Advertisement

ಖಾಸಗಿ ಆಸ್ಪತ್ರೆಗೆ ಬರಲ್ಲ : 108 ಆ್ಯಂಬುಲೆನ್ಸ್‌ ಸಿಬಂದಿ ನಿರಾಕರಣೆ

08:53 AM Jul 03, 2018 | Harsha Rao |

ಉಡುಪಿ: ತುರ್ತು ಸಂದರ್ಭಗಳಲ್ಲಿ 108 ಆರೋಗ್ಯ ಕವಚ ಆ್ಯಂಬುಲೆನ್ಸ್‌ ಸೇವೆಗೆ ಲಭ್ಯವಾಗದೆ ಇರುವ ಕುರಿತು ಸಾರ್ವಜನಿಕರಿಂದ ಆಕ್ಷೇಪಗಳು ಕೇಳಿಬಂದಿವೆ. ಸಂಬಂಧಿಕರು ಸೂಚಿಸಿದ ಆಸ್ಪತ್ರೆಗೆ ರೋಗಿಯನ್ನು ಸಾಗಿಸಲು ತುರ್ತು ಸೇವೆ ನಿರಾಕರಿಸುತ್ತಿದ್ದು, ಆಕ್ಷೇಪ ವ್ಯಕ್ತಪಡಿಸಿದರೆ ಆ್ಯಂಬುಲೆನ್ಸ್‌ ಸಿಬಂದಿ ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಜಿಲ್ಲಾಸ್ಪತ್ರೆ ವರೆಗೂ 24×7 ವೈದ್ಯಕೀಯ ಸೇವೆ ನೀಡಲು ಮೂಲ ಸೌಕರ್ಯಗಳಿಲ್ಲ. ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಬೇರೆ ಆಸ್ಪತ್ರೆಗೆ ಹೋಗಲು ಸೂಚಿಸಿದಾಗ ಆ್ಯಂಬುಲೆನ್ಸ್‌ಗೆ ಕರೆ ಮಾಡಿದರೆ ಸೂಕ್ತ ಪ್ರತಿಕ್ರಿಯೆ ಸಿಗುವುದಿಲ್ಲ. ಖಾಸಗಿ ಆಸ್ಪತ್ರೆಗೆ ದಾಖಲಿಸಲು ನಿರಾಕರಿಸುತ್ತಾರೆ ಎನ್ನಲಾಗುತ್ತಿದೆ. 

Advertisement

ಬಡವರಿಗೂ ಸಿಗದ ಆ್ಯಂಬುಲೆನ್ಸ್‌ 
ಖಾಸಗಿ ಆ್ಯಂಬುಲೆನ್ಸ್‌ ಸೇವೆ ದುಬಾರಿ. ತುರ್ತು ಚಿಕಿತ್ಸೆಗೆ ಸೌಲಭ್ಯ ಇರುವುದಿಲ್ಲ. ಆಕ್ಸಿಜನ್‌ ಪೂರೈಕೆ ಇಲ್ಲದೆ ಎಷ್ಟೋ ರೋಗಿಗಳು ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. 108 ಆ್ಯಂಬುಲೆನ್ಸ್‌ ಸೇವೆ ಗಗನ ಕುಸುಮವಾಗಿದೆ.

ಲೋಕಾಯುಕ್ತರ ಗಮನಕ್ಕೆ
ಉಡುಪಿಗೆ ಬಂದಿದ್ದ ಲೋಕಾಯುಕ್ತ ಜ| ವಿಶ್ವನಾಥ ಶೆಟ್ಟಿ ಅವರಿಗೆ ಈ ಅವ್ಯವಸ್ಥೆ ಕುರಿತು ವಿಶು ಶೆಟ್ಟಿ ಅಂಬಲಪಾಡಿ ದೂರು ನೀಡಿದ್ದರು. ಜಿಲ್ಲಾಧಿಕಾರಿಗೂ ದೂರು ಸಲ್ಲಿಸಿದ್ದಾರೆ. ಸಿಬಂದಿ ನಿರ್ಲಕ್ಷ್ಯದಿಂದ 108 ಆರೋಗ್ಯ ಕವಚ ಸಾರ್ವಜನಿಕ ಸೇವೆಗೆ ಲಭ್ಯವಾಗದೆ ಇರುವ ಕುರಿತು ವಿವರಿಸಿ, ಕ್ರಮಕ್ಕೆ ಆಗ್ರಹಿಸಿದ್ದಾರೆ.

ಡಿಎಚ್‌ಓ ಹೇಳಿಕೆ
ತುರ್ತು ಆರೋಗ್ಯ ತಂತ್ರಜ್ಞರು (ಇಎಂಟಿ) ಇಲ್ಲದಿರುವಾಗ, ವಾಹನ ದುರಸ್ತಿ ಅಥವಾ ಬೇರೆ ಸೇವೆಯಲ್ಲಿ ರುವಾಗ 108 ಆರೋಗ್ಯ ಕವಚ ಸೇವೆ ಲಭ್ಯವಾಗುತ್ತಿಲ್ಲ. ಖಾಸಗಿ ಆಸ್ಪತ್ರೆಗಳಿಗೆ ರೋಗಿಗೆ ತೆರಳಲು ಕಡ್ಡಾಯವಾಗಿ ವ್ಯವಸ್ಥೆ ಮಾಡಬೇಕೆನ್ನುವ ಸೂಚನೆಯನ್ನು ಈ ಹಿಂದೆಯೇ ನೀಡಿದ್ದೇನೆ ಎಂದು ಡಿಎಚ್‌ಒ ಡಾ| ರೋಹಿಣಿ ಪ್ರತಿಕ್ರಿಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next