Advertisement
1913 ಶಾಲೆ ಆರಂಭಸ್ಮಾರ್ಟ್ ಶಾಲೆಯಾಗಿ ಮುನ್ನಡೆಯುತ್ತಿದೆ.
Related Articles
Advertisement
ಸ್ಮಾರ್ಟ್‌ಕ್ಲಾಸ್, ಪ್ರಯೋಗಾಲಯಯಾವ ಖಾಸಗಿ ಶಾಲೆಗಳಿಗೆ ಕಡಿಮೆ ಇಲ್ಲವೆಂಬಂತೆ ಸೌಕರ್ಯಗಳನ್ನು ಮಡಿಲಲ್ಲಿಟ್ಟುಕೊಂಡು ವಿದ್ಯಾರ್ಥಿಗಳನ್ನು ಪೋಷಿಸುತ್ತಿರುವ ಈ ಶಾಲೆಗೆ ಶಾಲೆಯ ಹಳೆ ವಿದ್ಯಾರ್ಥಿಗಳು ಹಾಗೂ ದಾನಿಗಳೇ ಆಧಾರಸ್ಥಂಭ. ಅವರ ಸಹಕಾರದಿಂದಲೇ ಶತಮಾನ ದಾಟಿದ ಸರಕಾರಿ ಶಾಲೆಯೊಂದು ಹೆಮ್ಮೆಯಿಂದ ತಲೆ ಎತ್ತಿ ನಿಂತಿದೆ. ಮಕ್ಕಳನ್ನು ಶಾಲೆಗೆ ಕರೆ ತರಲು ಹಳೆ ವಿದ್ಯಾರ್ಥಿಗಳೇ ಸ್ವಂತ ಖರ್ಚಿನಲ್ಲಿ 2014ರಿಂದ ಶಾಲಾ ವಾಹನ ವ್ಯವಸ್ಥೆಯನ್ನು ಕಲ್ಪಿಸಿದ್ದು, ಪ್ರತಿದಿನ ಬೆಳಗ್ಗೆ ಎರಡು, ಸಂಜೆ ಎರಡು ಟ್ರಿಪ್ ನಡೆಸುತ್ತಿದೆ. ಎನ್. ವಿನಯ್ ಹೆಗ್ಡೆಯವರೂ ಇದಕ್ಕೆ ಕೈ ಜೋಡಿಸಿದ್ದಾರೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಶಿಕ್ಷಕರು. ವಿದ್ಯಾರ್ಥಿಗಳಿಗೆ ಸುಸಜ್ಜಿತ ಆಡಿಯೋ ವಿಶುವಲ್ ಕೊಠಡಿ, ವಿಜ್ಞಾನ ಪ್ರಯೋಗಾಲಯವನ್ನು ಮಂಗಳೂರು ಕೋಸ್ಟಲ್ ರೌಂಡ್ ಟೇಬಲ್-190 ತಂಡದವರು ನಿರ್ಮಿಸಿಕೊಟ್ಟಿದ್ದಾರೆ. ಉತ್ಸಾಹಿ ತರುಣ ವೃಂದ, ಬರ್ಕೆ ಫ್ರೆಂಡ್ಸ್, ಲಕ್ಷ್ಮೀದೇವಿ ಚಾರಿಟೆಬಲ್ ಟ್ರಸ್ಟ್‌ನ ಸಹಕಾರದಿಂದ ಶಾಲೆ ಪ್ರಗತಿಯೆಡೆಗೆ ಸಾಗುತ್ತಿದೆ. ಸ್ಮಾರ್ಟ್‌ಕ್ಲಾಸ್, ಗ್ರಂಥಾಲಯ, ಮಕ್ಕಳಿಗೆ ಪ್ಲೇ ಪಾರ್ಕ್ ಕೂಡ ನಿರ್ಮಾಣವಾಗಲಿದೆ. ಶಾಲಾ ಬಾಳೆ ತೋಟ, ಹೂದೋಟ, ಸ್ವತ್ಛತಾ ನಿರ್ವಹಣೆ ಎಲ್ಲವೂ ವಿದ್ಯಾರ್ಥಿಗಳದ್ದೇ. ಪ್ರಸ್ತುತ ಶಾಲೆಯಲ್ಲಿ 8 ಮಂದಿ ಶಿಕ್ಷಕರು, 3 ಮಂದಿ ಗೌರವ ಶಿಕ್ಷಕರು ಹಾಗೂ ಓರ್ವ ಅತಿಥಿ ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಶಾಲೆಯಲ್ಲಿ 8ನೇ ತರಗತಿ ಆಗಬೇಕು, ಶಾಲಾ ಕಟ್ಟಡ ನವೀ ಕರಣ, ಹೆಚ್ಚುವರಿ ಕೊಠಡಿ ಶಿಕ್ಷಕರ ಬೇಡಿಕೆಯಾಗಿದೆ. ವೇದವ್ಯಾಸ ಕಾಮತ್ ಕಲಿತ ಶಾಲೆ
ಶಾಸಕ ಡಿ. ವೇದವ್ಯಾಸ ಕಾಮತ್, ಕರ್ಣಾಟಕ ಬ್ಯಾಂಕಿನ ಮಾಜಿ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಅನಂತಕೃಷ್ಣ, ಎಚ್‌ಎಂಎಸ್ ಕಾರ್ಮಿಕ ಸಂಘಟನೆಯ ರಾಜ್ಯಾಧ್ಯಕ್ಷ ಸುರೇಶ್ಚಂದ್ರ ಶೆಟ್ಟಿ, ಎಸ್.ಎಲ್. ಶೇಟ್ ಉದ್ಯಮಿ ದಿ| ರಘುನಾಥ್ ಶೇಟ್ ಅವರಂತಹ ಅನಘ್ರ್ಯ ರತ್ನಗಳನ್ನು ಸಮಾಜಕ್ಕೆ ಅರ್ಪಿಸಿದ ಕೀರ್ತಿ ಈ ಶಾಲೆಗಿದೆ. 2013ರಲ್ಲಿ ಶತಮಾನೋತ್ಸವ ಆಚರಿಸಿಕೊಂಡ ಈ ಶಾಲೆಗೆ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯವರು ಆಗಮಿಸಿ ಮಕ್ಕಳನ್ನು ಆಶೀರ್ವದಿಸಿದ್ದಾರೆ. ಸ್ಟಿವಾರ್ಟ್‌ರಿಂದ ಸುವರ್ಣಯುಗ
ಶಾಲೆಯಲ್ಲಿ 1973ರಿಂದ 1980ರ ವರೆಗೆ ಮುಖ್ಯೋಪಾಧ್ಯಾಯರಾಗಿದ್ದ ಎ. ಸ್ಟಿವಾರ್ಟ್ ಅವರ ಅವಧಿ ಸುವರ್ಣಯುಗ ಎಂದು ಬಣ್ಣಿಸುತ್ತಾರೆ ಇಲ್ಲಿನ ಹಳೆ ವಿದ್ಯಾರ್ಥಿಗಳು. ಕೇವಲ ಮಂಗಳೂರು ನಗರಕ್ಕೆ ಸೀಮಿತವಾಗಿದ್ದ ಶಾಲೆಯನ್ನು ನಗರದಾಚೆಗೂ ಪರಿಚಯಿಸಿದ ಕೀರ್ತಿ ಅವರದ್ದಾಗಿದೆ. ಶಾಲಾ ಅವಧಿ ಮುಗಿದ ಅನಂತರವೂ ರಾತ್ರಿ 7ರ ವರೆಗೆ ಶಾಲೆಯಲ್ಲಿದ್ದು ಆಸಕ್ತ ವಿದ್ಯಾರ್ಥಿಗಳನ್ನು ತನ್ನೊಡನೆ ಸೇರಿಸಿಕೊಂಡು ಸೃಜನಾತ್ಮಕ ಚಟುವಟಿಕೆಗಳನ್ನು ಕಲಿಸಿಕೊಡುತ್ತಿದ್ದರಂತೆ. ಮಣ್ಣಗುಡ್ಡ ಶಾಲೆ ನಾನು ಕಲಿತ ಶಾಲೆ ಎಂಬುದಕ್ಕೆ ಹೆಮ್ಮೆ ಇದೆ. ನಾನು ಆ ಶಾಲೆಯಲ್ಲಿದ್ದಾಗ ಮಕ್ಕಳ ಸಂಖ್ಯೆ ಜಾಸ್ತಿ ಇತ್ತು. ಶಾಲಾಭಿವೃದ್ಧಿಗೆ ಬೇಕಾದ ಸವಲತ್ತು ಒದಗಿಸಿಕೊಡಲು ನಾನು ಪ್ರಯತ್ನಿಸುವೆ. ನನ್ನ ಶಾಲೆ ಅಭಿವೃದ್ಧಿಗೆ ನಾನು ಬದ್ಧ.
-ಡಿ. ವೇದವ್ಯಾಸ ಕಾಮತ್,ಶಾಸಕರು , ಹಳೆ ವಿದ್ಯಾರ್ಥಿ ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಕ್ಲಾಸ್, ಅತ್ಯುತ್ತಮ ಕಂಪ್ಯೂಟರ್ ಕೊಠಡಿ, ವಿಜ್ಞಾನ ಪ್ರಯೋಗಾಲಯ ಶಾಲೆಯಲ್ಲಿದೆ. ಗುಣಮಟ್ಟದ ಶಿಕ್ಷಣವನ್ನು ಶಾಲೆಯಲ್ಲಿ ನೀಡಲಾಗುತ್ತಿದೆ. ಹಳೆ ವಿದ್ಯಾರ್ಥಿಗಳು ಮತ್ತು ದಾನಿಗಳೇ ಶಾಲೆಯ ಬೆಳವಣಿಗೆಗೆ ಕಾರಣ.
-ಜಸಿಂತಾ ಡಿ’ಸೋಜಾ, ಮುಖ್ಯೋಪಾಧ್ಯಾಯರು – ಧನ್ಯಾ ಬಾಳೆಕಜೆ