇ ಇದ್ದ ನಿರಾಶ್ರಿತರಲ್ಲಿ ಒಬ್ಬರು ಕರೆ ಕೂಡ ಮಾಡಿದ್ದಾರೆ. ಕರೆ ಮಾಡಿ 45 ನಿಮೀಷ ವಾದರೂ ಆಂಬುಲೆನ್ಸ್ ಬಂದಿಲ್ಲ .ಮಳೆ ಇದ್ದುದರಿಂದ ರಸ್ತೆಯಲ್ಲಿ ಯಾವುದೇ ವಾಹನ ಕೂಡ ಇರಲಿಲ್ಲ ನಂತರ ಪುನಃ ಮತ್ತೆ 108 ಆಂಬುಲೆನ್ಸ್ ಗೆ ಕರೆ ಮಾಡಿದರೆ ತೀರ್ಥಹಳ್ಳಿ ಎಲ್ಲಿ ಬರುತ್ತೆ,ಕೆ.ಟಿ.ಕೆ ಎಲ್ಲಿ ಬರುತ್ತೆ… ? ಯಾವ ಊರು ನೀವು ಹೇಳಿದಲ್ಲಿಗೆ ಬರಲು ಆಗುವುದಿಲ್ಲ ಒಂದು ಘಂಟೆ ಕಾಯಿರಿ ಎಂದು ಬೇಜವಾಬ್ದಾರಿ ಮಾತನ್ನು ಬೆಂಗಳೂರು 108
ಆಂಬುಲೆನ್ಸ್ ಸಿಬ್ಬಂದಿಗಳು ಹೇಳಿದ್ದಾರೆ. ಆಂಬುಲೆನ್ಸ್ ಬಾರದ ಕಾರಣ ಮಹಿಳೆಗೆ ಹೊಟ್ಟೆ ತುಂಬಾ ನೋವಾಗಿ ವದ್ದಾಡುತ್ತಾ ಇರುವಾಗ ಅಲ್ಲಿನ ನಿರಾಶ್ರಿತರು ಏನಾದರೂ ಅವಗಢ ಆದ ಮೇಲೆ ಅಂಬುಲೆನ್ಸ್ ನವರು ಬರ್ತಾರಾ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಬಗ್ಗೆ ಜಯಚಾಮರಾಜೇಂದ್ರ ಆಸ್ಪತ್ರೆ ಮುಖ್ಯವೈದ್ಯಾಧಿಕಾರಿ ಹಾಗೂ ತಾಲೂಕು ವೈದ್ಯಾಧಿಕಾರಿ, ಜಿಲ್ಲಾ ವೈದ್ಯಾಧಿಕಾರಿಗಳು ಗಮನಿಸಿ ಮುಂದೆ ಈ ರೀತಿ ಆಗದಂತೆ ಜನರ ಕಷ್ಟಕ್ಕೆ ಸ್ಪಂದನೆ ಮಾಡುವಂತೆ 108ಬೆಂಗಳೂರು ಆಂಬುಲೆನ್ಸ್ ಸಿಬ್ಬಂದಿಗಳಿಗೆ ತಿಳಿ ಹೇಳಬೇಕಿದೆ.

ಮಾನವೀಯತೆ ಮೆರೆದ ಕಂದಾಯ ಇಲಾಖೆ ಅಧಿಕಾರಿ ಸುಧೀರ್ ..!

Advertisement

ಈ ವೇಳೆ ನಿರಾಶ್ರಿತರ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ಅದಿಕಾರಿ ನಿರಾಶ್ರಿತರಿಗೆ ಕಾಫಿ, ಟೀ ಕೊಡಲು ತಾವೇ ಖುದ್ದಾಗಿ ಕೆ ಟಿ ಕೆ ಕಲ್ಯಾಣ ಮಂಟಪಕ್ಕೆ ಬರುತ್ತಿದ್ದ ಕಂದಾಯ ಇಲಾಖೆ ಅಧಿಕಾರಿಗಳಾದ ಸುಧೀರ್ ರವರು ಮಹಿಳೆ ಹೊಟ್ಟೆ ನೋವೂ ತಾಳಲಾರದೆ ವದ್ದಾಡುವುದನ್ನು ನೊಡಿ ತಕ್ಷಣ ತಡಮಾಡದೇ 108 ವಾಹನ ಕಾಯದೆ ತಮ್ಮ ಕಾರಿನಲ್ಲಿ ಗರ್ಭಿಣಿ ಮಹಿಳೆಯನ್ನು ಕುರಿಸಿಕೊಂಡು ಹೋಗಿ ಜಯಚಾಮರಾಜೇಂದ್ರ ತಾಲೂಕು ಆಸ್ಪತ್ರೆಗೆ ಬಿಟ್ಟಿದ್ದಾರೆ.

ಕಂದಾಯ ಇಲಾಖೆ ಅಧಿಕಾರಿಗಳಿಗೆ ಧನ್ಯವಾದ ತಿಳಿಸಿದ ತುಂಗಾ ಕಾಲೋನಿ ನಿರಾಶ್ರಿತರು

ತಕ್ಷಣ ಸ್ಪಂದಿಸಿದ ಕಂದಾಯ ಇಲಾಖೆ ಅಧಿಕಾರಿಗಳಾದ ಸುಧೀರ್ ಅವರ ಮಾನವೀಯತೆಗೆ ನಿರಾಶ್ರಿತರ ಕೇಂದ್ರದಲ್ಲಿ ಆಶ್ರಯ ಪಡೆಯುತ್ತಿರುವ ಎಲ್ಲಾ ನಿರಾಶ್ರಿತರು ಸಂತಸ ಪಟ್ಟು ಕಂದಾಯ ಇಲಾಖೆ ಅಧಿಕಾರಿ ಸುಧೀರ್ ಮತ್ತು ಮೋಹನೇಶ್, ಲೋಕೇಶ್ ರವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

ಇದನ್ನೂ ಓದಿ: ಉಕ್ಕಿ ಹರಿಯುತ್ತಿರುವ ತುಂಗಭದ್ರಾ: ವಿಠಲಾಪುರದಲ್ಲಿ 16 ಮನೆಗಳು ಜಲಾವೃತ, ಕಾಳಜಿ ಕೇಂದ್ರ ಆರಂಭ

Advertisement

Udayavani is now on Telegram. Click here to join our channel and stay updated with the latest news.

Next