Advertisement

ಈ ವರ್ಷ 101 ಉಗ್ರರ ಹತ್ಯೆ

01:18 AM Jun 03, 2019 | Suhan S |

ಶ್ರೀನಗರ: ಪ್ರಸಕ್ತ ವರ್ಷದ ಮೊದಲ ಐದು ತಿಂಗಳಲ್ಲಿ 23 ವಿದೇಶಿಯರು ಸೇರಿದಂತೆ ಸುಮಾರು 101 ಭಯೋತ್ಪಾದಕರನ್ನು ಹತ್ಯೆಗೈಯ್ಯಲಾಗಿದೆ ಎಂದು ಸರ್ಕಾರದ ಅಂಕಿಅಂಶಗಳು ತಿಳಿಸಿವೆ. ಆದರೆ, ಮಾರ್ಚ್‌ನಿಂದ ಈವರೆಗೆ ಅಂದರೆ ಕೇವಲ 3 ತಿಂಗಳ ಅವಧಿಯಲ್ಲಿ 50ಕ್ಕೂ ಹೆಚ್ಚು ಯುವಕರು ಉಗ್ರ ಸಂಘಟನೆಗಳಿಗೆ ಸೇರ್ಪಡೆಯಾಗಿರುವುದು ಭದ್ರತೆ ಪಡೆಗಳಿಗೆ ಹೊಸ ತಲೆನೋವಾಗಿ ಪರಿಣಮಿಸಿದೆ.

Advertisement

ಅಲ್ಖೈದಾದ ಅಂಗಸಂಸ್ಥೆಯಾದ ಅನ್ಸಾರ್‌ ಗಜ್ವತ್‌-ಉಲ್-ಹಿಂದ್‌ ಉಗ್ರ ಸಂಘಟನೆಯ ಕಮಾಂಡರ್‌ ಆಗಿದ್ದ ಝಾಕೀರ್‌ ಮೂಸಾ ಸೇರಿದಂತೆ 78 ಮಂದಿ ಸ್ಥಳೀಯ ಉಗ್ರರು ಹಾಗೂ 23 ಮಂದಿ ವಿದೇಶಿ ಉಗ್ರರನ್ನು ಈ ವರ್ಷ ಸದೆಬಡಿಯಲಾಗಿದೆ. ಮೂಸಾ ಸಾವಿನ ಬಳಿಕ ಹಿಜ್ಬುಲ್ ಮುಜಾಹಿದೀನ್‌ನ ಅನೇಕ ಉಗ್ರರು ಅನ್ಸಾರ್‌ ಗಜ್ವತ್‌-ಉಲ್-ಹಿಂದ್‌ ಸಂಘಟನೆಗೆ ಸೇರ್ಪಡೆಯಾಗಿದ್ದಾರೆ ಎಂದೂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಜತೆಗೆ, ಇತ್ತೀಚಿನ ವರ್ಷಗಳಲ್ಲಿ ಶಸ್ತ್ರ ಕೈಗೆತ್ತಿಕೊಳ್ಳುತ್ತಿರುವ ಯುವಕರ ಸಂಖ್ಯೆಯೂ ಗಣನೀಯವಾಗಿ ಏರಿಕೆಯಾಗಿದೆ ಎಂದು ಭದ್ರತಾ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ. 2014ರಲ್ಲಿ 53 ಯುವಕರು ಉಗ್ರರಾಗಿ ಬದಲಾಗಿದ್ದರೆ, 2015ರಲ್ಲಿ ಇದು 66ಕ್ಕೇರಿಕೆಯಾಗಿತ್ತು.

2016ರಲ್ಲಿ 88 ಹಾಗೂ ಪ್ರಸಕ್ತ ವರ್ಷ ಮೂರೇ ತಿಂಗಳಲ್ಲಿ 50 ಯುವಕರು ಉಗ್ರ ಸಂಘಟನೆಗಳಿಗೆ ಸೇರಿದ್ದಾರೆ. 2010ರಿಂದ 2013ರ ಅವಧಿಯಲ್ಲಿ ಈ ಸಂಖ್ಯೆಗಳು ಕ್ರಮವಾಗಿ 54, 23, 21 ಮತ್ತು 6ಕ್ಕೆ ಇಳಿದಿದ್ದವು. ಈ ಬೆಳವಣಿಗೆಗಳನ್ನು ನೋಡಿದರೆ, ನಾವು ಉಗ್ರ ನಿಗ್ರಹ ನೀತಿಯನ್ನು ಮರುಪರಿ ಶೀಲಿಸಬೇಕಾದ ಅಗತ್ಯವಿದೆ ಎಂದು ಅನಿಸುತ್ತಿದೆ ಎಂದಿದ್ದಾರೆ ಭದ್ರತಾ ಅಧಿಕಾರಿಗಳು.

Advertisement

Udayavani is now on Telegram. Click here to join our channel and stay updated with the latest news.

Next