Advertisement

ರಾಜ್ಯದಲ್ಲಿ 107 ಕೋವಿಡ್ ಪಾಸಿಟಿವ್‌; ಪಾಸಿಟಿವಿಟಿ ದರ ಶೇ.1.50ಕ್ಕೆ ಏರಿಕೆ

10:07 PM May 03, 2022 | Team Udayavani |

ಬೆಂಗಳೂರು: ರಾಜ್ಯದಲ್ಲಿ ಮಂಗಳವಾರ ಹೊಸದಾಗಿ 107 ಕೊರೊನಾ ಪಾಸಿಟಿವ್‌ ವರದಿಯಾಗಿದ್ದು, ಪಾಸಿಟಿವಿಟಿದರ ಶೇ.1.50ಕ್ಕೆ ಏರಿಕೆಯಾಗಿದೆ. 107 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.

Advertisement

ಮಂಗಳವಾರ ಒಟ್ಟು 7114 ಮಾದರಿಯನ್ನು ಪರೀಕ್ಷೆ ಒಳಪಡಿಸಲಾಗಿತ್ತು. ಬೆಂಗಳೂರು ನಗರದಲ್ಲಿ 100, ಚಿತ್ರದುರ್ಗ 3. ಚಿಕ್ಕಬಳ್ಳಾಪುರ, ಚಿಕ್ಕಮಗಳೂರು,ಮೈಸೂರು ಹಾಗೂ ಉ.ಕ. ಜಿಲ್ಲೆಯಲ್ಲಿ ತಲಾ ಒಂದು ಪಾಸಿಟಿವ್‌ ವರದಿಯಾಗಿದೆ.

ಬಾಗಲಕೋಟೆ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೀದರ್‌, ಚಾಮರಾಜನಗರ, ದ.ಕ., ದಾವಣಗೆರೆ, ಧಾರವಾಡ, ಗದಗ, ಹಾಸನ, ಹಾವೇರಿ, ಕಲಬುರಗಿ, ಕೊಡಗು, ಕೋಲಾರ, ಮಂಡ್ಯ, ರಾಯಚೂರು, ರಾಮನಗರ, ಶಿವಮೊಗ್ಗ, ತುಮಕೂರು, ಉಡುಪಿ, ವಿಜಯಪುರ, ಯಾದಗಿರಿ ಜಿಲ್ಲೆಯಲ್ಲಿ ಶೂನ್ಯ ಪ್ರಕರಣ ವರದಿಯಾಗಿದೆ. ಸಕ್ರಿಯ ಪ್ರಕರಣ 1815 ಇದೆ.

 

Advertisement

Udayavani is now on Telegram. Click here to join our channel and stay updated with the latest news.

Next