Advertisement
ಬಂಧಿತ ಆರೋಪಿಯನ್ನು ಪಣಂಬೂರು ಪೊಲೀಸರ ವಶಕ್ಕೆ ಮುಂಬಯಿ ವಿಮಾನ ನಿಲ್ದಾಣ ಪೊಲೀಸರು ಹಸ್ತಾಂತರಿಸಿದ್ದಾರೆ. ಇನ್ಸ್‌ಪೆಕ್ಟರ್ ಲೋಕೇಶ್, ಎಎಸ್‌ಐ ದೇವ ಶೆಟ್ಟಿ, ಜಗದೀಶ್, ದಯಾನಂದ ಎಂ., ಉದಯ ಕುಮಾರ್ ಮತ್ತು ಚಂದ್ರಹಾಸ್ ಅವರು ಆರೋಪಿಯನ್ನು ಮಂಗಳೂರಿಗೆ ಕರೆತರುವಲ್ಲಿ ಕಾರ್ಯಾಚರಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಮೊದಲಿಗೆ ಇಬ್ಬರೂ ಆರೋಪಿ ಗಳು ತಲೆಮರೆಸಿಕೊಂಡು ಬಳಿಕ ಮಂಗಳೂರಿನ ನ್ಯಾಯಾ ಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಿ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದರು. ಆನಂತರದಲ್ಲಿ ನ್ಯಾಯಾ ಲಯದ ಜಾಮೀನು ಷರತ್ತುಗಳನ್ನು ಉಲ್ಲಂ ಸಿದ ಇಬ್ಬರೂ ಆರೋಪಿಗಳು 2014ರಲ್ಲಿ ದುಬೈಗೆ ಪರಾರಿಯಾಗಿದ್ದರು. ತಲೆಮರೆಸಿಕೊಂಡಿದ್ದ ಈರ್ವರ ಪೈಕಿ 1ನೇ ಆರೋಪಿ ಆದಿಲ್ ಶೇಕ್ 2016ರ ಆ. 8ರಂದು ದುಬೈನಿಂದ ಬರುತ್ತಿ ದ್ದಾಗ ಮುಂಬಯಿ ವಿಮಾನ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದರು. ಆತನನ್ನು ವಶಕ್ಕೆ ಪಡೆದಿದ್ದ ಪಣಂಬೂರು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಧೀಶರು ನ್ಯಾಯಾಂಗ ಬಂಧನ ವಿಧಿಸಿದ್ದರು. ಬಳಿಕ ಜಾಮೀನು ಸಿಕ್ಕಿತ್ತು. ಆನಂತರದಲ್ಲಿ ಈ ಆರೋಪಿ ಕೋರ್ಟಿಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಇದರಿಂದಾಗಿ ಆದಿಲ್ ಶೇಕ್‌ನ ವಿರುದ್ಧ ನ್ಯಾಯಾಲಯ ಜಾಮೀನು ರಹಿತ ವಾರಂಟ್ ಅನ್ನು ಹೊರಡಿಸಿದೆ.
Related Articles
ಜಾಮೀನು ಅರ್ಜಿ ವಿಚಾರಣೆ
ಜ. 13ರಂದು ಮಂಗಳೂರಿನ 2ನೇ ಜೆಎಂಎಫ್ಸಿ ನ್ಯಾಯಾಲಯದಲ್ಲಿ ಪರ್ವೇಜ್ ಅಹಮದ್ ಅವರ ಜಾಮೀನು ಅರ್ಜಿ ವಿಚಾರಣೆಗೆ ಬರಲಿದೆ. ಕೋಟಿಗೂ ಮಿಕ್ಕಿದ ಹಣ ವಂಚಿಸಿ ಜಾಮೀನು ಪಡೆದುಕೊಂಡ ಬಳಿಕ ತಲೆಮೆರೆಸಿಕೊಂಡಿದ್ದ ಆರೋಪಿಯಾಗಿರುವ ಕಾರಣ ನ್ಯಾಯಾಧೀಶರು ಜಾಮೀನು ತಿರಸ್ಕೃರಿಸಬಹುದು. ಪ್ರಕರಣದ 1ನೇ ಆರೋಪಿಗೆ ನ್ಯಾಯಾಲಯವು ಈ ಹಿಂದೆ 2 ಬಾರಿ ಜಾಮೀನು ನೀಡಿಯೂ ತಲೆಮರೆಸಿ ಕೊಂಡಿರುವ ಕಾರಣ ಜಾಮೀನು ರಹಿತ ವಾರಂಟ್ ಅನ್ನು ನ್ಯಾಯಾಲಯವು ಹೊರಡಿಸಿದೆ.
Advertisement