ಸಾರ್ವಜನಿಕರ ಪರದಾಟ
ಹೆಜಮಾಡಿಯ ರೋಗಿಯೋರ್ವರನ್ನು ತುರ್ತು ಸಂದರ್ಭದಲ್ಲಿ ತಮ್ಮ ಖಾಸಗಿ ಕಾರಲ್ಲಿಯೇ ಪಡುಬಿದ್ರಿಯ ಖಾಸಗಿ ಚಿಕಿತ್ಸಾಲಯಕ್ಕೆ ಮಾಜಿ ತಾ. ಪಂ. ಸದಸ್ಯ ಭಾಸ್ಕರ ಪಡುಬಿದ್ರಿ ಅವರು ಕರೆತಂದಿದ್ದರು. ಆ ಮಧ್ಯೆಯೇ ಅವರು ಸರಕಾರಿ ಆ್ಯಂಬುಲೆನ್ಸ್ ಕರೆ ಮಾಡಿದ್ದು ಪಡುಬಿದ್ರಿಗೆ ಸುಮಾರು ಅರ್ಧ ಗಂಟೆಗಳ ಬಳಿಕ ಈ ಆ್ಯಂಬುಲೆನ್ಸ್ ಆಗಮಿಸಿತ್ತು. ಇದಕ್ಕೆ ಚಿಕಿತ್ಸಾಲಯದಿಂದ ರೋಗಿಯನ್ನು ಕೂಡಾ ಸ್ಥಳಾಂತರಿಸಲಾಗಿತ್ತು. ಆಮ್ಲಜನಕವನ್ನೂ ಹೃದ್ರೋಗಿಗೆ ಅಳವಡಿಸಲಾಗಿತ್ತು. ಆ ವೇಳೆಗೆ 108 ಚಾಲಕನು ತನ್ನ ವಾಹನವು ಕೆಟ್ಟು ಹೋಗಿರುವುದಾಗಿ ಹೇಳಿದ. ರೋಗಿಯ ಸಂಬಂಧಿಕರ ಸಹಿತ ಸಾರ್ವಜನಿಕರು ಪರದಾಡುವಂತಾಯಿತು.
ಬಳಿಕ ಖಾಸಗಿ ವಾಹನ ಸೇವೆಯನ್ನು ಪಡೆದು ರೋಗಿಯನ್ನು ಮಂಗಳೂರು ಕೆಎಂಸಿಗೆ ಚಿಕಿತ್ಸೆಗಾಗಿ ಡಾ| ಭವಾನಿಶಂಕರ್ ಸಹಾಯದೊಂದಿಗೆ ಒಯ್ಯುತ್ತಿರುವಾಗಲೇ ಅವರು ಕೊನೆಯುಸಿರೆಳೆದರು. ಸರಕಾರಿ ಸೇವೆಯ ಸದ್ಬಳಕೆಯ ಉದ್ದೇಶದಿಂದ ಈ ಜನಸೇವಾ ವಾಹನಗಳನ್ನು ಸಶಕ್ತವಾಗಿರಿಸಬೇಕೆಂಬ ಸಾರ್ವಜನಿಕ ಆಕ್ರೋಶವೂ ವ್ಯಕ್ತವಾಗಿದೆ.
Advertisement