Advertisement
ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್ ಅವರು ದೀಪ ಪ್ರಜ್ವಲಿಸಿ ವಿಧ್ಯುಕ್ತವಾಗಿ ಶಾಖೆಯನ್ನು ಉದ್ಘಾಟಿಸಿದರು. ಬ್ಯಾಂಕಿನ ಹಿರಿಯ ನಿರ್ದೇಶಕಿ ಪುಷ್ಪಲತಾ ಎನ್. ಸಾಲ್ಯಾನ್ ಅವರು ಭದ್ರತಾ ಖಜಾನೆಗೆ ಹಾಗೂ ಆಡಳಿತ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ. ಆರ್. ಮೂಲ್ಕಿ ಕಂಪ್ಯೂಟರೀಕೃತ ಸೇವೆಗಳಿಗೆ ಚಾಲನೆ ನೀಡಿ ಶುಭಹಾರೈಸಿದರು.
Related Articles
Advertisement
ಮಹಾ ಪ್ರಂಬಧಕರುಗಳಾದ ದಿನೇಶ್ ಬಿ. ಸಲ್ಯಾನ್, ನವೀನ್‌ಚಂದ್ರ ಎಸ್. ಬಂಗೇರ, ಉಪ ಮಹಾ ಪ್ರಂಬಧಕರುಗಳಾದ ಸುರೇಶ್ ಎಸ್. ಸಾಲ್ಯಾನ್, ವಿಶ್ವನಾಥ್ ಜಿ. ಸುವರ್ಣ, ಪ್ರಭಾಕರ್ ಜಿ. ಪೂಜಾರಿ, ಮಹೇಶ್ ಬಿ. ಕೋಟ್ಯಾನ್, ಪ್ರಭಾಕರ್ ಜಿ. ಸುವರ್ಣ, ಸಹಾಯಕ ಮಹಾ ಪ್ರಂಬಧಕರುಗಳಾದ ಜಗದೀಶ್ ಎನ್. ಪೂಜಾರಿ, ಮಂಜುಳಾ ಎನ್. ಸುವರ್ಣ, ಹರೀಶ್ ಕೆ. ಹೆಜ್ಮಾಡಿ, ವಿವಿಧ ಶಾಖೆಗಳ ಮುಖ್ಯಸ್ಥರುಗಳಾದ ಕರುಣಾಕರ್ ಸುವರ್ಣ, ಶೀತಲ್ ವಿ. ಅಮೀನ್ ಚಾರ್ಕೋಪ್, ನಿವೃತ್ತ ಮಹಾ ಪ್ರಂಬಧಕಿ ಶೋಭಾ ದಯಾನಂದ್ ಮತ್ತಿತರರು ಉಪಸ್ಥಿತರಿದ್ದರು.
ಉಳ್ಳೂರು ಧನಂಜಯ ಶಾಂತಿ ಗಣಹೋಮವನ್ನು, ಉಳ್ಳೂರು ಶೇಖರ್ ಶಾಂತಿ ವಾಸ್ತುಪೂಜೆ, ದ್ವಾರಪ್ರವೇಶ ಪೂಜೆ ನೆರವೇರಿಸಿ ಹರಸಿದರು. ಗಂಗಾಧರ್ ಕಲ್ಲಾಡಿ ತೀರ್ಥಪ್ರಸಾದ ವಿತರಿಸಿದರು. ಯಶೋದಾ ತರುಣ್ ಅಮೀನ್ ದಂಪತಿ ಪೂಜಾಧಿಗಳ ಯಜಮಾನತ್ವ ವಹಿಸಿದ್ದರು. ಜಯ ಎ. ಕೋಟ್ಯಾನ್ ಸ್ವಾಗತಿಸಿದರು. ಬ್ಯಾಂಕಿನ ಅಭಿವೃದ್ಧಿ ಇಲಾಖಾ ಮುಖ್ಯಸ್ಥ ಮೋಹನ್‌ದಾಸ್ ಹೆಜ್ಮಾಡಿ, ಬ್ಯಾಂಕಿನ ಸೇವಾ ವೈಖರಿ ಪ್ರಸ್ತಾಪಿಸಿ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಶಾಖಾ ಮುಖ್ಯಸ್ಥ ಜಯಶ್ರೀ ವಿ. ಅಮೀನ್ ವಂದಿಸಿದರು.
ನಾನೂ ಈ ಬ್ಯಾಂಕ್‌ನಲ್ಲಿ ಉನ್ನತಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದು, ನನ್ನ ಸೇವಾವಧಿಯಲ್ಲಿ ನೂರು ಶಾಖೆಗಳ ಸೇವಾರ್ಪಣೆ ಆಗಿರುವುದು ನನ್ನ ಪುಣ್ಯ. ನಿವೃತ್ತಿಯ ಬಳಿಕ ಮಾತೃ ಸಂಸ್ಥೆಯ ಅಧ್ಯಕ್ಷನಾಗಿ ಇಂದು ಉದ್ಘಾಟನಾ ದೀಪ ಬೆಳಗಿಸುವ ಅವಕಾಶ ಒಲಿದಿರುವುದು ಮತ್ತೂಂದು ಸೌಭಾಗ್ಯವಾಗಿದೆ. ಬ್ಯಾಂಕಿನ ಸೇವಾವಧಿ ಜೀವನವನ್ನು ನೆಮ್ಮದಿಯಾಗಿ ಅನುಭವಿಸುವಂತಾಗಿಸಿದೆ. ಕೆಳ ವರ್ಗದ, ಮಧ್ಯಮ ವರ್ಗದ ಜನತೆಯ ಆರ್ಥಿಕ ಸುಧಾರಣೆ ಜೊತೆಗೆ ಸಾವಿರಾರು ಉದ್ಯಮ ಶೀಲರನ್ನು ಸೃಷ್ಟಿಸಿದ ಬ್ಯಾಂಕಿನ ಸೇವೆಯೇ ಅನುಪಮವಾಗಿದೆ. ಮಹಾರಾಷ್ಟ್ರ ಸ್ಟೇಟ್ ಕೋ. ಆಪರೇಟಿವ್ ಬ್ಯಾಂಕ್ಸ್ ಅಸೋಸಿಯೇಶನ್‌ನ “ಪದ್ಮಭೂಷಣ ವಸಂತ್‌ದಾದಾ ಪಾಟೀಲ್ ಉತ್ಕೃಷ್ಟ ಸಹಕಾರಿ ಬ್ಯಾಂಕ್’ ಗೌರವಕ್ಕೆ ಭಾಜನವಾಗಿರುವ ಈ ಪಥ ಸಂಸ್ಥೆ ಸಮಗ್ರ ಭಾರತೀಯರ ಮೇರಾ ದೇಶ್ ಭಾರತ್ ಎನ್ನುವಂತೆ ಮೇರಾ ಬ್ಯಾಂಕ್ ಭಾರತ್ ಆಗಿ ಕಂಗೊಳಿಸುವಂತಾಗಲಿ ನಿತ್ಯಾನಂದ ಡಿ. ಕೋಟ್ಯಾನ್
(ಅಧ್ಯಕ್ಷರು : ಬಿಲ್ಲವರ ಅಸೋಸಿಯೇಶನ್ ಮುಂಬಯಿ). ಚಿತ್ರ-ವರದಿ:ರೋನ್ಸ್ ಬಂಟ್ವಾಳ್