Advertisement
ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಉಪ ಚುನಾವಣೆಗೆ ಘೊಷಿಸಿರುವ ಹಿನ್ನಲೆಯಲ್ಲಿ ತಾಲೂಕಿನ ದೊಡ್ಡಮರಳಿ ಸಮೀಪ ಚೆಕ್ ಪೋಸ್ಟ್ ಸ್ಥಾಪಿಸಿದ್ದು ವಾಹನಗಳ ತಪಾಸಣೆ ನಡೆಸುವ ವೇಳೆ ಅನುಮಾನ ಬಂದ ಕಾರನ್ನು ನಿಲ್ಲಿಸಿ ಪರಿಶೀಲನೆ ನಡೆಸಿದಾಗ ಶ್ರೀಗಂದದ ತುಂಡುಗಳು ಪತ್ತೆಯಾಗಿವೆ.
ಚೆಕ್ ಪೋಸ್ಟ್ ಬಳಿ ಆಗಮಿಸಿದ AP-03, CD-3479 ಸಿಲ್ವರ್ ಬಣ್ಣದ ಇಸಿಯೋಸ್ ಕಾರು ಬಂದಿದ್ದು ಈ ವೇಳೆ ಸ್ಥಳದಲ್ಲಿದ್ದ ಭದ್ರತಾ ಸಿಬ್ಬಂದಿ ನಿಲ್ಲಿಸುವಂತೆ ಸೂಚಿಸಿದಾಗ ಕಾರು ನಿಲ್ಲಿಸದೇ ಪೇದೆಯೊಬ್ಬರಿಗೆ ಗುದ್ದಿ ಮುಂದೆ ಹೋಗಿದೆ. ಇದರಿಂದ ಪೊಲೀಸರು ಕಾರನ್ನು ಹಿಂಬಾಲಿಸಿಕೊಂಡ ಹೋದಾಗ ಕಾರು ರಾಷ್ಟ್ರೀಯ ಹೆದ್ದಾರಿಯ ನಂದಿ ಕ್ರಾಸ್ ಕಡೆಗೆ ಅತಿವೇಗದಿಂದ ಹೋಗುವಾಗ ರಸ್ತೆ ವಿಭಜಕಕ್ಕೆ ಡಿಕ್ಕಿ ಸಂಭವಿಸಿದ್ದು ಆಗ ಚಾಲಕ ಕಾರನ್ನು ಅಲ್ಲಿಯೆ ಬಿಟ್ಟು ಪರಾರಿಯಾಗಿದ್ದಾರೆ. 7 ಚೀಲಗಳಲ್ಲಿ ಶ್ರೀಗಂಧ
ಬಳಿಕ ಪೊಲೀಸರು ಕಾರು ಪರಿಶೀಲನೆ ನಡೆಸಿದಾಗ ಅದರಲ್ಲಿ 7 ಚೀಲಗಳಲ್ಲಿ ತುಂಬಿದ್ದ ಬರೋಬರಿ 101 ಕೆಜಿಯಷ್ಟು ತೂಕವಿರುವ ಶ್ರೀಗಂಧ ಮರದ ತುಂಡಗಳು ಪತ್ತೆಯಾಗಿವೆ. ಅದರ ಒಟ್ಟು ಮೌಲ್ಯ 6.40 ಲಕ್ಷ ರೂ ಎಂದು ಅಂದಾಜು ಮಾಡಲಾಗಿದೆ.