ಕಲಘಟಗಿ: ರಾಜ್ಯಾದ್ಯಂತ ಮದ್ಯ ನಿಷೇಧಕ್ಕೆ ಹಕ್ಕೊತ್ತಾಯ ಮಾಡುತ್ತಿರುವುದು ಹಾಗೂ ಡಾ| ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕ ಸುವರ್ಣ ಸಂಭ್ರಮದ ಸಂದರ್ಭದಲ್ಲಿ 103 ಮದ್ಯವ್ಯಸನಿಗಳು ನವಜೀವನಕ್ಕೆ ಪಾದಾರ್ಪಣೆ ಮಾಡುತ್ತಿರುವುದು ಸಂತಸವಾಗಿದೆ ಎಂದು ಎಸ್‌ಡಿಎಂಇ ಸೊಸೈಟಿಯ ಕಾರ್ಯದರ್ಶಿ ಜೀವಂಧರ ಕುಮಾರ ಹೇಳಿದರು.
ಪಟ್ಟಣದ ಶ್ರೀ ಬಸವೇಶ್ವರ ಕಲ್ಯಾಣ ಮಂಟಪದ ಆವರಣದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವದ್ಧಿ ಯೋಜನೆಯಡಿ ಗುರುವಾರ ನಡೆದ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಸ್ವಯಂ ಸ್ಫೂ ರ್ತಿಯಿಂದ ಮದ್ಯವ್ಯಸನ ತ್ಯಜಿಸಿರುವ ತಾವು ಮುಂಬರುವ ದಿನಗಳಲ್ಲಿ ತುಂಬು ಕುಟುಂಬದ ಅಧಿಪತಿಗಳಾಗಿರಿ ಎಂದು ಶುಭ ನುಡಿದರು.
ಕ್ರೆಡಲ್ ಮಾಜಿ ಅಧ್ಯಕ್ಷ ಸಿ.ಎಂ. ನಿಂಬಣ್ಣವರ ಮಾತನಾಡಿ, ವ್ಯಸನಮುಕ್ತ ಸಮಾಜದಿಂದ ಸುಭದ್ರ ನಾಡನ್ನು ಕಟ್ಟಲು ಸಾಧ್ಯ. ಸರ್ಕಾರಗಳು ಮಾಡಬೇಕಾದ ಹತ್ತು ಹಲವು ಕಾರ್ಯಕ್ರಮಗಳನ್ನು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಡುತ್ತಿದೆ. ಮದ್ಯವರ್ಜನ ಶಿಬಿರದಿಂದ ಸ್ಥಳೀಯ ಕುಟುಂಬಗಳಲ್ಲಿ ಆಶಾಕಿರಣ ಕಂಡುಬಂದಿರುವುದು ಶ್ಲಾಘನೀಯ ಕಾರ್ಯ ಎಂದರು.
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬೂದಪ್ಪ ಹುರಕಡ್ಲಿ ಅಧ್ಯಕ್ಷತೆ ವಹಿಸಿದ್ದರು. ಯೋಜನೆಯ ನಿರ್ದೇಶಕ ದಿನೇಶ ಎಮ್., ವಿವೇಕ ಹೋರಾಟ ಸಮಿತಿ ಅಧ್ಯಕ್ಷ ಆರ್. ರಾಜು, ಕಲ್ಯಾಣಕಿರಣ ಸೇವಾ ಸಂಸ್ಥೆ ಅಧ್ಯಕ್ಷ ಬಿ.ವೈ.ಪಾಟೀಲ ಮಾತನಾಡಿದರು.
ಜಿಪಂ ಸದಸ್ಯರಾದ ಈರವ್ವ ದಾಸನಕೊಪ್ಪ, ವಿದ್ಯಾ ಬಾವನವರ, ಕೆಎಂಎಫ್ ನಿರ್ದೇಶಕ ಯಲ್ಲಪ್ಪ ದಾಸನಕೊಪ್ಪ, ಕೆಸಿಸಿ ಬ್ಯಾಂಕ್ ನಿರ್ದೇಶಕ ಮಂಜುನಾಥ ಮುರಳ್ಳಿ, ಶಂಕರಗಿರಿ ಬಾವನವರ, ಡಾ| ಶ್ವೇತಾ, ಗಂಗಾಧರ ಗೌಳಿ, ಸಿ.ವಿ. ಅಣ್ಣಿಗೇರಿ, ಕೆ.ಬಿ. ಗುಡಿಹಾಳ, ಮಂಜುಳಾ ನಾಯ್ಕ,ತಿಮ್ಮಯ್ಯ ನಾಯ್ಕ, ದೇವೇಂದ್ರ ಕಾಗೆನ್ನವರ, ವಿದ್ಯಾಧರ, ಜಯಲಕ್ಷ್ಮೀ, ವೆಂಕಟೇಶ,
-ದೀಪಾ ದೈವಜ್ಞ, ನಿವೇದಿತಾ ಗೌಳಿ, ಗಾಯತ್ರಿ ದೈವಜ್ಞ, ಮಂಜುಳಾ ನೀಲಣ್ಣವರ, ಬಸವರಾಜ, ಆರೋಗ್ಯಮ್ಮ, ಸವಿತಾ, ಮಂಜುಳಾ, ಸಂಗೀತಾ, ಉಮಾ, ನೀಲಮ್ಮ, ಸುಮಾ, ಆರತಿ, ಜ್ಯೋತಿ ಹಾಗೂ ದ್ಯಾಮಣ್ಣ ಇತರರಿದ್ದರು. ಶಿಬಿರದ ಸಂಚಾಲಕ ಕೆ. ಕುಸುಮಾಧರ ನಿರೂಪಿಸಿದರು. ಮೇಲ್ವಿಚಾರಕ ಮುರಳೀಧರ ಸ್ವಾಗತಿಸಿದರು. ಪ್ರಭಾಕರ ನಾಯಕ ವಂದಿಸಿದರು.