ಕೊಪ್ಪಳ: ಜಿಲ್ಲೆಯಲ್ಲಿ ಉಡಾನ್ ಯೋಜನೆ ಅನುಷ್ಠಾನಕ್ಕೆ ಬಲ್ಡೋಟಾ ಕಂಪನಿಯುಸಕಾರಾತ್ಮಕವಾಗಿ ಸ್ಪಂದಿಸಿದೆ. ಆದರೆ ವಿಮಾನ ತಂಗಲು, ರನ್‌ವೇ ವಿಸ್ತರಣೆ, ಕಟ್ಟಡ ಸೇರಿ ಇತರೆ ಪ್ರತಿ ಕಾರ್ಯಕ್ಕೂ ಸರ್ಕಾರ ವೆಚ್ಚ ಭರಿಸಲಿ ಎಂದು ಜಿಲ್ಲಾಡಳಿತಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಇದನ್ನಾಧರಿಸಿ ಜಿಲ್ಲಾಡಳಿತವು ವಿಜಯಪುರ ಜಿಲ್ಲೆ ವಿಮಾನ ನಿಲ್ದಾಣ ಮಾದರಿ ಕೊಪ್ಪಳ ವಿಮಾನ ನಿಲ್ದಾಣಕ್ಕೆ 105 ಕೋಟಿ ರೂ. ಯೋಜನೆ ಸಿದ್ಧಪಡಿಸಿದೆ.
ಜಿಲ್ಲೆಗೆ ಮೂರು ವರ್ಷದಿಂದ ಹಿಂದೆಯೇ ಉಡಾನ್ ಯೋಜನೆ ಘೋಷಣೆ ಯಾಗಿದ್ದರೂ ಅನುಷ್ಠಾನವಾಗದೇ ಹಿನ್ನಡೆ ಅನುಭವಿಸಿತ್ತು. ಜಿಲ್ಲೆಯಲ್ಲಿ ವಿಮಾನ ಹಾರಾಟ ಕನಸಿನಮಾತು ಎನ್ನುವಂತಾಯಿತು. ಆದರೆ ಇಲ್ಲಿನ ಪ್ರಮುಖರು, ಚಿಂತಕರು, ಹಿರಿಯರುಈಚೆಗೆ ಸಭೆ ನಡೆಸಿ ಉಡಾನ್ ಯೋಜನೆ ಅನುಷ್ಠಾನಗೊಳಿಸುವಂತೆ ಜಿಲ್ಲಾಡಳಿತಕ್ಕೆಒತ್ತಡ ಹೇರಿದ ಬೆನ್ನಲ್ಲೇ, ಸಂಸದ ಸಂಗಣ್ಣಕರಡಿ ಸೇರಿದಂತೆ ಮೂವರು ಶಾಸಕರು ಸಿಎಂಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಯೋಜನೆ ಅನುಷ್ಠಾನದ ಕುರಿತಂತೆ ಸರ್ಕಾರಕ್ಕೂ ಒತ್ತಡ ತಂದಿದ್ದರು.
ಈ ಬೆನ್ನಲ್ಲೇ, ಜಿಲ್ಲಾಡಳಿತವು ಬಲ್ಡೋಟಾಕಂಪನಿ ಮುಖ್ಯಸ್ಥರೊಂದಿಗೆ ಸಮಾಲೋಚನೆನಡೆಸಿ ಬೇಕು-ಬೇಡಿಕೆ ಕುರಿತು ಪ್ರಸ್ತಾವನೆಪಡೆದಿದೆ. ಕಂಪನಿಯು, ನಮ್ಮದು ಖಾಸಗಿವಿಮಾನ ನಿಲ್ದಾಣವಾಗಿದ್ದು, ಉಡಾನ್‌ಯೋಜನೆ ಜಾರಿಯಾದರೆ ಇಲ್ಲಿ ಕೆಲವೊಂದುಮಾರ್ಪಾಡು ಆಗಬೇಕಿದೆ. ನಮ್ಮದು 121ಮೀಟರ್ ರನ್‌ವೇ ಇದೆ. ಅಲ್ಲದೇ ವಿಐಪಿ ಕೊಠಡಿಗಳಿವೆ. ಪ್ರಸ್ತುತ 8 ಸೀಟ್‌ಗಳ ವಿಮಾನಇಳಿಯುವ ಸಾಮರ್ಥ್ಯದ ಸೌಲಭ್ಯ ಇದೆ.ಹಾಗಾಗಿ ವಿಮಾನ ನಮ್ಮ ತಾಣದಲ್ಲಿ ಒಂದುದಿನ ನಿಲ್ಲಿಸಿದರೆ ಅದಕ್ಕೆ ವೆಚ್ಚ ಭರಿಸಬೇಕು.ರನ್‌ವೇ ವಿಸ್ತರಣೆಗೆ ಸರ್ಕಾರವೇ ವೆಚ್ಚ ಭರಿಸಬೇಕು. ವಿಐಪಿ ಗ್ಯಾಲರಿ ನಾವೇಉಪಯೋಗಿಸಿಕೊಳ್ಳಲಿದ್ದು, ಸರ್ಕಾರ ಪ್ರತ್ಯೇಕ ಗ್ಯಾಲರಿ ಕಟ್ಟಡ ನಿರ್ಮಿಸಿ ಕೊಳ್ಳಬೇಕು. ಜೊತೆಗೆ ನಮ್ಮದು 170 ಎಕರೆ ಪ್ರದೇಶವಿದ್ದು,ಹೆಚ್ಚಿನ ಭೂಮಿ ಸರ್ಕಾರವೇ ಪಡೆಯಬೇಕುಎನ್ನುವ ಕುರಿತು ಕೆಲವೊಂದು ಅಂಶಗಳನ್ನುಪಟ್ಟಿ ಮಾಡಿ ಕಂಪನಿಯೂ ಜಿಲ್ಲಾಡಳಿತಕ್ಕೆ ತಾಂತ್ರಿಕ ವರದಿ ಸಲ್ಲಿಸಿದೆ.
ಇದಕ್ಕೆ ಜಿಲ್ಲಾಡಳಿತವು, ವಿಜಯಪುರಜಿಲ್ಲೆಯಲ್ಲಿ ವಿಮಾನ ನಿಲ್ದಾಣದ ಮಾದರಿಯಲ್ಲಿ ಬಲ್ಡೋಟಾ ಕಂಪನಿಯ ವಿಮಾನ ನಿಲ್ದಾಣವನ್ನೇ ವಿಸ್ತರಣೆ ಮಾಡಿದರೆಎಷ್ಟು ವೆಚ್ಚವಾಗಲಿದೆ? ಅದಕ್ಕೆ ಸರ್ಕಾರದ ನಿಯಮಾವಳಿಯ ಪ್ರಕಾರ ಏನೆಲ್ಲಾ ಕ್ರಮಕೈಗೊಳ್ಳಬೇಕು ಎನ್ನುವ ಯೋಜನೆಯನ್ನುಸಿದ್ಧಪಡಿಸಿದೆ. ಪ್ರಸ್ತುತ 171 ಎಕರೆ ಪ್ರದೇಶ ಜಮೀನಿದ್ದು, ಉಡಾನ್ ಜಾರಿಯಾದರೆ380 ಎಕರೆಯಷ್ಟು ಜಮೀನು ಬೇಕಾಗಲಿದೆ.ಹೆಚ್ಚುವರಿ ಭೂ ಸ್ವಾ ಧೀನ ಮಾಡಿಕೊಳ್ಳಬೇಕು. ವಿಮಾನ ಇಳಿಯುವುದು, ಹಾರುವುದು ಪ್ರತ್ಯೇಕ ರನ್‌ವೇ ನಿರ್ಮಿಸಬೇಕು.ವಿಐಪಿಗಳ ಕೊಠಡಿ ಬಿಟ್ಟು ಸಾರ್ವಜನಿಕರಿಗೆಅಗತ್ಯ ಕಟ್ಟಡಗಳ ನಿರ್ಮಾಣ, ಸರ್ಕಾರದ ನಿಬಂಧನೆಗೆ ಒಳಪಟ್ಟು ವಿಮಾನನಿಲ್ದಾಣಕ್ಕೆ ವೆಚ್ಚ ಸೇರಿ ವಿಮಾನ ಹಾರಾಟದ ವೇಳೆ ನಿರ್ವಹಣಾ ವೆಚ್ಚದ ಕುರಿತಂತೆ ಸಮಗ್ರವಾಗಿ ವರದಿ ಸಿದ್ಧಪಡಿಸಿದೆ.
ಉಡಾನ್ ಯೋಜನೆಯಡಿ 80 ಸೀಟ್‌ಗಳಸಾಮರ್ಥ್ಯದ ವಿಮಾನವು ಈ ವಿಮಾನನಿಲ್ದಾಣದಲ್ಲಿ ಇಳಿಯಲಿದೆ. ಆ ಸಾಮರ್ಥ್ಯಕ್ಕೆತಕ್ಕಂತೆ ಎಲ್ಲವೂ ನಿರ್ಮಾಣವಾಗಬೇಕಿದೆ.ವಿಮಾನ ನಿಲ್ದಾಣಕ್ಕೆ 105 ಕೋಟಿರೂ. ಬೇಕಾಗಲಿದೆ. ಜೊತೆಗೆ ತಾಂತ್ರಿಕವರದಿಗೂ ಸಮ್ಮತಿ ದೊರೆಯಬೇಕಿದೆ.ಇಷ್ಟೆಲ್ಲ ನಿಯಮ ಒಪ್ಪಿದರೆ ಮಾತ್ರ ವಿಮಾನನಿಲ್ದಾಣ ಜಿಲ್ಲೆಯಲ್ಲಿ ಆರಂಭವಾಗಲಿದೆ.ಇಲ್ಲದಿದ್ದರೆ ಸರ್ಕಾರವೇ ಪ್ರತ್ಯೇಕ ಭೂಮಿ ಸ್ವಾಧೀನ ಮಾಡಿಕೊಂಡು ವಿಮಾನ ನಿಲ್ದಾಣ ನಿರ್ಮಿಸಬೇಕಿದೆ.
ವಿಮಾನ ನಿಲ್ದಾಣಕ್ಕೆ ತಜ್ಞರ ತಂಡ ಭೇಟಿ :
ಕೊಪ್ಪಳ: ತಾಲೂಕಿನ ಗಿಣಗೇರಾ ಸಮೀಪದ ಬಲ್ಡೋಟಾ ವಿಮಾನ ನಿಲ್ದಾಣದ ಸ್ಥಳ ಪರಿಶೀಲನೆಗೆ ಕೇಂದ್ರ ಸರ್ಕಾರದ ವಿಮಾನ ನಿಲ್ದಾಣ ಪ್ರಾಧಿ ಕಾರ ತಂಡದ ಸದಸ್ಯರು ಮಾ. 18ರಂದು ಜಿಲ್ಲಾಡಳಿತದ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ವಿಮಾನ ನಿಲ್ದಾಣದ ಸುಸ್ಥಿತಿ, ವಿಮಾನ ಹಾರಾಟದ ಸಾಮರ್ಥ್ಯ ಹಾಗೂ ವಿಮಾನ ನಿಲ್ದಾಣದ ತಾಂತ್ರಿಕ ಸಾಧ್ಯ ಸಾಧ್ಯತೆಯ ಕುರಿತು ತಂಡವು ಪರಿಶೀಲನೆನಡೆಸಲಿದೆ. ತಂಡದಲ್ಲಿ ಚೆನ್ನೈನ ಆರ್‌ಎಚ್‌ಕ್ಯೂನ ಡಿಜಿಎಂ ರಾಜಕುಮಾರ, ಏರ್‌ಪೋರ್ಟ್‌ನ ಸರ್ವೇ ವಿಭಾಗದ ಎಎಂ, ಸಿಎಚ್‌ಕ್ಯೂನ ಎಜಿಎಂ ಶರದ್ ದುಬಾಯಿ, ಹುಬ್ಬಳ್ಳಿ ಏರ್‌ಪೋರ್ಟ್‌ನ ಡಿಜಿಎಂ ಪಿ.ಟಿ. ಸಿಂಧು, ಜೆಟ್ ಜಿಎಂ ಅನುರಾಗ ಮಿಶ್ರಾ ಅವರು ಆಗಮಿಸಲಿದ್ದು, ಸ್ಥಳ ಪರಿಶೀಲನೆ ನಡೆಸಿ ವರದಿ ನೀಡಲಿದ್ದಾರೆ.
ಬಲ್ಡೋಟಾ ಕಂಪನಿಯು ತನ್ನ ಬೇಕು ಬೇಡಿಕೆಗಳ ಕುರಿತಂತೆಜಿಲ್ಲಾಡಳಿತಕ್ಕೆ ಪ್ರಸ್ತಾವನೆ ಸಲ್ಲಿಕೆಮಾಡಿದೆ. ಅವರು ಕೆಲವೊಂದು ವೆಚ್ಚಭರಿಸುವ ಕುರಿತಂತೆ ಕೇಳಿಕೊಂಡಿದ್ದಾರೆ.ನಾವೂ ಸಹ ರನ್‌ವೇ ಸೇರಿ ಎಲ್ಲಅಗತ್ಯತೆಗಳ ಕುರಿತು 105 ಕೋಟಿರೂ. ಯೋಜನೆ ಸಿದ್ಧಪಡಿಸಿದ್ದೇವೆ.ಶೀಘ್ರದಲ್ಲೇ ಸರ್ಕಾರಕ್ಕೆ ಪ್ರಸ್ತಾವನೆಸಲ್ಲಿಸಲಿದ್ದೇವೆ. ಸರ್ಕಾರ ಏನುನಿರ್ಧಾರ ಕೈಗೊಳ್ಳಲಿದೆಯೋ ಮುಂದೆ ಕಾದು ನೋಡಬೇಕಿದೆ.
-ಎಂ.ಪಿ. ಮಾರುತಿ, ಕೊಪ್ಪಳ ಎಡಿಸಿ
-ದತ್ತು ಕಮ್ಮಾರ