ಮಂಡ್ಯ : ಹೊಟ್ಟೆನೋವಿನಿಂದ ಬಳಲುತ್ತಿದ್ದ ರೋಗಿಯನ್ನು ಸಾಗಿಸುತ್ತಿದ್ದ 108 ಆ್ಯಂಬುಲೆನ್ಸ್ ವಾಹನ ದುರಸ್ತಿಗೊಳಗಾಗಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ರೋಗಿ ವಾಹನದಲ್ಲೇ ನರಳಾಡಿದ ವಿಲಕ್ಷಣಕಾರಿ ಘಟನೆಯೊಂದು ನಾಗಮಂಗಲ ತಾಲೂಕು ಅಂಚೆ ಚಿಟ್ಟನಹಳ್ಳಿ ಸಮೀಪ ನಡೆದಿದೆ.
ಟೈರ್ ಪಂಚರ್: ನಾಗಮಂಗಲ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಮತ್ತೆ ಹೆಚ್ಚಿನ ಚಿಕಿತ್ಸೆಗಾಗಿ ಬೆಳ್ಳೂರು ಕ್ರಾಸ್ ಸಮೀಪದ ಬಿ.ಜಿ.ನಗರದಲ್ಲಿರುವ ಆದಿಚುಂಚನಗಿರಿ ವೈದ್ಯಕೀಯ ಆಸ್ಪತ್ರೆಗೆ ರೋಗಿಯನ್ನು ಕರೆದೊಯ್ಯುತ್ತಿತ್ತು. ಮಾರ್ಗ ಮಧ್ಯೆ ಆ್ಯಂಬುಲೆನ್ಸ್ ವಾಹನದ ಟೈರ್ ಪಂಚರ್ ಆಗಿ ದುರಸ್ತಿ ಗೀಡಾಯಿತು. ಈ ವೇಳೆ ಆ್ಯಂಬುಲೆನ್ಸ್ ವಾಹನ ಚಾಲಕ ಇತರೆ ಮತ್ತೂಂದು 108 ಆ್ಯಂಬುಲೆನ್ಸ್ ವಾಹನದ ಚಾಲಕನಿಗೆ ಕರೆ ಮಾಡಿ ರೋಗಿಯನ್ನು ಕರೆದೊಯ್ಯುವಂತೆ ವಿನಂತಿಸಿದ್ದರು. ಆದರೆ, ಆ ವಾಹನದ ಟೈರ್ ಸಹ ಪಂಚರ್ ಆಗಿದ್ದ ಕಾರಣ ಚಲಿಸಲಾಗದೆ ನಿಂತು ಹೋಗಿದೆ ಎಂಬ ವಿಷಯವನ್ನು ತಿಳಿಸಿ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದ.
ಕಂಟ್ರೋಲ್ ರೂಮಿಗೆ ಮಾಹಿತಿ: ಆ್ಯಂಬುಲೆನ್ಸ್ ವಾಹನದಲ್ಲಿ ರೋಗಿ ನರಳಾಡುತ್ತಿದ್ದಾರೆ. ಇತ್ತ ಟೈರ್ ಪಂಚರ್ ಆಗಿದೆ. ಈ ಮಧ್ಯೆ ಸಾರ್ವಜನಿಕರೊಬ್ಬರು 108 ಆ್ಯಂಬುಲೆನ್ಸ್ ಸಂಸ್ಥೆಗೆ ಕರೆ ಮಾಡಿ ರೋಗಿಯನ್ನು ಕರೆದೊಯ್ಯುವಂತೆ ಮನವಿ ಮಾಡಿದರು. ಆದರೆ ಬೆಂಗಳೂರಿನ ಕಂಟ್ರೋಲ್ ರೂಂನಲ್ಲಿರುವ ಸಿಬ್ಬಂದಿ, ಸುಶೀಲಮ್ಮ ಅವರನ್ನು ಆದಿಚುಂಚನಗಿರಿ ಆಸ್ಪತ್ರೆಗೆ ಸಾಗಿಸುತ್ತಿದ್ದ ಆ್ಯಂಬುಲೆನ್ಸ್‌ನ ವಾಹನ ಚಾಲಕನಿಗೆ ಕರೆ ಮಾಡಿ ರೋಗಿ ಗಂಭೀರ ಸ್ತಿತಿಯಲ್ಲಿದ್ದಾರೆ. ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದರು. ಇದರಿಂದ ಅಸಮಾಧಾನಗೊಂಡ ಆ್ಯಂಬುಲೆನ್ಸ್ ವಾಹನ ಚಾಲಕ ನಮ್ಮ ವಾಹನದ ಟೈರ್ ಪಂಚರ್ ಆಗಿದೆ. ನಮ್ಮ ವಾಹನದಲ್ಲೇ ರೋಗಿಯನ್ನು ಕರೆದೊಯ್ಯುತ್ತಿರುವುದು ಎಂದು ಸಂಪೂರ್ಣ ವಿವರಣೆ ನೀಡಿದಾಗ ಕಂಟ್ರೋಲ್ ರೂಂನ ಸಿಬ್ಬಂದಿ ಮರು ಮಾತನಾಡದೆ ಫೋನ್ ಕಟ್ ಮಾಡಿದರು.
ಸಾರ್ವಜನಿಕರ ಸಹಕಾರ: ರೋಗಿ ನರಳುತ್ತಿದ್ದುದನ್ನು ಕಂಡ ಸಾರ್ವಜನಿಕರು ಹಾಗೂ ಸ್ಥಳೀಯ ಗ್ರಾಮಸಸ್ಥರು ಆ್ಯಂಬುಲೆನ್ಸ್ ಕೆಟ್ಟು ನಿಂತಿರುವುದನ್ನು ಕಂಡು ತಕ್ಷಣ ಸಮೀಪಕ್ಕೆ ಬಂದರು. ಟೈರ್ ಪಂಚರ್ ಆಗಿರುವ ವಿಚಾರ ತಿಳಿದು ತಾವೂ ಸಹ ಚಾಲಕನೊಂದಿಗೆ ಕೈ ಜೋಡಿಸಿ, ಟೈರ್ ಬದಲಾವಣೆಗೆ ಸಹಕಾರ ನೀಡಿದರು. ಈ ವೇಳೆಗೆ ಸುಮಾರು ಒಂದೂಕಾಲು ಗಂಟೆಯಾಗಿತ್ತು. ಒಂದು ವೇಳೆ ರೋಗಿ ಅಸ್ವಸ್ಥಗೊಂಡು ಪ್ರಾಣಹಾನಿಯಾಗಿದ್ದರೆ ಅದಕ್ಕೆ ಯಾರು ಹೊಣೆ ಎಂಬುದು ಸಾರ್ವಜನಿಕರ ಮಾತನಾಡಿಕೊಳ್ಳುತ್ತಿದ್ದರು.
Advertisement
ನಾಗಮಂಗಲ ತಾಲೂಕು ಹೊಣಕೆರೆ ಗ್ರಾಮದ ರಮೇಶ್ ಅವರ ಪತ್ನಿ ಸುಶೀಲಮ್ಮ ಅವರಿಗೆ ತೀವ್ರ ಹೊಟ್ಟೆನೋವು ಕಾಣಿಸಿಕೊಂಡಿತ್ತು. ಅಕ್ಕಪಕ್ಕದ ನಿವಾಸಿಗಳು ಈಕೆಯ ರೋಧನವನ್ನು ಕಂಡು ತಕ್ಷಣ 108 ಅ್ಯಂಬುಲೆನ್ಸ್ ವಾಹನಕ್ಕೆ ಕರೆ ಮಾಡಿದ್ದಾರೆ. ಸುದ್ದಿ ತಿಳಿದ ತಕ್ಷಣ ಸಮೀಪದಲ್ಲೇ ಇದ್ದ 108 ಆ್ಯಂಬುಲೆನ್ಸ್ ವಾಹನ (ಕೆ.ಎ. 11 ಜಿ. 0528) ಗ್ರಾಮಕ್ಕೆ ಆಗಮಿಸಿ ಅನಾರೋಗ್ಯಕ್ಕೊಳಗಾದ ಮಹಿಳೆಯನ್ನು ಆ್ಯಂಬುಲೆನ್ಸ್‌ಲ್ಲಿ ನಾಗಮಂಗಲ ಆಸ್ಪತ್ರೆಗೆ ಕರೆತಂದಿತ್ತು.
Related Articles
Advertisement
ವಾಹನದಲ್ಲಿ ಓರ್ವ ದಾದಿ ಸಹಾ ಇದ್ದು, ಅವರೂ ಏನೂ ಮಾಡಲಾಗದ ಸ್ತಿತಿಯಲ್ಲಿದ್ದರು. ಆದರೆ ಸಾರ್ವಜನಿಕರ ಸಹಕಾರದಿಂದಾಗಿ ಬೇಗ ಟೈರ್ ಬದಲಾವಣೆಗೊಂಡು ಕೆಲ ಸಮಯದ ಬಳಿಕ ರೋಗಿಯನ್ನು ಆದಿಚುಂಚನಗಿರಿ ವೈದ್ಯಕೀಯ ಆಸ್ಪತ್ರೆಗೆ ದಾಖಲಿಸಲಾಯಿತು.