Advertisement

101ರ ಮಾಸದ ಮೆಲುಕು

08:57 PM Oct 25, 2019 | Lakshmi GovindaRaju |

ರಾಜಧಾನಿಯ ಪ್ರಮುಖ ಕಲಾಸಂಸ್ಥೆಯಾದ ಕಲಾ ಕದಂಬ ಆರ್ಟ್‌ ಸೆಂಟರ್‌, ಈಗ ದಶಮಾನೋತ್ಸವದ ಸಂಭ್ರಮದಲ್ಲಿದೆ. ಆ ಪ್ರಯುಕ್ತ, ವರ್ಷಪೂರ್ತಿ ವೈಶಿಷ್ಟ್ಯಪೂರ್ಣ ಕಾರ್ಯಕ್ರಮವನ್ನು “ದಶದಿಶ’ ಶೀರ್ಷಿಕೆಯಲ್ಲಿ ಅಯೋಜಿಸಿದೆ. ನಿರ್ದೇಶಕ ಡಾ.ರಾಧಾಕೃಷ್ಣ ಉರಾಳ ಅವರ ಪರಿಕಲ್ಪನೆಯ “ಮಾಸದ ಮೆಲುಕು’ ಸರಣಿ ಕಾರ್ಯಕ್ರಮವು ಶತಕ ಪೂರೈಸಿದ ಸಡಗರವೂ ಜೊತೆಗೂಡಿದೆ.

Advertisement

ಈ ಸರಣಿಯ 101ನೇ ಕಾರ್ಯಕ್ರಮ ಇದಾಗಿದ್ದು, ಸೆಂಟರ್‌ನ ಕಲಾವಿದರಿಂದ ಗಾಯನ, ನೃತ್ಯ ಹಾಗೂ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಬೆಂಗಳೂರು ಇಂಟರ್‌ನ್ಯಾಷನಲ್‌ ಪಬ್ಲಿಕ್‌ ಸ್ಕೂಲ್‌ನ ಸಂಸ್ಥಾಪಕ ಮುನಿರಾಜು, ಜೈನ್‌ ಹೆರಿಟೇಜ್‌ ಶಾಲೆಯ ಪ್ರಾಂಶುಪಾಲೆ ಅರ್ಚನಾ ವಿಶ್ವನಾಥ್‌, ಸಿದ್ಧಿಗಣಪತಿ ದೇವಾಲಯ ಸಮಿತಿ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ ಪಾಲ್ಗೊಳ್ಳುವರು.

ಎಲ್ಲಿ?: ಸಿದ್ಧಿಗಣಪತಿ ದೇವಾಲಯ, ಕೆಎಸ್‌ಆರ್‌ಟಿಸಿ ಬಡಾವಣೆ, ಚಿಕ್ಕಲ್ಲಸಂದ್ರ
ಯಾವಾಗ?: ಅ.26, ಶನಿವಾರ ಸಂಜೆ 5.30
ಹೆಚ್ಚಿನ ಮಾಹಿತಿಗೆ: 9886066732

Advertisement

Udayavani is now on Telegram. Click here to join our channel and stay updated with the latest news.

Next