Advertisement
ಸಂಪೂರ್ಣ ರಹಸ್ಯ ಮತ್ತು ಹಲವು ಅಸಾಂಪ್ರದಾಯಿಕ ನಿಯೋಜನೆ, ಫಾಲ್ಸ್ ಫ್ಲ್ಯಾಗ್ ರಣತಂತ್ರವನ್ನು ಅನುಸರಿಸಿ ಚೀನವನ್ನು ತಬ್ಬಿಬ್ಬುಗೊಳಿಸಲಾಗಿತ್ತು ಎಂದು ಸೇನೆಯ ಮೂಲಗಳು ವಿಶ್ಲೇಷಿಸಿವೆ.
ಚೀನವು ಕಣ್ಣಿಟ್ಟಿದ್ದ ಪೂರ್ವ ಲಡಾಖ್‌ನ ಪ್ರಮುಖ 6-7 ತಾಣಗಳನ್ನು ಸೇನೆ ಮುಂಚಿತವಾಗಿ ಗುರುತಿಸಿತ್ತು. ಇಂಥ ತಾಣಗಳ ಮುಂಚೂಣಿಯಲ್ಲಿ ಮೌಂಟನ್ ಸ್ಟ್ರೈಕ್ ಕಾಪ್ಸ್ì (ಎಂಎಸ್‌ಸಿ) ಯೋಧರನ್ನು ನಿಯೋಜಿಸಲಾಗಿತ್ತು. 24 ತಾಸು ಹದ್ದಿನಗಣ್ಣು
ಆಗಸ್ಟ್ ಆರಂಭದಲ್ಲೇ ಎಂಎಸ್‌ಸಿ ತಂಡ ಲೆ|ಜ| ಸವನೀತ್ ಸಿಂಗ್ ನೇತೃತ್ವದಲ್ಲಿ ಈ ತಾಣಗಳ ಮೇಲೆ 24 ತಾಸು ಹದ್ದಿನಗಣ್ಣು ನೆಟ್ಟು, ಚೀನದ ತುಕಡಿಗಳ ದೌರ್ಬಲ್ಯ ಗಳನ್ನು ಗಮನಿಸಿತ್ತು.
Related Articles
ಆಕ್ರಮಣಕಾರಿ ದಾಳಿಗೆ ಹೆಸರಾದ ಎಂಎಸ್‌ಸಿಯ 17ನೇ ತುಕಡಿಯನ್ನು ಮುಂಚೂಣಿಗೆ ಬಿಟ್ಟು, ರಕ್ಷಣಾತ್ಮಕ ದಾಳಿಗೆ ಹೆಸರಾದ 14ನೇ ತುಕಡಿಯನ್ನು ಬೆಂಗಾವಲಿನಲ್ಲಿ ನಿಲ್ಲಿಸಲಾಗಿತ್ತು. 17ನೇ ತುಕಡಿ ಮುಂದೆ ಮುಂದೆ ಹೋದಂತೆ, ಬೆಂಗಾವಲು ಪಡೆ ದಕ್ಷಿಣ ದಂಡೆಯ ಪ್ರಮುಖ ಬೆಟ್ಟಗಳನ್ನು ಏರಿ, ಅಲ್ಲಿ ಯುದ್ದೋಪಕರಣಗಳನ್ನೂ ನಿಯೋಜಿಸಿತ್ತು. ಇದು ಚೀನವನ್ನು ಬೆಕ್ಕಸ ಬೆರಗಾಗಿಸಿತ್ತು.
Advertisement
ಗಡಿ ರಕ್ಷಣೆಗೆ ಗರಿಷ್ಠ ಸಿದ್ಧತೆ: ಸಿಡಿಎಸ್ದೇಶದ ಉತ್ತರದ ಗಡಿಯ ಯಥಾಸ್ಥಿತಿಯನ್ನು ಚೀನ ಬದಲಾಯಿಸಲು ಯತ್ನಿಸುತ್ತಿದೆ. ಚೀನ ಜತೆಗಿನ ಭೂ, ಸಮುದ್ರ, ವಾಯು ಗಡಿಗಳಲ್ಲಿ ಗರಿಷ್ಠ ಮಟ್ಟದ ಸಿದ್ಧತೆ ನಡೆಸಿದ್ದೇವೆ ಎಂದು ಮೂರೂ ಪಡೆಗಳ ಮುಖ್ಯಸ್ಥ (ಸಿಡಿಎಸ್) ಜ| ಬಿಪಿನ್ ರಾವತ್ ತಿಳಿಸಿದ್ದಾರೆ. ಲಡಾಖ್ ಗಡಿಯಲ್ಲಿ ಇನ್ನೂ ನಾವು ಮುಖಾ ಮುಖೀ ಎದುರಿಸುತ್ತಿದ್ದೇವೆ. ನಮ್ಮ ಯುದ್ಧ ವ್ಯವಸ್ಥೆ ಯಲ್ಲಿ ಭವಿಷ್ಯದ ಹೋರಾಟದ ತಂತ್ರಜ್ಞಾನ ಅಳವಡಿಸುವ ಕಾಲ ಬಂದಿದೆ. ಉತ್ತರ ಭಾಗದ ಗಡಿಗಳಲ್ಲಿ ಯಾವುದೇ ಬೆದರಿಕೆ ಹಿಮ್ಮೆಟ್ಟಿಸಲು ನಾವು ಅರ್ಹ ತಾಂತ್ರಿಕ ಪಡೆ ಹೊಂದಬೇಕಿದೆ ಎಂದು ಅವರು “ಎಎನ್‌ಐ’ಗೆ ತಿಳಿಸಿದ್ದಾರೆ.